ರೈತರಿಗೆ ಸಿಹಿ ಸುದ್ದಿ! ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ

ರೈತರು ಬ್ಯಾಂಕುಗಳಲ್ಲಿ ಸಾಲವನ್ನು (Bank Loan) ಪಡೆಯುತ್ತಾರೆ. ಈ ರೀತಿ ಸಾಲ ಪಡೆಯುವ ರೈತರಿಗೆ ಸರ್ಕಾರ ಸಬ್ಸಿಡಿಯನ್ನು ನೀಡುತ್ತದೆ.

Bengaluru, Karnataka, India
Edited By: Satish Raj Goravigere

ಸರ್ಕಾರ ಸಾರ್ವಜನಿಕ ಉದ್ದಾರಕ್ಕಾಗಿ ಬೇರೆ ಬೇರೆ ರೀತಿಯ ಉಪಕ್ರಮಗಳನ್ನು ಕೈಗೊಳ್ಳುತ್ತದೆ. ಅವುಗಳಲ್ಲಿ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಕೂಡ ಸೇರಿಸಲಾಗುತ್ತದೆ.

ದೇಶದಲ್ಲಿ ಮಹಿಳಾ ಸಬಲೀಕರಣ (women empowerment) ಎಷ್ಟು ಮುಖ್ಯವೋ ಅಷ್ಟೇ ರೈತರ ಸಬಲೀಕರಣ (farmers empowerment) ಕೂಡ ಬಹಳ ಮುಖ್ಯವಾಗಿರುವ ವಿಚಾರ. ರೈತರ ಕೃಷಿ ಚಟುವಟಿಕೆಗಳಿಗೆ (agriculture activities) ಸರಿಯಾದ ಸೌಲಭ್ಯ ದೊರೆತರೆ ಮಾತ್ರ ರೈತ ಕೃಷಿ ಮಾಡಿ ಕೊಂಡು ಜೀವನ ನಡೆಸಲು ಸಾಧ್ಯ.

PM Kisan Yojana New Update on Deposit of Money to Bank Account

ಮಹಿಳೆಯರಿಗೆ ಸಿಗಲಿದೆ ಯಾವುದೇ ಬಡ್ಡಿ ಇಲ್ಲದೆ 5 ಲಕ್ಷ ತನಕ ಸಾಲ! ಅರ್ಜಿ ಸಲ್ಲಿಸಿ

ಹೌದು, ಭಾರತದಲ್ಲಿ ಸುಮಾರು 75% ನಷ್ಟು ಜನ ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂಥವರ ಜೀವನಕ್ಕೆ ಅನುಕೂಲ ಆಗಲು ಕೇಂದ್ರ ಸರಕಾರ (Central government) ಪ್ರಮುಖ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಕೂಡ ಒಂದು.

ಪ್ರಧಾನ್ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (Pradhanmantri krishi sinchai Yojana)

ಕೃಷಿ ಚಟುವಟಿಕೆಗಾಗಿ, ಸಾಮಾನ್ಯವಾಗಿ ರೈತರು ಬ್ಯಾಂಕುಗಳಲ್ಲಿ ಸಾಲವನ್ನು (Bank Loan) ಪಡೆಯುತ್ತಾರೆ. ಈ ರೀತಿ ಸಾಲ ಪಡೆಯುವ ರೈತರಿಗೆ ಸರ್ಕಾರ ಸಬ್ಸಿಡಿಯನ್ನು ನೀಡುತ್ತದೆ.

ಇದರಿಂದಾಗಿ ತೆಗೆದುಕೊಂಡು ಸಾಲದ (Subsidy Loan) ಸಂಪೂರ್ಣ ಮೊತ್ತವನ್ನು ರೈತರು ಪಾವತಿಸುವ ಅಗತ್ಯ ಇರುವುದಿಲ್ಲ. ಇದೀಗ ಜಾರಿಗೆ ಬಂದಿರುವ ಕೃಷಿ ಸಿಂಚಾಯಿ ಯೋಜನೆಯ ಅಡಿಯಲ್ಲಿ, ಕೃಷಿ ಹೊಂಡ ನಿರ್ಮಾಣ, ಸೂಕ್ಷ್ಮ ನೀರಾವರಿ ಘಟಕ ಸ್ಥಾಪನೆ, ಸ್ಪಿಂಕ್ಲರ್ ಗಳು ಮೊದಲಾದವುಗಳನ್ನು ಕೃಷಿ ಭೂಮಿಗೆ ಅಳವಡಿಸಿಕೊಳ್ಳಲು ಸರ್ಕಾರದಿಂದ ಶೇಕಡ 90% ವರೆಗೆ ಸಬ್ಸಿಡಿ ಪಡೆಯಬಹುದು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ 90% ನಷ್ಟು ಸಬ್ಸಿಡಿ ಸಿಗುತ್ತದೆ. ಹಾಗೂ ಸಾಮಾನ್ಯ ರೈತರಿಗೆ 75% ನಷ್ಟು ಸಬ್ಸಿಡಿ (subsidy) ಪಡೆಯಬಹುದು.

ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ! ಸಿಮೆಂಟ್ ಹಾಗೂ ಕಬ್ಬಿಣದ ಬೆಲೆ ಇಳಿಕೆ

krishi sinchai Yojanaಸಣ್ಣ ಮತ್ತು ಮಧ್ಯಮ ವರ್ಗದ ರೈತರು ಈ ಯೋಜನೆಗೆ ಅರ್ಹರು. ಈ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಪಡೆದುಕೊಳ್ಳಲು ರೈತರು ಕನಿಷ್ಠ ಎರಡು ಹೆಕ್ಟೇರ್ ಜಮೀನು ಹೊಂದಿರುವುದು ಕಡ್ಡಾಯ.

2023 24ನೇ ಸಾಲಿನಲ್ಲಿ ಸರ್ಕಾರದ ಬೇರೆ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದರೆ ಅಂತಹ ರೈತರಿಗೆ ಸಬ್ಸಿಡಿ ಸಿಗುವುದಿಲ್ಲ. ಈಗಾಗಲೇ ಸಾಲ ತೆಗೆದುಕೊಂಡಿರುವ ರೈತರು ಕೂಡ ಮತ್ತೆ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಬಹುದು.

ಮಹಿಳೆಯರಿಗೆ ಪ್ರತಿ ತಿಂಗಳು 1000 ರೂಪಾಯಿ, ಮೋದಿ ಸರ್ಕಾರದಿಂದ ಹೊಸ ಯೋಜನೆ

ಅರ್ಜಿ ಸಲ್ಲಿಸುವುದು ಹೇಗೆ?

ಕೃಷಿ ಸಿಂಚಾಯಿ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮತ್ತು ನೀರಾವರಿ ಘಟಕ ಸ್ಥಾಪನೆಗೆ ಸಾಲ ಸೌಲಭ್ಯ ಪಡೆದುಕೊಂಡ ಕೃಷಿಕರು ಸಹಾಯಧನವನ್ನು ಪಡೆದುಕೊಳ್ಳಬಹುದು.

ಇದಕ್ಕಾಗಿ ಹತ್ತಿರದ ತಾಲೂಕು ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕರು ಅಥವಾ ಅಧಿಕಾರಿಗಳನ್ನು ಭೇಟಿ ಮಾಡಬಹುದು. ಅಲ್ಲಿ ನಿಮ್ಮ ಅಗತ್ಯ ಇರುವ ದಾಖಲೆಗಳನ್ನು ನೀಡಿ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಬಹುದು.

ಮೊದಲು ಬಂದವರಿಗೆ ಮೊದಲ ಆದ್ಯತೆ ಎನ್ನುವಂತೆ, ನೀವು ಬೇಗ ಅರ್ಜಿ ಸಲ್ಲಿಸಿದರೆ ಬೇಗ ಸಬ್ಸಿಡಿ ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಇನ್ಮುಂದೆ ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚಿಗೆ ಹಣ ಇಡುವಂತಿಲ್ಲ! ಹೊಸ ರೂಲ್ಸ್

Farmers will get up to 90 Percent subsidy through this scheme