ದಿನಕ್ಕೆ 35 ಲೀಟರ್ ಹಾಲು ಕೊಡೋ ಈ ಎಮ್ಮೆ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ! ಕೈತುಂಬಾ ಆದಾಯ

ಸಾಕಷ್ಟು ರೈತರು (Farmers) ತಮ್ಮ ತೋಟದಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಇದರ ಜೊತೆಗೆ ಪಶು ಸಂಗೋಪನೆಯನ್ನು (dairy farming) ಕೂಡ ಮೆಚ್ಚಿಕೊಂಡಿರುವವರು ಸಾಕಷ್ಟು ಜನ ಇದ್ದಾರೆ

ನಮ್ಮ ದೇಶದಲ್ಲಿ ಕೃಷಿ (Agriculture) ಚಟುವಟಿಕೆಗೆ ಹೆಚ್ಚಿನ ಮಹತ್ವ ಇದೆ, ಸಾಕಷ್ಟು ರೈತರು (Farmers) ತಮ್ಮ ತೋಟದಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಇದರ ಜೊತೆಗೆ ಪಶು ಸಂಗೋಪನೆಯನ್ನು (dairy farming) ಕೂಡ ಮೆಚ್ಚಿಕೊಂಡಿರುವವರು ಸಾಕಷ್ಟು ಜನ ಇದ್ದಾರೆ

ಇದಕ್ಕೆ ಮುಖ್ಯ ಕಾರಣ ಪಶು ಸಂಗೋಪನೆಯಿಂದ ತೋಟಕ್ಕೆ ಗೊಬ್ಬರ ಸಿಗುತ್ತದೆ, ಜೊತೆಗೆ ವಾರ್ಷಿಕ ಬೆಳೆಯ ಜೊತೆಗೆ ತಿಂಗಳಿಗೆ ಪಶುಪಾಲನೆಯಿಂದ ಒಂದಿಷ್ಟು ಹಣ ಸಂಪಾದನೆ ಮಾಡಬಹುದು.

ಈ ಪಶುಪಾಲನೆ ಕೇವಲ ಬೇಸಿಕ್ ಹಣ ಗಳಿಕೆಗಾಗಿ ಮಾತ್ರ ಈ ಹಿಂದೆ ಮಾಡಲಾಗುತ್ತಿತ್ತು. ಆದರೆ ಈಗ ನೀವು ಪಶುಪಾಲನೆ ಅಥವಾ ಪಶು ಸಂಗೋಪನೆ ಆರಂಭಿಸಿದರೆ ಲಕ್ಷಗಟ್ಟಲೆ ಹಣವನ್ನು ಪ್ರತಿ ತಿಂಗಳು ಗಳಿಸಲು (Earning) ಸಾಧ್ಯವಿದೆ

ದಿನಕ್ಕೆ 35 ಲೀಟರ್ ಹಾಲು ಕೊಡೋ ಈ ಎಮ್ಮೆ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ! ಕೈತುಂಬಾ ಆದಾಯ - Kannada News

ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ನೀವು ಯಾವ ಸ್ಥತಳಿಯ ಹಸು ಅಥವಾ ಎಮ್ಮೆಯನ್ನು ಆಯ್ದುಕೊಳ್ಳುತ್ತೀರಿ ಎಂಬುದು.

ಬ್ಯಾಂಕ್ ಖಾತೆಯಲ್ಲಿ 1 ರೂಪಾಯಿ ಇಲ್ಲದೆ ಇದ್ರೂ, 15 ಸಾವಿರವರೆಗೆ ಗೂಗಲ್ ಪೇ ಮಾಡಬಹುದು! ಹೇಗೆ ಗೊತ್ತಾ?

ಈ ಎಮ್ಮೆ ತಳಿಯ ಬಗ್ಗೆ ಗೊತ್ತಾ?

ಹಸುವಿನ (cow milk) ಹಾಲಿಗಿಂತಲೂ ಎಮ್ಮೆ ಹಾಲಿಗೆ (buffalo milk) ಹೆಚ್ಚಿನ ಬೇಡಿಕೆ ಇದೆ, ಯಾಕೆಂದರೆ ಹಸುವಿನ ಹಾಲಿಗಿಂತ ಹೆಮ್ಮೆ ಹಾಲು, ತುಸು ದಪ್ಪವಾಗಿರುತ್ತದೆ, ಜೊತೆಗೆ ಇದರಲ್ಲಿ ಪೋಷಕಾಂಶಗಳು ಹೆಚ್ಚಾಗಿರುತ್ತವೆ ಎಂದು ಹೇಳಲಾಗುತ್ತೆ.

ಇನ್ನು ನಿಮಗೆ ಎಲ್ಲಾ ರೀತಿಯಲ್ಲಿಯೂ ಆದಾಯ ತಂದು ಕೊಡುವಂತಹ ಹೆಮ್ಮೆ ತಳಿ ಯಾವುದು ಎಂದರೆ ಅದುವೇ ಜಾಫ್ರಭಾದಿ. ಸದ್ಯ ನಮ್ಮ ದೇಶದಲ್ಲಿ ಮುರ್ರಾ ಮತ್ತು ಜಾಫ್ರಾಬಾದಿ ಎಮ್ಮೆ (jafrabadi buffalo) ತಳಿಗಳು ಹೆಚ್ಚು ಫೇಮಸ್ ಆಗಿವೆ.

ಆಫ್ರಿಕನ್ ಮೂಲದ ಜಾಫ್ರಾಬಾದಿ!

ಜಾಫ್ರಾಬಾದಿ ಎಮ್ಮೆ ತಳಿಯನ್ನು ನೀವು ದೇಶದ ಎಲ್ಲಾ ಭಾಗದಲ್ಲಿಯೂ ಕಾಣಲು ಸಾಧ್ಯವಿಲ್ಲ ಈ ವಿಶೇಷವಾಗಿರುವ ತಳಿಯ ಹೆಮ್ಮೆ ಲಭ್ಯವಿರುವುದು ಗುಜರಾತ್ (Gujarat) ನ ಸೌರಾಷ್ಟ್ರ ಭಾಗದಲ್ಲಿ ಮಾತ್ರ.

ಇದೇ ರೀತಿಯ ತಳಿಗಳನ್ನು ಆಫ್ರಿಕಾದಲ್ಲಿಯೂ (Africa) ಕೂಡ ಕಾಣಬಹುದು ಎನ್ನಲಾಗಿದೆ, ಅಂದ್ರೆ ಪ್ರಪಂಚಾದ್ಯಂತ ಒಂದೆರಡು ಭಾಗಗಳಲ್ಲಿ ಮಾತ್ರ ಜಾಫ್ರಾಬಾದಿ ಲಭ್ಯವಿದ್ದು ಅದರಲ್ಲಿ ಭಾರತ ಕೂಡ ಒಂದು ಎನ್ನುವುದು ಹೆಮ್ಮೆಯ ವಿಚಾರ. ಈ ತಳಿಯ ಎಮ್ಮೆ ಸಾಕಾಣಿಕೆ ಮಾಡಿದರೆ ಸಾಕಷ್ಟು ಹಣ ಗಳಿಸಬಹುದು.

ಈ ಕೋಳಿ ಸಾಕಿದ್ರೆ ತಿಂಗಳಿಗೆ ಲಕ್ಷ ಆದಾಯ ಫಿಕ್ಸ್! ಈ ಕೋಳಿಯ ಒಂದು ಮೊಟ್ಟೆ 100 ರೂಪಾಯಿ

ದಿನಕ್ಕೆ 35 ಲೀಟರ್ ಕೊಡುವ ಜಾಫ್ರಾಬಾದಿ!

Buffalo Farming Businessಸಾಮಾನ್ಯವಾಗಿ ಹಸು ಅಥವಾ ಎಮ್ಮೆ ದಿನಕ್ಕೆ 10 ಲೀಟರ್ ವರೆಗೆ ಹಾಲು ಕೊಟ್ಟರೆ ದೊಡ್ಡ ವಿಷಯ! ಆದರೆ ಜಾಫ್ರಾಬಾದಿ ತಳಿ ದಿನಕ್ಕೆ 35 ಲೀಟರ್ ವರೆಗೂ ಹಾಲನ್ನು ಕೊಡಬಲ್ಲದು. ಗರ್ಭಿಣಿ ಆಗಿರುವ ಎಮ್ಮೆ ಕೂಡ ದಿನಕ್ಕೆ 10 ಲೀಟರ್ ವರೆಗೆ ಹಾಲನ್ನು ನೀಡುತ್ತದೆ.

ಇನ್ನು ಈ ತಳಿಯ ಎಮ್ಮೆಯ ಹಾಲಿಗೆ ಬೇಡಿಕೆ ಕೂಡ ಹೆಚ್ಚಾಗಿದ್ದು ಪ್ರತಿ ಲೀಟರ್ಗೆ 80 ರಿಂದ 100 ರೂಪಾಯಿಗಳ ವರೆಗೂ ಮಾರಾಟ ಮಾಡಬಹುದು. ಅಷ್ಟೇ ಅಲ್ದೆ ಈ ಹಾಲುಗಳಿಂದ ತಯಾರಿಸಿದ ಬೆಣ್ಣೆ, (butter and ghee) ತುಪ್ಪಗಳಿಗೂ ಕೂಡ ಹೆಚ್ಚು ಬೇಡಿಕೆ ಇದೆ.

ನೋಡಲು ವಿಶೇಷವಾಗಿರುವ ಜಾಫ್ರಾಬಾದಿ!

ಜಾಫ್ರಾಭಾದಿ ಎಮ್ಮೆ ನೋಡಲು ಬಹಳ ವಿಭಿನ್ನವಾಗಿರುತ್ತದೆ, ಅದರ ಕೊಡುಗಳು ಸುರುಳಿ ಆಕಾರದಲ್ಲಿ ಸುತ್ತಿಕೊಂಡು ಮುಂಭಾಗದಲ್ಲಿ ಬಾಗಿರುತ್ತದೆ. ಇನ್ನು ಈ ಎಮ್ಮೆಗಳು ನೋಡಲು ಬಹಳ ದಷ್ಟಪುಷ್ಟವಾಗಿದ್ದು ಕಪ್ಪು ಬಣ್ಣದಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಯಾವುದೇ ವಾತಾವರಣಕ್ಕೂ ಹೊಂದಿಕೊಳ್ಳುವಂತಹ ಶಕ್ತಿ ಇರುವ ಜಾಫ್ರಾಬದಿ ತಳಿಯನ್ನು ನೀವು ದೇಶದ ಯಾವುದೇ ಭಾಗದಲ್ಲಿಯೂ ಕೂಡ ಸಾಕಬಹುದು.

ಬ್ಯಾಂಕ್ ನಲ್ಲಿ 50,000 ಕ್ಕಿಂತ ಹೆಚ್ಚಿನ ಹಣದ ವಹಿವಾಟು ಮಾಡುವ ಎಲ್ಲರಿಗೂ ಹೊಸ ರೂಲ್ಸ್

ಜಾಫ್ರಾಭಾದಿ ತಳಿಯ ಬೆಲೆ!

ಈ ತಳಿಯ ಎಮ್ಮೆಗೆ 70 ರಿಂದ ಒಂದು ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ಬೆಲೆ ಇದೆ. ಗುಜರಾತ್ ಸೌರಾಷ್ಟ್ರ ಭಾಗದಲ್ಲಿ ಮಾತ್ರ ಈ ಎಮ್ಮೆ ತಳಿಯನ್ನು ಖರೀದಿಸಲು ಸಾಧ್ಯ. ಉತ್ತಮವಾಗಿರುವ ಹಾಗೂ ಒರಿಜಿನಲ್ ಜಾಫ್ರಾಬಾದಿ ಎಮ್ಮೆ ತಳಿಯನ್ನು ಖರೀದಿಸುವ ಮುನ್ನ ಅದರ ಬಗ್ಗೆ ಚೆನ್ನಾಗಿ ಗೊತ್ತಿರುವ ತಜ್ಞರ ಸಲಹೆ ಪಡೆದುಕೊಳ್ಳಿ

ಅನುಭವಿ ವ್ಯಾಪಾರಸ್ಥರ ಬಳಿ ಮಾತ್ರ ಖರೀದಿ ಮಾಡಿ ಇಲ್ಲವಾದರೆ ನಕಲಿ ಜಾಫ್ರಾಬಾದಿ ತಳಿ ನಿಮಗೆ ಸಿಗಬಹುದು. ಹಾಗಾಗಿ ಈ ಎಮ್ಮೆ ಖರೀದಿ ಮಾಡಬೇಕಾದರೆ ಸಾಕಷ್ಟು ಜಾಗ್ರತೆವಹಿಸಿ. ಜಾಫ್ರಾಬಾದಿ ಎಮ್ಮೆ ಖರೀದಿ ಮಾಡಿ, ಅದರ ಹಾಲು ಮಾರಾಟ ಮಾಡುವ ಉದ್ಯಮ ಆರಂಭಿಸಿದರೆ ಪ್ರತಿದಿನ ನೂರಾರು ಲೀಟರ್ ಹಾಲು ಮಾರಾಟ ಮಾಡಬಹುದು ಹಾಗೂ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಗಳ ಸಂಪಾದನೆ ಮಾಡಬಹುದು.

This buffalo that gives 35 liters of milk per day can earn lakhs of money

Follow us On

FaceBook Google News

This buffalo that gives 35 liters of milk per day can earn lakhs of money