ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಟ್ಟರೆ ಕಟ್ಟಬೇಕು ಟ್ಯಾಕ್ಸ್! ಹೊಸ ನಿಯಮ
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹೆಚ್ಚು ಹಣ ಜಮಾ ಮಾಡಿದರೆ ಐಟಿ ಇಲಾಖೆ ನೋಟಿಸ್ ಕಳುಹಿಸಬಹುದು. ಯಾವ ಮಟ್ಟದವರೆಗೆ ಹಣ ಹಾಕಬಹುದು, ಯಾವಾಗ ಟ್ಯಾಕ್ಸ್ ಬರುತ್ತೆ ಎಂಬುದನ್ನು ತಿಳಿಯಿರಿ.

- ಸೇವಿಂಗ್ ಖಾತೆಗೆ ವರ್ಷಕ್ಕೆ ₹10 ಲಕ್ಷ ಲಿಮಿಟ್
- ಮಿತಿಮೀರಿ ಡಿಪಾಸಿಟ್ ಮಾಡಿದರೆ ಐಟಿ ನೋಟಿಸ್ ಸಾಧ್ಯತೆ
- ಕರೆಂಟ್ ಅಕೌಂಟ್ ಖಾತೆಗೆ ₹50 ಲಕ್ಷದವರೆಗೆ ಡಿಪಾಸಿಟ್ ಲಿಮಿಟ್
- ನಿಯಮ ಉಲ್ಲಂಘಿಸಿದರೆ 78% ಟ್ಯಾಕ್ಸ್ ಹಾಗೂ ಪೆನಾಲ್ಟಿ
ಬ್ಯಾಂಕ್ ಖಾತೆ (Bank Account) ಹೊಂದಿರುವವರು ಹಣ ಜಮೆ ಮಾಡುವಾಗ ಕೆಲವೊಂದು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಇನ್ನು ಮುಂದೆ ನಗದು ಡಿಪಾಸಿಟ್ (cash deposit) ಮಾಡಿದರೆ ತಕ್ಷಣವೇ ಐಟಿ ಇಲಾಖೆಯ (Income Tax Department) ಕಣ್ಣಿಗೆ ಬಿದ್ದೀತು! ಯಾವಾಗ ಹಣದ ಪ್ರಮಾಣ ಗಡಿದಾಟುತ್ತದೋ, ಅಷ್ಟರಲ್ಲೇ ನಿಮಗೆ ನೋಟಿಸ್ ಬರುವ ಸಾಧ್ಯತೆ ಇದೆ.
ವಿಶೇಷವಾಗಿ ಸೇವಿಂಗ್ ಖಾತೆಗಳಲ್ಲಿ ವರ್ಷಕ್ಕೆ ₹10 ಲಕ್ಷಕ್ಕಿಂತ ಹೆಚ್ಚು ಹಣ ನಗದಾಗಿ ಹಾಕಿದರೆ ಅದು ಐಟಿ ಇಲಾಖೆಗೆ (IT scrutiny) ರಿಪೋರ್ಟ್ ಆಗುತ್ತದೆ. ಇದರಲ್ಲಿ ನೀವು ಆ ಹಣವನ್ನು ಏನಿಂದ ಗಳಿಸಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕು. ಉದಾಹರಣೆಗೆ ಅದು ನಿಮ್ಮ ಸೆಲರಿ ಅಥವಾ ಲೀಗಲ್ ಸೇವಿಂಗ್ ಎಂದು ಸಾಬೀತುಪಡಿಸದಿದ್ದರೆ ಅನ್‌ಎಕ್ಸ್‌ಪ್ಲೈಂಡ್ ಇನ್‌ಕಮ್ (Unexplained Income) ಎಂದು ಪರಿಗಣಿಸಿ ಜೋರಾದ ತೆರಿಗೆ ಹಾಕಲಾಗುತ್ತದೆ.
ಇದನ್ನೂ ಓದಿ: 1ಕ್ಕಿಂತ ಹೆಚ್ಚು ಮನೆ ಬಾಡಿಗೆ ಕೊಟ್ಟಿರೋ ಓನರ್‌ಗಳಿಗೆ ಬಿಗ್ ಅಪ್ಡೇಟ್! ಖಡಕ್ ಸೂಚನೆ
ಇದಕ್ಕೆ ಹೊರತು ನೀವು ಬಿಸಿನೆಸ್ ಓನರ್ ಅಥವಾ ಪ್ರೊಫೆಷನಲ್ ಆಗಿದ್ದರೆ, ನಿಮಗೆ ಕರೆಂಟ್ ಅಕೌಂಟ್ (Current Account) ಇರುತ್ತದೆ. ಈ ಅಕೌಂಟಿಗೆ ವರ್ಷಕ್ಕೆ ₹50 ಲಕ್ಷದವರೆಗೆ ಹಣವನ್ನು ಜಮೆ ಮಾಡಬಹುದಾದ though ಕೆಲವೊಮ್ಮೆ ಲಿಮಿಟ್ ಬ್ಯಾಂಕಿನ (SBI, HDFC) ಬದ್ಧತೆಗೆ ಅನುಗುಣವಾಗಿ ಬದಲಾಗಬಹುದು.
ಹೆಚ್ಚು ಹಣ ವಿತ್‌ಡ್ರಾ ಮಾಡಿದರೆ (Withdrawal), ಇನ್ನೊಂದು ಸೆಕ್ಷನ್ 194N ಪ್ರಕಾರ ನಿಮ್ಮಿಂದ TDS ಕಡಿತ ಮಾಡಲಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ₹1 ಕೋಟಿ ಹಣ ವಿತ್‌ಡ್ರಾ ಮಾಡಿದರೆ 2% TDS ಕಟ್ ಆಗುತ್ತದೆ. ಪಾಸ್ಟ್ 3 ವರ್ಷಗಳಲ್ಲಿ ನೀವು ITR ಫೈಲ್ ಮಾಡದಿದ್ದರೆ ₹20 ಲಕ್ಷ ವಿತ್‌ಡ್ರಾ ಮಾಡಿದರೂ TDS ಬರುತ್ತದೆ.
ಇದನ್ನೂ ಓದಿ: ಇಂತಹ ಎಸ್‌ಬಿಐ, ಕೆನರಾ ಬ್ಯಾಂಕ್ ಖಾತೆಗಳು ರದ್ದು! ಕೇಂದ್ರ ಮತ್ತು ಬ್ಯಾಂಕ್‌ಗಳಿಂದ ಕ್ರಮ
ಇನ್ನು ಸೆಕ್ಷನ್ 269ST ಪ್ರಕಾರ, ₹2 ಲಕ್ಷಕ್ಕಿಂತ ಹೆಚ್ಚು ಹಣವನ್ನು ನಗದ ರೂಪದಲ್ಲಿ ಪಡೆಯಲು ಅವಕಾಶವಿಲ್ಲ. ಈ ನಿಯಮ ಉಲ್ಲಂಘಿಸಿದರೆ ಅದೇ ಹಣದಷ್ಟು ಪೆನಾಲ್ಟಿ ವಿಧಿಸಲಾಗುತ್ತದೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಇದ್ದೋರಿಗೆ ಗುಡ್ ನ್ಯೂಸ್! ನಿಮಗೆ ಈ ಸೌಲಭ್ಯ ಸಂಪೂರ್ಣ ಉಚಿತ
ಡಿಪಾಸಿಟ್‌ಗಳ ಮೇಲೆ ನೇರವಾಗಿ ತೆರಿಗೆ ಇಲ್ಲ, ಆದರೆ ನೀವು ಆ ಹಣದ ಮೂಲವನ್ನೂ ಸಾಬೀತುಪಡಿಸದೇ ಇದ್ದರೆ ಅದನ್ನು ಅನ್‌ಎಕ್ಸ್‌ಪ್ಲೈಂಡ್ ಇನ್‌ಕಮ್ ಎಂದು ಪರಿಗಣಿಸಲಾಗುತ್ತದೆ. ಇದರ ಮೇಲೆ 60% ತೆರಿಗೆ, 25% ಸರ್ಚಾರ್ಜ್ ಮತ್ತು 4% ಸೆಸ್ ಸೇರಿ ಒಟ್ಟು 78%ಕ್ಕಿಂತ ಹೆಚ್ಚು ಟ್ಯಾಕ್ಸ್ ಬೀಳುತ್ತದೆ!
ಇನ್ನು ಮುಂದೆ ಹಣ ಜಮೆ ಮಾಡುವಾಗ ಈ ನಿಯಮಗಳನ್ನು ನೆನಪಿಟ್ಟು, ಸರಿಯಾದ ದಾಖಲೆ (valid documents) ಇಟ್ಟುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಸಿಕ್ಕಾಪಟ್ಟೆ ಪೆನಾಲ್ಟಿ ಎದುರಿಸಬೇಕಾದೀತು.
Cash Deposit Rules, Save Tax Trouble




