ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ

Bank Loan : ಮನುಷ್ಯ ಎಷ್ಟೇ ಹಣ ದುಡಿದರು ಕೂಡ ಕೆಲವು ಸಂದರ್ಭಗಳಲ್ಲಿ ಬ್ಯಾಂಕ್ನಿಂದ (Bank) ಅಥವಾ ಫೈನಾನ್ಸ್ (Finance ) ಗಳಿಂದ ಹಣವನ್ನು ಸಾಲವಾಗಿ (Loan) ಪಡೆಯುವುದು ಅನಿವಾರ್ಯವಾಗುತ್ತದೆ. ಆದರೆ ಎಷ್ಟೋ ಸಲ ನಾವು ಚೆನ್ನಾಗಿ ದುಡಿದರು ಕೂಡ ನಮಗೆ ಸಾಲ ಸುಲಭವಾಗಿ ಬ್ಯಾಂಕುಗಳಿಂದ ಸಿಗುವುದಿಲ್ಲ. ಇದಕ್ಕೆ ಕಾರಣ ಏನು ಗೊತ್ತಾ?
ಯಾವುದೇ ಬ್ಯಾಂಕ್ ಇರಬಹುದು ಅಥವಾ ಹಣಕಾಸು ಸಂಸ್ಥೆಗಳೇ ಇರಬಹುದು. ಒಬ್ಬ ವ್ಯಕ್ತಿಗೆ ಸಾಲ ಕೊಡಬೇಕು ಅಂದ್ರೆ ಅದರಿಂದ ಅಡಮಾನವಾಗಿ (guarantee) ಯಾವುದಾದರೂ ಆಸ್ತಿ ಪತ್ರ (property papers) ವನ್ನು ಇಟ್ಟುಕೊಳ್ಳುವುದು ಸಹಜ.
ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಇಲ್ಲದೆ ಇದ್ರೆ ಭಾರೀ ದಂಡ!
ಆದರೆ ಇತ್ತೀಚಿನ ದಿನಗಳಲ್ಲಿ ಯಾವ ಅಡಮಾನವು ಇಲ್ಲದೆ ಜನ ಕ್ಷಣಮಾತ್ರದಲ್ಲಿ ಬ್ಯಾಂಕ್ ಗಳಿಂದ ಸಾಲ (Bank Loan) ಪಡೆದುಕೊಳ್ಳಲು ಸಾಧ್ಯವಿದೆ. ಆದರೆ ಇದಕ್ಕೆ ಪ್ರತಿಯೊಬ್ಬರೂ ಮುಖ್ಯವಾಗಿ ಹೊಂದಿರಬೇಕಾದ ಇರುವುದು ಸಿಬಿಲ್ ಸ್ಕೋರ್.
ಏನಿದು ಸಿಬಿಲ್ ಸ್ಕೋರ್? (What is CIBIL score)
ಸಿಬಿಲ್ ಸ್ಕೋರ್ ಪೂರ್ಣಾರ್ಥವನ್ನು ನೋಡುವುದಾದರೆ, ಕ್ರೆಡಿಟ್ ಇನ್ಫಾರ್ಮಶನ್ ಬ್ಯೂರೋ ಇಂಡಿಯಾ ಲಿಮಿಟೆಡ್ (Credit Information Bureau India limited – CIBIL ). ಈ ಸಂಸ್ಥೆ ವ್ಯಕ್ತಿಯ ವೈಯಕ್ತಿಕ ಅಥವಾ ಕಂಪನಿಯ ಮೂಲಕ ಸಾಲ ಪಡೆದುಕೊಳ್ಳುವವರ ಬ್ಯಾಂಕ್ ನ ಕ್ರೆಡಿಟ್ ಸ್ಕೋರ್ ಗಳನ್ನು ನಿರ್ವಹಿಸುತ್ತದೆ.
ಈ ಸಂಸ್ಥೆಯನ್ನು ಹೊರತುಪಡಿಸಿ, ಬೇರೆ ಬೇರೆ ಸಂಸ್ಥೆಗಳು ಕ್ರೆಡಿಟ್ ಸ್ಕೋರ್ ನಿಯಂತ್ರಣವನ್ನು ಮಾಡುತ್ತವೆ, ಅಂತ ಸಂಸ್ಥೆಗಳಲ್ಲಿ ಪ್ರಮುಖ ಸಂಸ್ಥೆಗಳು, ಎಕ್ಸ್ಪರಿಯನ್, ಇಕ್ವಿ ಫ್ಯಾಕ್ಸ್ ಮತ್ತು CIRF ಕ್ರೆಡಿಟ್ ಸ್ಕೂಲ್ ನಿರ್ವಹಣೆಯ ಕಂಪನಿಗಳಾಗಿವೆ.
ಗೂಗಲ್ ಪೇ ಇಂದಲೇ ಪಡೆಯಿರಿ 1 ಲಕ್ಷ ರೂಪಾಯಿವರೆಗೆ ಸಾಲ! ಒಂದೇ ಕ್ಲಿಕ್
ಸಿಬಿಲ್ ಸ್ಕೋರ್ ಯಾಕೆ ಬೇಕು?

ಸಿಬಿಲ್ ಸ್ಕೋರ್ ಕಂಪನಿಯ ಅಥವಾ ವ್ಯಕ್ತಿಯ ಪಾರದರ್ಶಕ (transparency) ವ್ಯವಹಾರವನ್ನು ಬಿಂಬಿಸುತ್ತದೆ. ಒಬ್ಬ ವ್ಯಕ್ತಿ ಅಥವಾ ಕಂಪನಿ ಬ್ಯಾಂಕಿನಲ್ಲಿ ವ್ಯವಹಾರ ಮಾಡುವ ರೀತಿ, ಅವರ ವ್ಯವಹಾರದಲ್ಲಿನ ಪಾರದರ್ಶಕತೆ, ಸಾಲ ಮರುಪಾವತಿ ಮಾಡುವ ಪರಿ ಮೊದಲಾದವುಗಳನ್ನು ಕೇವಲ ಸಿಬಿಲ್ ಸ್ಕೋರ್ ನಿರ್ಧಾರ ಮಾಡುತ್ತದೆ.
ಸಿಬಿಲ್ ಸ್ಕೋರ್ ಕಡಿಮೆ ಇದ್ದರೆ ಬ್ಯಾಂಕ್ ನಿಮ್ಮ ಸಾಲದ ಅರ್ಜಿಯನ್ನು ತಿರಸ್ಕರಿಸಬಹುದು. ಅಥವಾ ಹೆಚ್ಚಿನ ಅಡಮಾನ ಕೇಳಬಹುದು.
ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು ತಲಾ 5,000 ರೂಪಾಯಿ ಪಿಂಚಣಿ
ಸಾಮಾನ್ಯವಾಗಿ 750 ರಿಂದ 900ರ ಒಳಗೆ ಸಿಬಿಲ್ ಸ್ಕೋರ್ ಇದ್ರೆ ಅದನ್ನು ಅತ್ಯುತ್ತಮ ಸಿಬಿಲ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಹಾಗೂ ಹೆಚ್ಚು ಪಾಯಿಂಟ್ಗಳನ್ನು ನಿರ್ವಹಿಸಿರುವ ವ್ಯಕ್ತಿಗೆ ಸುಲಭವಾಗಿ ಸಾಲ ನೀಡಲಾಗುತ್ತದೆ.
650 ರಿಂದ 750ರ ನಡುವೆ ಸಿಬಿಲ್ ಸ್ಕೋರ್ ಇದ್ದರೆ ಅದನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. 550 ರಿಂದ 650 ರವರೆಗಿನ ಸಿಬಿಲ್ ಪಾಯಿಂಟ್ ಸರಾಸರಿ ಎಂದು ಗುರುತಿಸಲಾಗುತ್ತದೆ. ಹಾಗೆ 300 ರಿಂದ 500 ರ ಒಳಗಿನ ಸಿಬಿಲ್ ಸ್ಕೋರ್ ಕಳಪೆ ಎಂದು ಪರಿಗಣಿಸಲಾಗುತ್ತದೆ. ಹಾಗೂ ಇಂತಹ ಸ್ಕೋರ್ ಹೊಂದಿರುವವರಿಗೆ ಬ್ಯಾಂಕ್ನಿಂದ ಸಾಲ ಸಿಗುವುದು ಬಹಳ ಕಷ್ಟ.
ಸಿಬಿಲ್ ಸ್ಕೋರ್ ಇಳಿಕೆಗೆ ಕಾರಣ?

ಸಿಬಿಲ್ ಸ್ಕೋರ್ ಉತ್ತಮವಾಗಿಸಿಕೊಳ್ಳಲು ನೀವು ಬ್ಯಾಂಕ್ ವ್ಯವಹಾರವನ್ನು ಸರಿಯಾಗಿ ಮಾಡಬೇಕು, ಬ್ಯಾಂಕ್ನಿಂದ ಸಾಲ ಪಡೆದುಕೊಂಡಿದ್ದರೆ, ಪ್ರತಿ ತಿಂಗಳು EMI ಮಿಸ್ ಮಾಡದೆ ಪಾವತಿ ಮಾಡಬೇಕು.
ನಿಮ್ಮ ಬ್ಯಾಂಕ್ ಖಾತೆ ನೀವು ಬಳಸದೇ ಇದ್ದರೆ ಆ ಹಣ ಯಾರ ಪಾಲಾಗುತ್ತೆ ಗೊತ್ತಾ?
ಡ್ಯೂ ಡೇಟ್ (loan due date) ಮುಗಿಯೋದ್ರೊಳಗೆ ಕ್ರೆಡಿಟ್ ಕಾರ್ಡ್ ಸಾಲವನ್ನು ತೀರಿಸಬೇಕು. ಈ ರೀತಿ ನಿರ್ವಹಣೆ ಮಾಡಿಕೊಂಡು ಬಂದರೆ ಸುಲಭವಾಗಿ ಕ್ರೆಡಿಟ್ ಸ್ಕೋರ್ ಉತ್ತಮವಾಗುತ್ತದೆ ಹಾಗೂ ಬ್ಯಾಂಕ್ನಿಂದ ತಕ್ಷಣ ಸಾಲವು ಸಿಗುತ್ತದೆ.
Check whether you will get a bank loan or not on your mobile



