ಕೇವಲ 500 ರೂ.ಗೆ ಗ್ಯಾಸ್ ಸಿಲಿಂಡರ್, ಉಚಿತ ವಿದ್ಯುತ್! ಮತ್ತೆರಡು ಗ್ಯಾರಂಟಿ ಯೋಜನೆ
ಕೇವಲ 500 ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್, ಉಚಿತ ವಿದ್ಯುತ್! ಮತ್ತೆರಡು ಗ್ಯಾರಂಟಿ ಯೋಜನೆ ಘೋಷಿಸಿದ ಕಾಂಗ್ರೆಸ್ ಸರ್ಕಾರ!
ಕಳೆದ ಏಳು ತಿಂಗಳ ಗಳಿಂದ ಕಾಂಗ್ರೆಸ್ ಸರ್ಕಾರ (Congress government) ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ರೈತ ಪರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.
ಅದರಲ್ಲೂ ಮುಖ್ಯವಾಗಿ ಪಂಚ ಗ್ಯಾರಂಟಿ ಯೋಜನೆಗಳು (government guarantee schemes) ಜನರ ಮೆಚ್ಚುಗೆಯನ್ನು ಗಳಿಸಿಕೊಂಡಿವೆ. ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ ಸರ್ಕಾರದ 5 ಯೋಜನೆಗಳು ಯಾವ ಪುಟ್ಟ ಮಗುವಿನ ಬಳಿ ಕೇಳಿದ್ರು, ಹೇಳುವಷ್ಟು ಫೇಮಸ್ ಆಗಿದೆ ಎನ್ನಬಹುದು.
ಆಸ್ತಿ ಖರೀದಿ ಹಾಗೂ ನೋಂದಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು! ಯಾಕೆ ಗೊತ್ತಾ?
ಕರ್ನಾಟಕ (Karnataka) ದಲ್ಲಿ ಮಾತ್ರವಲ್ಲದೆ ಕರ್ನಾಟಕದ ಉಚಿತ ಗ್ಯಾರಂಟಿ ಯೋಜನೆಯ ಮಾದರಿಯನ್ನು ತೆಲಂಗಾಣ (Telangana) ದಲ್ಲಿಯೂ ಕೂಡ ಕಾಂಗ್ರೆಸ್ ಪಕ್ಷ ಅಳವಡಿಸಿಕೊಂಡಿತು ಈ ಹಿಂದೆ ವಿಧಾನಸಭಾ ಎಲೆಕ್ಷನ್ (vidhansabha election) ಸಮಯದಲ್ಲಿ ತೆಲಂಗಾಣ ದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಇದೇ ಕಾರಣಕ್ಕೆ ಇಂದು ಕಾಂಗ್ರೆಸ್ ಸರ್ಕಾರ ತೆಲಂಗಾಣದಲ್ಲಿ ಅಧಿಕಾರ ನಡೆಸುತ್ತಿದೆ.
ತೆಲಂಗಾಣ ಸರಕಾರ ಬಹಳ ಮುಖ್ಯವಾಗಿರುವ ಕೆಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಅವುಗಳಲ್ಲಿ ಕೇವಲ 500 ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್ (gas cylinder) ಹಾಗೂ ವಿದ್ಯುತ್ (free electricity) ವಿತರಣೆ ಮಾಡುವ ಯೋಜನೆಗಳು ಸೇರಿವೆ.
ರೈತರಿಗಾಗಿ ಕಮ್ಮಿ ಬೆಲೆಗೆ ಟ್ರ್ಯಾಕ್ಟರ್ ಬಿಡುಗಡೆ! ಆಕರ್ಷಕ ಫೀಚರ್, ಉತ್ತಮ ಮೈಲೇಜ್
ತೆಲಂಗಾಣದಲ್ಲಿ 500 ರೂಪಾಯಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ವಿದ್ಯುತ್!
ತೆಲಂಗಾಣದ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರ ಈ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದರು.
ಇನ್ಮುಂದೆ ಮನೆಯಲ್ಲೇ ಕುಳಿತು ಆಸ್ತಿ, ಜಮೀನು ನೋಂದಣಿ ಮಾಡಿಕೊಳ್ಳಿ! ಇಲ್ಲಿದೆ ಮಾಹಿತಿ
ಇದೀಗ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಯೋಜನೆಗಳ ಜೊತೆಗೆ 500 ಗಳಿಗೆ ಬಡವರಿಗೆ ಗ್ಯಾಸ್ ಸಿಲಿಂಡರ್ ಹಾಗೂ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಗೆ ಇದೆ ಫೆಬ್ರವರಿ 27 2024 ರಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಚಾಲನೆ ನೀಡಿದ್ದಾರೆ.
Gas cylinder for just Rs.500, free electricity, Two more guarantee schemes