ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ! ಮೊಬೈಲ್ ಅಲ್ಲೇ ಚೆಕ್ ಮಾಡಿ
ಎಲ್‌ಪಿಜಿ ಗ್ಯಾಸ್ ಖರೀದಿ ಮಾಡುವವರಿಗೆ ಮತ್ತೆ ಸಬ್ಸಿಡಿ (subsidy) ನೀಡುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ, ಖಾತೆಗೆ (Bank Account) ನೇರವಾಗಿ ವರ್ಗಾವಣೆ ಮಾಡಲಾಗುವುದು ಎನ್ನುವ ಮಾಹಿತಿ ಇದೆ.
ಇದಕ್ಕೆ ಒಂದು ವರ್ಷದಲ್ಲಿ ಪ್ರತಿ ಕುಟುಂಬ 14.2 ಕಿಲೋ ಗ್ರಾಂ ಗಳ 12 ಸಿಲಿಂಡರ್ ಗಳನ್ನು ಬಳಸಿದರೆ ಮಾತ್ರ ಸಬ್ಸಿಡಿ ಪಡೆದುಕೊಳ್ಳಬಹುದು.
ಕೆನರಾ ಬ್ಯಾಂಕ್ ಅಕೌಂಟ್ ಇದ್ದು ಯಾವುದೇ ಸಾಲ ಮಾಡಿದವರಿಗೆ ಇಂದಿನಿಂದಲೇ ಹೊಸ ನಿಯಮ
ಯಾರಿಗೆ ಸಿಗುತ್ತೆ ಬೆನಿಫಿಟ್!
ಎಲ್‌ಪಿಜಿ ಗ್ಯಾಸ್ ಸಿಲೆಂಡರ್ (LPG gas cylinder) ಮೇಲಿನ ಸಬ್ಸಿಡಿ ಯನ್ನು ಫಲಾನುಭವಿಗಳ ಆಧಾರ್ ಲಿಂಕ್ (Aadhaar link) ಮಾಡಿದ ಬ್ಯಾಂಕ್ ಖಾತೆಗೆ (Bank Account) ನೇರವಾಗಿ ಜಮಾ (Money Deposit) ಮಾಡಲಾಗುವುದು
10 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬದವರು ಈ ಪ್ರಯೋಜನ ಪಡೆದುಕೊಳ್ಳಬಹುದು. ದಿ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಆಫ್ ಎಲ್‌ಪಿಜಿ (DBTL) ಅಡಿಯಲ್ಲಿ ಈ ಪ್ರಯೋಜನ ಪಡೆದುಕೊಳ್ಳಬಹುದು.
ಯೋಜನೆಯಡಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಪಡೆದುಕೊಂಡವರು ಸಬ್ಸಿಡಿ ಮೊತ್ತವನ್ನ ನೇರವಾಗಿ ತಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ ಎಂಬುದನ್ನು ನೆನಪಿಡಿ, ಇದನ್ನು ನೀವು ಆನ್ಲೈನ್ ಮೂಲಕವೇ ಪರಿಶೀಲನೆ ಕೂಡ ಮಾಡಿಕೊಳ್ಳಬಹುದು.
ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಹೆಚ್ ಪಿ , ಬಿ ಪಿ ಸಿ ಎಲ್, ಐ ಓ ಸಿ ಎಲ್ ನಲ್ಲಿ ನಿಮ್ಮ ಗ್ಯಾಸ್ ಸಬ್ಸಿಡಿ ಹಣ ನಿಮಗೆ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.
ಮನೆ ಬಾಡಿಗೆಗೆ ಕೊಟ್ಟಿರುವ ಮಾಲೀಕರಿಗೆ ಹೊಸ ನಿಯಮ! ಈ ತಪ್ಪನ್ನು ಎಂದೂ ಮಾಡಬೇಡಿ
ಎಲ್‌ಪಿಜಿ ಸಬ್ಸಿಡಿ ಸ್ಟೇಟಸ್ ತಿಳಿಯುವುದು ಹೇಗೆ?
ಹಳೆಯ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಹೊಸ ಆದೇಶ; ಕೂಡಲೇ ಈ ಕೆಲಸ ಮಾಡಿ
ಇದಕ್ಕಾಗಿ ನಿಮ್ಮ ಬಳಿ ಎಲ್‌ಪಿಜಿ ಐ ಡಿ ಇರಬೇಕು. ಇದನ್ನು ನೀವು ಗ್ಯಾಸ್ ಸಿಲೆಂಡರ್ ಖರೀದಿ ಮಾಡುವಾಗ ಪಡೆದುಕೊಳ್ಳಬಹುದು.
*https://mylpg.in/?utm_source=DH-MoreFromPub&utm_medium=DH-app&utm_campaign=DH ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
*ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಬಲಭಾಗದಲ್ಲಿ ಎಲ್‌ಪಿಜಿ ಐಡಿ ಅನ್ನು ನಮೂದಿಸಬೇಕು.
*ನೀವು ಯಾವ ಸಂಸ್ಥೆಯ ಎಲ್‌ಪಿಜಿ ಗ್ಯಾಸ್ ಬಳಸುತ್ತಿದ್ದೀರಿ ಎಂಬುದರ ಬಗ್ಗೆ ಬಳಕೆದಾರರ ವಿವರವನ್ನು ನೀಡಬೇಕಾಗುತ್ತದೆ.
*ಎಲ್ ಪಿ ಜಿ ಐ ಡಿ 17 (LPG ID) ಅಂಕಿಯ ಐಡಿ ಆಗಿದ್ದು ಇದನ್ನು ನಮೂದಿಸಿ ನೋಂದಾಯಿತ ಮೊಬೈಲ್ (registered mobile number) ಸಂಖ್ಯೆಯ ವಿವರವನ್ನು ನೀಡಬೇಕು.
*ಬಳಿಕ ಕ್ಯಾಪ್ಚ ಕೋಡ್ (captcha code) ನಮೂದಿಸಿ ಪ್ರೊಸೀಡ್ (proceed) ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
*ನಿಮ್ಮ ನೋಂದಾಯಿತ ಮೊಬೈಲ್ಗೆ ಒಂದು ಓಟಿಪಿ (OTP) ಬರುತ್ತದೆ ಮುಂದಿನ ಪುಟದಲ್ಲಿ ಇ-ಮೇಲ್ ಐಡಿ (email ID) ಹಾಗೂ ಪಾಸ್ವರ್ಡ್ ಅನ್ನು ರಚಿಸಿಕೊಳ್ಳಿ.
*ಇಮೇಲ್ ಐಡಿಗೆ ಕ್ರಿಯೇಟ್ ಆಗಿರುವ ಲಿಂಕ್ ಬರುತ್ತದೆ ಆ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಖಾತೆ ಸಕ್ರಿಯೆಗೊಳಿಸಿಕೊಳ್ಳಿ.
* ಬಳಿಕ https://mylpg.in ಲಾಗಿನ್ ಆಗಿ.
*ನಿಮ್ಮ ಬ್ಯಾಂಕ್ ಹಾಗೂ ಆಧಾರ್ ಕಾರ್ಡ್ ಎಲ್ ಪಿ ಜಿ ಖಾತೆಗೆ ಲಿಂಕ್ ಆಗಿದೆಯೇ ಎಂಬುದನ್ನು ನಮೂದಿಸಬೇಕು.
*ಸಿಲಿಂಡರ್ ಬುಕ್ಕಿಂಗ್ ಇತಿಹಾಸ (view cylinder booking history /subsidy transferred) ಮೇಲೆ ಕ್ಲಿಕ್ ಮಾಡಿ ನಿಮ್ಮ ಸಬ್ಸಿಡಿ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.
Check LPG gas subsidy money has been credited to your Bank account