ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ನಿಜಕ್ಕೂ ಪಾಲಿದೆಯಾ? ಜಾರಿಗೆ ಬಂತು ಹೊಸ ರೂಲ್ಸ್

ಹಿಂದೂ ಉತ್ತರಾಧಿಕಾರಿ ಕಾಯ್ದೆ (Hindu Succession Act) ಅಡಿಯಲ್ಲಿ ಈಗ ಗಂಡು ಮಕ್ಕಳಿಗೆ ಮಾತ್ರವಲ್ಲದೆ, ಹೆಣ್ಣು ಮಕ್ಕಳಿಗೂ (Daughters) ಕೂಡ ಅಪ್ಪನ ಆಸ್ತಿಯಲ್ಲಿ (father's property) ಪಾಲು ಸಿಗಬೇಕು ಎನ್ನುವ ನಿಯಮ ಜಾರಿಗೆ ಬಂದಿದೆ.

ಆಸ್ತಿ ವಿಚಾರಕ್ಕೆ (property) ಸಂಬಂಧಪಟ್ಟ ಹಾಗೆ ನಮ್ಮ ದೇಶದಲ್ಲಿ ಸಾಕಷ್ಟು ಕಾನೂನುಗಳು (laws) ಇವೆ. ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಕಾನೂನುಗಳು ಅನ್ವಯವಾಗುತ್ತದೆ.

ಹಿಂದೂ ಉತ್ತರಾಧಿಕಾರಿ ಕಾಯ್ದೆ (Hindu Succession Act) ಅಡಿಯಲ್ಲಿ ಈಗ ಗಂಡು ಮಕ್ಕಳಿಗೆ ಮಾತ್ರವಲ್ಲದೆ, ಹೆಣ್ಣು ಮಕ್ಕಳಿಗೂ (Daughters) ಕೂಡ ಅಪ್ಪನ ಆಸ್ತಿಯಲ್ಲಿ (father’s property) ಪಾಲು ಸಿಗಬೇಕು ಎನ್ನುವ ನಿಯಮ ಜಾರಿಗೆ ಬಂದಿದೆ.

ದಿನಕ್ಕೆ 35 ಲೀಟರ್ ಹಾಲು ಕೊಡೋ ಈ ಎಮ್ಮೆ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ! ಕೈತುಂಬಾ ಆದಾಯ

ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ನಿಜಕ್ಕೂ ಪಾಲಿದೆಯಾ? ಜಾರಿಗೆ ಬಂತು ಹೊಸ ರೂಲ್ಸ್ - Kannada News

ಯಾವ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಪಾಲಿಲ್ಲ ಗೊತ್ತೇ?

ಅಪ್ಪನ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಸಿಗುವಷ್ಟು ಸುಲಭವಾಗಿ ಹೆಣ್ಣು ಮಕ್ಕಳಿಗೆ ಪಾಲು ಸಿಗುವುದಿಲ್ಲ. ಕೆಲವು ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ ಪಾಲು ಸಿಗದೆ ಇರಬಹುದು. 2005 ಕ್ಕು ಮೊದಲು ತಂದೆಯ ಆಸ್ತಿಯಲ್ಲಿ ಹೆಣ್ಣು ಮಗುವಿಗೆ ಇರುವ ಹಕ್ಕಿನ ಬಗ್ಗೆ ಬೇರೆಯದೇ ಕಾನೂನು ಜಾರಿಯಲ್ಲಿತ್ತು.

ಆದರೆ ಬಳಿಕ ಹಿಂದೂ ಉತ್ತರಾಧಿಕಾರಿ ಕಾಯ್ದೆ ತಿದ್ದುಪಡಿ ಮಾಡಿ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾನವಾದ ಪಾಲು ಕೊಡಬೇಕು ಎನ್ನುವ ರೂಲ್ಸ್ ಜಾರಿಗೆ ತರಲಾಯಿತು.

2005ರ ಬಳಿಕ ಗಂಡು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಹಕ್ಕಿದೆಯೋ ಹೆಣ್ಣು ಮಗುವಿಗೂ ಕೂಡ ಅದೇ ರೀತಿಯ ಸಮಾನವಾದ ವಿಭಜನೆ (equal divide) ಆಗಬೇಕು ಎನ್ನುವ ನಿಯಮ ಜಾರಿಗೆ ತರಲಾಯಿತು.

ಬ್ಯಾಂಕ್ ಖಾತೆಯಲ್ಲಿ 1 ರೂಪಾಯಿ ಇಲ್ಲದೆ ಇದ್ರೂ, 15 ಸಾವಿರವರೆಗೆ ಗೂಗಲ್ ಪೇ ಮಾಡಬಹುದು! ಹೇಗೆ ಗೊತ್ತಾ?

ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಇದೆಯೇ?

property New Rulesಪಿತ್ರಾರ್ಜಿತ ಆಸ್ತಿಯಲ್ಲಿ (Inherited property) ಗಂಡು ಮಗುವಿಗೆ ಇರುವಷ್ಟೆ ಹಕ್ಕು ಹೆಣ್ಣು ಮಕ್ಕಳಿಗೂ ಕೂಡ ಇದೆ, ಅಂದರೆ ಪಿತ್ರಾರ್ಜಿತ ಆಸ್ತಿ ವಿಭಜನೆ ಆದಾಗ ಹೆಣ್ಣು ಮಗುವಿಗೆ ಸಮಾನವಾದ ಪಾಲು ಕೊಡಬೇಕು

ಆದರೆ ಅಪ್ಪ ಸ್ವಂತವಾಗಿ ದುಡಿದ ಸ್ವಯಾರ್ಜಿತ ಆಸ್ತಿ (Freehold property) ಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಎನ್ನುವ ವಿಚಾರ ಬಂದಾಗ ಮತ್ತೆ ಒಂದಷ್ಟು ಗೊಂದಲಗಳು ಉಂಟಾಗುತ್ತವೆ.

ಯಾಕೆಂದರೆ ಇದು ಅಪ್ಪ ಸ್ವಂತವಾಗಿ ದುಡಿದ ಆಸ್ತಿ ಇದರಲ್ಲಿ ಯಾರಿಗೆ ಪಾಲು ಕೊಡಬೇಕು ಎಂದು ಅಪ್ಪ ನಿರ್ಧರಿಸಬಹುದು. ಅಂದ್ರೆ ತಂದೆ ಗಂಡು ಮಗುವಿಗೆ ಹೆಚ್ಚಿನ ಆಸ್ತಿಯನ್ನು ಹಾಗೂ ಹೆಣ್ಣು ಮಗುವಿಗೆ ಕಡಿಮೆ ಆಸ್ತಿಯನ್ನು ಕೊಡುವ ಹಕ್ಕು ಇರುತ್ತದೆ. ಹಾಗಾಗಿ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಸಮಾನವಾದ ಪಾಲನ್ನು ನಿರೀಕ್ಷಿಸುವಂತಿಲ್ಲ.

ಈ ಕೋಳಿ ಸಾಕಿದ್ರೆ ತಿಂಗಳಿಗೆ ಲಕ್ಷ ಆದಾಯ ಫಿಕ್ಸ್! ಈ ಕೋಳಿಯ ಒಂದು ಮೊಟ್ಟೆ 100 ರೂಪಾಯಿ

ಮದುವೆಯಾದ ನಂತರವೂ ಇದೆ ಪಾಲು

ಅದೆಷ್ಟೋ ಮನೆಗಳಲ್ಲಿ ಇಂದಿಗೂ ಇದನ್ನ ಬಲವಾಗಿ ನಂಬುತ್ತಾರೆ, ಒಂದು ಹೆಣ್ಣು ಮಗುವಿಗೆ ಮದುವೆ ಮಾಡಿಕೊಟ್ಟ ನಂತರ ಆಕೆಗೆ ಅಪ್ಪನ ಆಸ್ತಿಯಲ್ಲಿ ಪಾಲು ಇಲ್ಲ ಎಂದೇ ಜನ ಭಾವಿಸುತ್ತಾರೆ. ಆದರೆ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ ಹೆಣ್ಣು ಮಕ್ಕಳು ಮದುವೆ ಆದರು ಕೂಡ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನವಾದ ಪಾಲನ್ನು ಹೊಂದಿರುತ್ತಾರೆ.

ಒಂದು ವೇಳೆ ಈ ಪಾಲನ್ನು ಆಕೆಗೆ ಕೊಡಲು ನಿರಾಕರಿಸಿದರೆ ಆ ಹೆಣ್ಣು ಮಗು ಕಾನೂನು ಮೊರೆ ಹೋಗಬಹುದು. ಕಾನೂನುಬದ್ಧವಾಗಿಯೇ ತನ್ನ ಪಾಲಿನ ಆಸ್ತಿಯನ್ನು ಪಡೆಯಬಹುದು.

ಹಾಗಾಗಿ ಯಾವ ತಂದೆ ಅಥವಾ ಸಹೋದರರು ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಸಹೋದರಿಗೆ ಸಮಾನ ಪಾಲು ಕೊಡಲು ನಿರಾಕರಿಸುವಂತಿಲ್ಲ. ಒಂದು ವೇಳೆ ತಂದೆ ಉಯಿಲು (will) ಬರೆಯದೇ ಮರಣ ಹೊಂದಿದರು ಹೆಣ್ಣು ಮಕ್ಕಳು ಪಾಲು ಪಡೆಯಬಹುದು. ಅಂತೆಯೇ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಹಕ್ಕನ್ನು ನಿರೀಕ್ಷೆ ಮಾಡುವಂತಿಲ್ಲ.

Do girls have a share in father’s property, Know what Law rules Says

Follow us On

FaceBook Google News

Do girls have a share in father's property, Know what Law rules Says