ಚಿನ್ನದ ಬೆಲೆ ಇಳಿಮುಖ, ಇದೇ ಮೊದಲು! ಬೆಂಗಳೂರು ಚಿನ್ನದಂಗಡಿಗಳಲ್ಲಿ ಜನಸಾಗರ
Gold Price Today: ಇತ್ತೀಚೆಗೆ ಚಿನ್ನದ ಬೆಲೆ ಒಂದು ಲಕ್ಷ ರೂಪಾಯಿಗಳ ಗಡಿ ದಾಟಿತ್ತು, ಅದು ಕ್ರಮೇಣ ಕಡಿಮೆಯಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಪರಿಸ್ಥಿತಿಗಳು, ಹಣದುಬ್ಬರ ಮತ್ತು ಇತರ ಆರ್ಥಿಕ ಅಂಶಗಳಿಂದಾಗಿ ಈ ಬದಲಾವಣೆಗಳು ನಡೆಯುತ್ತಿವೆ.

Gold Price Today: ಬೆಂಗಳೂರಿನಲ್ಲಿ (Bengaluru) ಇಂದು 24 ಕ್ಯಾರಟ್ 10 ಗ್ರಾಂ ಬಂಗಾರದ ಬೆಲೆ ₹99,810 ಇದ್ದರೆ, 22 ಕ್ಯಾರಟ್ ಬೆಲೆ ₹91,490 ಆಗಿದೆ. ಇದೇ ಬೆಲೆಗಳು (Gold Rate) ಮುಂಬೈ, ಹೈದರಾಬಾದ್, ವಿಜಯವಾಡ, ಚೆನ್ನೈ ಸೇರಿದಂತೆ ಹಲವೆಡೆ ಸಹ ದಾಖಲಾಗಿವೆ.
ಈ ನಡುವೆ ದೆಹಲಿಯಲ್ಲಿ ಮಾತ್ರ 24 ಕ್ಯಾರಟ್ ಬೆಲೆ ₹99,960ರಷ್ಟಿದ್ದು, ಸ್ವಲ್ಪ ಹೆಚ್ಚು. ಇಂಥಹ ಅಸ್ಥಿರ ಸಂದರ್ಭದಲ್ಲಿ ಹೂಡಿಕೆಗೆ ಸುರಕ್ಷಿತವಾದ ಆಯ್ಕೆ ಎನ್ನಲಾದ ಬಂಗಾರಕ್ಕೆ ಜನರು ಹೆಚ್ಚಿನ ಒಲವು ತೋರುತ್ತಾರೆ.
ಪೂರ್ವದಲ್ಲಿ ಬಂಗಾರದ ಬೆಲೆ ತುಲೆಗೆ ₹90,000ರ ಹತ್ತಿರವಿತ್ತು. ಆದರೆ ಕಳೆದ ತಿಂಗಳು ₹1 ಲಕ್ಷದ ಗಡಿ ದಾಟಿದ ಬೆಲೆ ಇತ್ತೀಚೆಗೆ ಸ್ವಲ್ಪ ಇಳಿಯುತ್ತಿದೆ. ಕೆಲ ದಿನಗಳಲ್ಲಿ ₹50–₹100 ಇಳಿಕೆ ಮಾತ್ರ ಕಂಡುಬಂದಿದೆ. ಆದರೆ ಏರಿಕೆಯಾಗುವಾಗ ₹300–₹400 ವರೆಗೆ ಏರಿರುವುದರಿಂದ ಗ್ರಾಹಕರಿಗೆ ಲಾಭ ಬಹುಮಟ್ಟಿಗೆ ಕಡಿಮೆ.
ಇದನ್ನೂ ಓದಿ: ಮಿಡಲ್ ಕ್ಲಾಸ್ ಫ್ಯಾಮಿಲಿಗೆ 6 ಲಕ್ಷಕ್ಕೆ ಸಿಗುವ ಕಾರುಗಳು! ಒಂದ್ಸಲ ಕಣ್ಣಾಯಿಸಿ
ಮಾರುಕಟ್ಟೆಯ ಸ್ಥಿತಿಗತಿಗಳ ಅವಲೋಕನೆಯೊಂದಿಗೆ ಬಂಗಾರ ಖರೀದಿಗೆ ಮುನ್ನ ನಿಪುಣರ ಸಲಹೆ ಪಡೆಯುವುದು ಉತ್ತಮ. ರೂಪಾಯಿ ಮೌಲ್ಯವು ಡಾಲರ್ ಜೊತೆಗಿನ ವ್ಯತ್ಯಾಸದಿಂದ ಬಂಗಾರದ ಇಂಪೋರ್ಟ್ ಬೆಲೆಗೂ ತಾತ್ಕಾಲಿಕ ಬದಲಾವಣೆಗಳು ಸಂಭವಿಸುತ್ತವೆ.
ಹೀಗಾಗಿ ಬಂಗಾರದ ಬೆಲೆ ಏರಿಕೆ ಅಥವಾ ಇಳಿಕೆಯ ವಿಷಯದಲ್ಲಿ ಗ್ರಾಹಕರು ತಾಳ್ಮೆಯಿಂದ ಮುನ್ನೋಟದಲ್ಲಿ ನಿರ್ಧಾರ ಕೈಗೊಳ್ಳಬೇಕು. ಈ ದಿನದ ಬಂಗಾರದ ಸಮಗ್ರ ದರ ಪರಿಶೀಲನೆಯ ಮೂಲಕ ಖರೀದಿಯ ಸಮಯ ನಿರ್ಧಾರವನ್ನು ಕೈಗೊಳ್ಳುವುದು ಹೆಚ್ಚು ಲಾಭದಾಯಕ.
ಇದನ್ನೂ ಓದಿ: ಕೇವಲ 40 ಸಾವಿರಕ್ಕೆ ಎಲೆಕ್ಟ್ರಿಕ್ ಕಾರು ನಿಮ್ಮದಾಗಿಸಿಕೊಳ್ಳಿ! 315 ಕಿ.ಮೀ ಮೈಲೇಜ್ ಕೊಡುತ್ತೆ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ದೆಹಲಿಯಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 99,960 ರೂ.ಗಳಾಗಿದ್ದರೆ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 91,640 ರೂ.ಗಳಾಗಿದೆ.
ಮುಂಬೈನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 99,810 ರೂ.ಗಳಾಗಿದ್ದರೆ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 91,490 ರೂ.ಗಳಾಗಿದೆ.
ಹೈದರಾಬಾದ್ನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 99,810 ರೂ.ಗಳಾಗಿದ್ದರೆ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 91,490 ರೂ.ಗಳಾಗಿದೆ.
ವಿಜಯವಾಡದಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 99,810 ರೂ.ಗಳಾಗಿದ್ದರೆ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 91,490 ರೂ.ಗಳಾಗಿದೆ.
ಚೆನ್ನೈನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 99,810 ರೂ.ಗಳಾಗಿದ್ದರೆ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 91,490 ರೂ.ಗಳಾಗಿದೆ.
ಬೆಂಗಳೂರಿನಲ್ಲಿ (Bangalore) 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 99,810 ರೂ.ಗಳಾಗಿದ್ದರೆ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 91,490 ರೂ.ಗಳಾಗಿದೆ.
ಬೆಳ್ಳಿಯ ವಿಷಯದಲ್ಲೂ ಸ್ವಲ್ಪ ಇಳಿಕೆಯಾಗಿದೆ. ಒಂದು ಕಿಲೋ ಬೆಳ್ಳಿಯ ಬೆಲೆ 1 ಲಕ್ಷ 15 ಸಾವಿರ ರೂಪಾಯಿ. ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಇದು 1 ಲಕ್ಷ 25 ಸಾವಿರದವರೆಗೆ ಇದೆ.
Gold rates dip slightly, 24K gold at 99,810 in Bengaluru




