ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ಹಾಗೂ ಕಡು ಬಡವರಿಗೆ ಈ ಹಿಂದೆ ಗ್ಯಾಸ್ ಸಂಪರ್ಕ (gas connection) ಇರಲಿಲ್ಲ. ಮಹಿಳೆಯರು ಕಟ್ಟಿಗೆ ಒಲೆ ಉರಿಸಿ ಅಡುಗೆ ಮಾಡುವಷ್ಟರಲ್ಲಿ ಅವರ ಆರೋಗ್ಯವೂ ಕೂಡ ಹದಗೆಡುತ್ತಿತ್ತು.
ಇದನ್ನು ಗಮನಿಸಿದ ಕೇಂದ್ರ ಸರ್ಕಾರ (Central government) ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ (free gas connection) ನೀಡಲು ನಿರ್ಧರಿಸಿತು. ಈ ಹಿನ್ನೆಲೆಯಲ್ಲಿ ಇಂದು ಸಾಕಷ್ಟು ಮಹಿಳೆಯರು ಕಟ್ಟಿಗೆ ಒಲೆಯನ್ನು ಬಿಟ್ಟು ಗ್ಯಾಸ್ ಸಿಲಿಂಡರ್ (Gas Cylinder) ಬಳಸಿ ಅಡುಗೆ ಮಾಡಿಕೊಳ್ಳುವಷ್ಟು ಉತ್ತಮ ಸೌಲಭ್ಯ ನೀಡಲಾಗಿದೆ.
ಎಲ್ಲಾ ರೈತರ ಮನೆಗೆ ತಲುಪಲಿದೆ ಕಿಸಾನ್ ಕ್ರೆಡಿಟ್ ಕಾರ್ಡ್; ಸಿಗಲಿದೆ ಕೃಷಿಗೆ ಬೇಕಾದಷ್ಟು ಸಾಲ
ಪ್ರಧಾನ ಮಂತ್ರಿ ಉಜ್ವಲ ಯೋಜನೆ(Pradhanmantri Ujjwala Yojana)
ಕಳೆದ ಕೆಲವು ವರ್ಷಗಳ ಹಿಂದೆ ಮಹಿಳೆಯರಿಗಾಗಿಯೇ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಹಿನ್ನೆಲೆಯಲ್ಲಿ ಸುಮಾರು 10.35 ಕೋಟಿಗೂ ಅಧಿಕ ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದು ಈ ವರ್ಷ 75 ಲಕ್ಷ ಮಹಿಳೆಯರು ಹೊಸದಾಗಿ ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿದ್ದಾರೆ.
ನಿಮ್ಮ ಬಳಿ ಬಿಪಿಎಲ್ ಕಾರ್ಡ್ (BPL card) ಇದ್ದರೆ ಅಥವಾ ಅಂತ್ಯೋದಯ ಕಾರ್ಡ್ ಹೊಂದಿದ್ದರೆ ಉಚಿತ Gas ಕನೆಕ್ಷನ್ ಪಡೆದುಕೊಳ್ಳಬಹುದಾಗಿದೆ. ಆನ್ಲೈನ್ ಮೂಲಕ ಅಥವಾ ಹತ್ತಿರದ ಗ್ಯಾಸ್ ಏಜೆನ್ಸಿ ಯವರ ಬಳಿ ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಕನೆಕ್ಷನ್ ಅನ್ನು ಉಜ್ವಲ ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳಬಹುದು. ವರ್ಷದ 12 ಗ್ಯಾಸ್ ಸಿಲಿಂಡರ್ ಮೇಲೆ 300 ರೂಪಾಯಿಗಳ ಸಬ್ಸಿಡಿ ಕೂಡ ಲಭ್ಯವಿದೆ.
ಈ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ದುಪ್ಪಟ್ಟು ಆದಾಯ
ಬಿಪಿಎಲ್ ಕಾರ್ಡ್ ಇಲ್ಲದೆ ಇದ್ದರೂ ಸಿಗುತ್ತೆ ಉಚಿತ ಗ್ಯಾಸ್ ಕನೆಕ್ಷನ್!
ಇಲ್ಲಿಯವರೆಗೆ ಉಜ್ವಲ ಯೋಜನೆಯ ಅಡಿಯಲ್ಲಿ ಮಹಿಳೆಯರು ಉಚಿತವಾಗಿ ಎಲ್ ಪಿ ಜಿ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಬೇಕು ಅಂದ್ರೆ ಬಿಪಿಎಲ್ ಕಾರ್ಡ್ (BPL Ration Card) ಹಾಗೂ ಆಧಾರ್ ಕಾರ್ಡ್ (Aadhaar Card) ಕಡ್ಡಾಯವಾಗಿತ್ತು. ಆದರೆ ಇಂದು ಜನರಿಗೆ ಶುಭ ಸುದ್ದಿ ನೀಡಿರುವ ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್ ಇಲ್ಲದೆ ಇರುವವರು ಕೂಡ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ಒಂದು ವರ್ಷಕ್ಕೆ ₹1 ಲಕ್ಷ ರೂಪಾಯಿ ಪಿಂಚಣಿ ಪಡೆಯೋಕೆ ಇಷ್ಟು ಹೂಡಿಕೆ ಮಾಡಿದ್ರೆ ಸಾಕು!
ಹೌದು ಇದಕ್ಕಾಗಿ ನೀವು ಹತ್ತಿರದ ಗ್ಯಾಸ್ ಏಜೆನ್ಸಿಗೆ (gas agency) ಹೋಗಿ ಅರ್ಜಿ ಸಲ್ಲಿಸಬೇಕು, ನಿಮ್ಮ ಆಧಾರ್ ಕಾರ್ಡ್, ಸ್ವಯಂಘೋಷಣ ಪ್ರಮಾಣ ಪತ್ರ ವಾಸ ಸ್ಥಳ ಪ್ರಮಾಣ ಪತ್ರ, ಮೊದಲಾದ ದಾಖಲೆಗಳನ್ನು ನೀಡಿದರೆ ಏಜೆನ್ಸಿ ಸಿಬ್ಬಂದಿ ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ಮಾಡುತ್ತಾರೆ.
ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಸರ್ಕಾರ ನಿಗದಿಪಡಿಸಿರುವ ಮಾನದಂಡದ ಒಳಗೆ ನೀವು ಇದ್ದರೆ ನಿಮಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ನೀಡಲಾಗುವುದು. ಹಾಗಾಗಿ ಇನ್ನು ಮುಂದೆ ಬಿಪಿಎಲ್ ಕಾರ್ಡ್ ಇಲ್ಲದೇ ಇರುವ ಬಡತನ ರೇಖೆಗಿಂತ ಕೆಳಗಿರುವವರು ಅಥವಾ ಕಡು ಬಡವರು ಕೂಡ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ಪಡೆದುಕೊಳ್ಳಬಹುದು.
ರೆಂಟ್ ಅಗ್ರಿಮೆಂಟ್ ನಲ್ಲಿ ಏನೆಲ್ಲಾ ಇರಬೇಕು? ಮನೆ ಮಾಲೀಕರು, ಬಾಡಿಗೆದಾರರಿಗೆ ಹೊಸ ರೂಲ್ಸ್
Get Free LPG Gas Connection Without BPL Card
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.