ನಿಮ್ಮ ಜಮೀನು, ಹೊಲ, ಗದ್ದೆಯ ಸರ್ವೇ ಸ್ಕೆಚ್ ಮೊಬೈಲ್ ನಲ್ಲೇ ಸುಲಭವಾಗಿ ಪಡೆಯಿರಿ
ಇಂದು ಡಿಜಿಟಲೀಕರಣ (digitalisation) ಎನ್ನುವುದು ಕೃಷಿ ಕ್ಷೇತ್ರಕ್ಕೂ (agriculture field) ಕೂಡ ಕಾಲಿಟ್ಟಿದೆ. ತಂತ್ರಜ್ಞಾನ (technology) ದಲ್ಲಿ ಭಾರತವು ಸಾಕಷ್ಟು ಮುಂದುವರೆದಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ನಾವು ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ಜನರ ಆದಾಯ ಹೆಚ್ಚಾಗುತ್ತಿದೆ. ಜೊತೆಗೆ ಸಮಯ ಮತ್ತು ಹಣ ವ್ಯರ್ಥವಾಗುವುದು ತಪ್ಪುತ್ತಿದೆ.
ಇಂದು ಕೃಷಿ ಕ್ಷೇತ್ರದಲ್ಲಿಯೂ ಕೂಡ ಸಾಕಷ್ಟು ಬೆಳವಣಿಗೆ ಕಂಡು ಬಂದಿದೆ. ಅದರಲ್ಲೂ ಇತ್ತೀಚಿಗೆ ಸರ್ಕಾರ ಕೃಷಿಕರಿಗೆ ಅನುಕೂಲವಾಗುವಂತಹ ಕೆಲವು ಯೋಜನೆಗಳನ್ನು ಪರಿಚಯಿಸಿದೆ. ಇದರ ಜೊತೆಜೊತೆಯಲ್ಲಿ ರೈತರು ತಮ್ಮ ಜಮೀನಿಗೆ (Agriculture Land) ಸಂಬಂಧಪಟ್ಟ ಕೆಲಸಗಳನ್ನು ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಆಗಾಗ ಅಲೆದಾಡುವುದನ್ನು ಕೂಡ ತಪ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ.

ಬಡವರಿಗೆ ಮನೆ ಕಟ್ಟಿಕೊಡಲು ಮುಂದಾದ ಸರ್ಕಾರ! ವಸತಿ ಯೋಜನೆಯ ಸ್ವಂತ ಸೂರು
ಸರ್ವೆ ಸ್ಕೆಚ್ ಮೊಬೈಲ್ ನಲ್ಲಿ ನೋಡಿಕೊಳ್ಳಬಹುದು!
ಸಾಮಾನ್ಯವಾಗಿ ರೈತರು ತಮ್ಮ ಜಮೀನಿಗೆ (Property) ಸಂಬಂಧಪಟ್ಟ ಸರ್ವೆ ಸ್ಕೆಚ್ ಪಡೆದುಕೊಳ್ಳಬೇಕು ಅಂದರೆ ಸಂಬಂಧ ಪಟ್ಟ ಡಿಪಾರ್ಟ್ಮೆಂಟ್ ಗೆ ಹೋಗಿ ಸಾಕಷ್ಟು ಸಮಯ ವ್ಯರ್ಥ ಮಾಡಬೇಕಿತ್ತು. ಅಥವಾ ಸರ್ವೆಯರ್ ಸ್ಥಳಕ್ಕೆ ಬಂದು ಸ್ಕೆಚ್ ತಯಾರಿಸಿ ಕೊಡಬೇಕಿತ್ತು. ಆದರೆ ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ ಮೊಬೈಲ್ನಲ್ಲಿ ರೈತರು ಸುಲಭವಾಗಿ ತಮ್ಮ ಜಮೀನಿನ ಸರ್ವೆ ಸ್ಕೆಚ್ ಪಡೆದುಕೊಳ್ಳಬಹುದು.
ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಭರ್ಜರಿ ಸುದ್ದಿ
ದಿಶಾಂಕ್ ಆಪ್ ಮೂಲಕ ಸರ್ವೆ ಸ್ಕೆಚ್ ಪಡೆದುಕೊಳ್ಳಿ! (The government developed dishaank application)
1960ರ ಸಮೀಕ್ಷೆ ನಕ್ಷೆಯನ್ನು ಆಧರಿಸಿ, ರೈತರ ಜಮೀನಿನ ನಕ್ಷೆಗಳನ್ನು ದಿಶಾಂಕ್ ಅಪ್ಲಿಕೇಶನ್ ಅಲ್ಲಿ ಸರ್ಕಾರ ಅಪ್ಲೋಡ್ ಮಾಡಿದೆ. ಈ ಅಪ್ಲಿಕೇಶನ್ ಮೂಲಕ ನೀವು ಸುಲಭವಾಗಿ ನಿಮ್ಮ ಜಮೀನಿನ ಸ್ಕೆಚ್ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಜಮೀನಿಗೆ ಸಂಬಂಧಪಟ್ಟ ಇತರ ಹಲವಾರು ವಿಚಾರಗಳನ್ನು ಈ ಅಪ್ಲಿಕೇಶನ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.
ರೈತರಿಗಾಗಿ ಇದು ಅತ್ಯುತ್ತಮ ಯೋಜನೆ; ಸಿಗಲಿದೆ ಪ್ರತಿ ತಿಂಗಳು ₹3000 ಪಿಂಚಣಿ ಹಣ!
ದಿಶಾಂಕ್ ಅಪ್ಲಿಕೇಶನ್ ಬಳಸುವುದು ಹೇಗೆ?
*ಇದಕ್ಕಾಗಿ ನೀವು ಮೊದಲು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ, ದೀಶಾಂಕ್ ಎನ್ನುವ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
*ಇದನ್ನು ನಿಮ್ಮ ಮೊಬೈಲ್ ನಲ್ಲಿ ಬಳಕೆ ಮಾಡಲು ಕೆಲವು ಪರ್ಮಿಷನ್ ಕೊಡಬೇಕಾಗುತ್ತದೆ. Allow ಎಂದು ಕ್ಲಿಕ್ ಮಾಡಿ.
*ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಬೇಕಾಗಿರುವುದನ್ನು ಆಯ್ಕೆ ಮಾಡಿಕೊಂಡು ಅಪ್ಲಿಕೇಶನ್ ಬಳಕೆ ಮುಂದುವರಿಸಿ.
*ಈ ಅಪ್ಲಿಕೇಶನ್ ನಲ್ಲಿ ಸರ್ವೆ ನಂಬರ್, ಜಿಲ್ಲೆಯ ಗಡಿ, ತಾಲೂಕು ಗಡಿ, ಹೋಬಳಿ ಗಡಿ, ಗ್ರಾಮದ ಗಡಿ ಬಣ್ಣಗಳ ಮೂಲಕ ತಿಳಿಸಲಾಗಿದೆ.
*ಇಷ್ಟು ಮಾತ್ರವಲ್ಲದೆ ನೀವು ಈ ಅಪ್ಲಿಕೇಶನ್ ಮೂಲಕ ಇನ್ನು ಸಾಕಷ್ಟು ಮಾಹಿತಿಯನ್ನು ಪಡೆಯಬಹುದು ನೀವು ನಿಮ್ಮ ಜಮೀನು ಸರ್ವೆ ಮಾಡಲು ಕಂದಾಯ ಇಲಾಖೆ ಅಧಿಕಾರಿಗಳನ್ನು ಕರೆಸಿದರು ಕೂಡ ಅವರು ಇದೆ ಅಪ್ಲಿಕೇಶನ್ ಬಳಕೆ ಮಾಡಿ ನಿಮಗೆ ಮಾಹಿತಿ ಕೊಡುತ್ತಾರೆ. ಹಾಗಾಗಿ ನೀವೆ ಸುಲಭವಾಗಿ ದಿಶಾಂಕ್ ಅಪ್ಲಿಕೇಶನ್ ಬಳಕೆ ಮಾಡುವುದರ ಮೂಲಕ ನಿಮ್ಮ ಜಮೀನಿಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಿ.
ಈ ಪೋಸ್ಟ್ ಆಫೀಸ್ ಸ್ಕೀಮ್ ಮೂಲಕ ಪ್ರತಿ ತಿಂಗಳು ಸಿಗುತ್ತೆ ₹9,250 ರೂಪಾಯಿ
Get survey sketch of your land, Agriculture Property on mobile