ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಅಡ್ರಸ್ ಬದಲಾಯಿಸುವುದಕ್ಕೆ ಇಲ್ಲಿದೆ ಸುಲಭ ವಿಧಾನ

ಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಮಾಡಿಕೊಳ್ಳುವುದು ಕಡ್ಡಾಯವಾಗಿದೆ, ಮನೆಯಲ್ಲಿಯೇ ಕುಳಿತು ಅಡ್ರೆಸ್ (Address) ಬದಲಾಯಿಸಬಹುದುಜೊತೆಗೆ

ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ (Aadhaar Card) ನಲ್ಲಿ ವಿಳಾಸ ಬದಲಾಯಿಸಬೇಕು ಅಂದರೆ ನೀವು ಯಾವುದೇ ಸರ್ಕಾರಿ ಕಚೇರಿಗೆ ಹೋಗಬೇಕಿಲ್ಲ. ಸುಲಭವಾಗಿ ಮೊಬೈಲ್ (mobile) ನಲ್ಲಿ ಮನೆಯಲ್ಲಿಯೇ ಕುಳಿತು ಅಡ್ರೆಸ್ (Address) ಬದಲಾಯಿಸಬಹುದು. ಅದು ಕೂಡ ಎರಡು ನಿಮಿಷಗಳಲ್ಲಿ.

ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಅಗತ್ಯವಾಗಿರುವ ದಾಖಲೆ ಆಧಾರ್ ಕಾರ್ಡ್ (Aadhaar Card). ಸರ್ಕಾರದ ಯಾವುದೇ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಹಾಗೂ ಇತರ ಕೆಲಸಕ್ಕಾಗಿ ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಉಚಿತ ಗ್ಯಾಸ್ ಕನೆಕ್ಷನ್ ಪಡೆಯೋಕೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಡೈರೆಕ್ಟ್ ಲಿಂಕ್ ಇಲ್ಲಿದೆ

ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಅಡ್ರಸ್ ಬದಲಾಯಿಸುವುದಕ್ಕೆ ಇಲ್ಲಿದೆ ಸುಲಭ ವಿಧಾನ - Kannada News

ಕಳೆದ ಹತ್ತು ವರ್ಷಗಳಿಗಿಂತ ಹಳೆಯ ಆಧಾರ್ ಕಾರ್ಡ್ ಬಳಸುತ್ತಿದ್ದರೆ ಅದನ್ನು ತಕ್ಷಣ ಅಪ್ಡೇಟ್ ಮಾಡಿಕೊಳ್ಳಿ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ UIDAI ತಿಳಿಸಿದೆ. ಹೀಗಾಗಿ ಇಂದು ಯಾವುದೇ ಆಧಾರ ಕಾರ್ಡ್ ಕೇಂದ್ರಗಳನ್ನು ನೋಡಿ, ಉದ್ದವಾಗಿರುವ ಕ್ಯೂ ಕಾಣಿಸುತ್ತದೆ!

ಹೌದು, ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದಕ್ಕೆ ಜನರು ಆಧಾರ್ ಕಾರ್ಡ್ ಕೇಂದ್ರಗಳಿಗೆ ಹೋಗಿ ದಿನಗಟ್ಟಲೆ ಕಾದು ಅಪ್ಡೇಟ್ ಮಾಡಿಸಿಕೊಳ್ಳುತ್ತಿದ್ದಾರೆ. ನೀವು ನಿಮ್ಮ ಆಧಾರ್ ಕಾರ್ಡ್ ನವೀಕರಣಕ್ಕಾಗಿ ಹೀಗೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಲ್ಲ. ಸ್ಮಾರ್ಟ್ ಆಗಿ ಮೊಬೈಲ್ ನಲ್ಲಿ ಅಪ್ ಡೇಟ್ ಮಾಡಿಕೊಳ್ಳಬಹುದು. ಹೇಗೆ ಗೊತ್ತಾ?

ಈಗ ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ನವೀಕರಿಸಲು ನೀವು ಯಾವುದೇ ಆಧಾರ್ ಕೇಂದ್ರಗಳಿಗೆ ಹೋಗಬೇಕಾಗಿಲ್ಲ. ನಿಮ್ಮ ಬಳಿ ಸ್ಮಾರ್ಟ್ ಫೋನ್ (smartphone) ಇದ್ರೆ ಅಥವಾ ಕಂಪ್ಯೂಟರ್ ಮೂಲಕ ಆನ್ಲೈನ್ (online) ನಲ್ಲಿ ಕ್ಷಣಮಾತ್ರದಲ್ಲಿ ಅಪ್ಡೇಟ್ ಮಾಡಿಕೊಳ್ಳಬಹುದು. ಹೀಗೆ ಆಧಾರ್ ಕಾರ್ಡ್ ನಲ್ಲಿ ವಿಳಾಸ ಅಪ್ಡೇಟ್ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಇಲ್ಲಿದೆ ವಿವರಣೆ.

ಇನ್ಮುಂದೆ ಇದಕ್ಕಿಂತ ಹೆಚ್ಚು ಹಣ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ! ಹೊಸ ರೂಲ್ಸ್

Aadhaar Cardhttps://myaadhaar.uidai.gov.in/ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ಕ್ಯಾಪ್ಚ ಸಂಖ್ಯೆಯನ್ನು ನಮೂದಿಸಬೇಕು.

ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ (OTP) ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿ. ಈಗ ನೀವು ಯುಐಡಿಎಐ ವೆಬ್ಸೈಟ್ಗೆ ಲಾಗಿನ್ ಆಗಿದ್ದೀರಿ.

ಬಳಿಕ ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಅಪ್ಡೇಟ್ ಆಧಾರ್ ಆನ್ಲೈನ್ ಹಾಗೂ ಕುಟುಂಬದ ಮುಖ್ಯಸ್ಥರ ಆಧಾರಿತ ವಿಳಾಸ ಅಪ್ಡೇಟ್, ಎರಡು ಆಯ್ಕೆ ಕಾಣಿಸುತ್ತಿದೆ ಅದರಲ್ಲಿ ಮೊದಲನೇ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ನಿಮಿಷಗಳಲ್ಲಿ ಪರ್ಸನಲ್ ಲೋನ್ ಪಡೆಯಿರಿ! ಸೆಕೆಂಡುಗಳಲ್ಲಿ ಹಣ ಖಾತೆಗೆ ಜಮಾ

ಆಧಾರ್ ನವೀಕರಿಸಲು ಮುಂದುವರೆಯಿರಿ (continue) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಈಗ ಅಗತ್ಯ ಇರುವ ದಾಖಲೆಗಳನ್ನು ಅಪ್ಲೋಡ್ ಮಾಡಿ, ಆನ್ಲೈನ್ ಪೇಮೆಂಟ್ (online payment) ಮಾಡಬೇಕು.

ನಿಮ್ಮ ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ಬದಲಾಯಿಸಲು ಪಾಸ್ಪೋರ್ಟ್, ವಿದ್ಯುತ್ ಬಿಲ್, ರೇಷನ್ ಕಾರ್ಡ್ ಅಥವಾ ಇನ್ಯಾವುದೇ ಮನೆಯ ಗುರುತಿನ ಚೀಟಿ ದಾಖಲೆಯನ್ನು ಒದಗಿಸಬೇಕು.

ನೀವು ಶುಲ್ಕ ಪೇಮೆಂಟ್ ಮಾಡಿದ ತಕ್ಷಣ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿರುತ್ತದೆ. ಹೀಗೆ ಅತ್ಯಂತ ಸುಲಭವಾಗಿ ಆಧಾರ್ ಕಾರ್ಡ್ ನಲ್ಲಿ ಕೆಲವು ಕ್ಷಣಗಳಲ್ಲಿ ಅಡ್ರೆಸ್ ಬದಲಾವಣೆ ಮಾಡಿಕೊಳ್ಳಬಹುದು.

ಸ್ಟೇಟ್ ಬ್ಯಾಂಕ್ ಸೇರಿದಂತೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ 6 ದೊಡ್ಡ ಬ್ಯಾಂಕ್‌ಗಳು!

Here is an easy method to change Aadhaar card address on mobile

Follow us On

FaceBook Google News

Here is an easy method to change Aadhaar card address on mobile