ಈ ಸ್ಕೀಮ್ ನಲ್ಲಿ 5 ವರ್ಷಕ್ಕೆ 6 ಲಕ್ಷ ಹೂಡಿಕೆ ಮಾಡಿದ್ರೆ ಬ್ಯಾಂಕಿಗಿಂತ ಹೆಚ್ಚು ಬಡ್ಡಿ ಸಿಗುತ್ತೆ!

Story Highlights

Post Office Scheme : ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ ಬ್ಯಾಂಕ್ಗಿಂತಲೂ ಹೆಚ್ಚಿನ ಬಡ್ಡಿ!

Post Office Scheme : ಉಳಿತಾಯ (savings) ಮಾಡಬೇಕು, ಭವಿಷ್ಯಕ್ಕಾಗಿ ಹಣ ಸೇವ್ ಮಾಡಬೇಕು ಅನ್ನುವ ಆಸೆ ಯಾರಿಗೆ ಇರುವುದಿಲ್ಲ ಹೇಳಿ! ಅತಿ ಕಡಿಮೆ ಸಂಬಳ ಬರುವವನು ಕೂಡ ಅದೇ ಸಂಬಳದಲ್ಲಿ ಸ್ವಲ್ಪ ಹಣವನ್ನಾದರೂ ಉಳಿಸಿ ಹಣವನ್ನು ಕೂಡಿಡುತ್ತಾನೆ. ಆದರೆ ಹಣವನ್ನು ನಾವು ಉಳಿತಾಯ ಮಾಡುವುದಕ್ಕಾಗಿ ಹಣದ ಸೇಫ್ಟಿ ಎನ್ನುವುದು ಬಹಳ ಮುಖ್ಯ.

ಹೌದು, ನಿಖರವಾದ ಆದಾಯ (income) ಬರುತ್ತದೆ ಎನ್ನುವ ನಂಬಿಕೆ ಇದ್ದಾಗ ಮಾತ್ರ ಹೂಡಿಕೆ (Investment) ಮಾಡುವುದು ಒಳ್ಳೆಯದು. ಇಂತಹ ನಂಬಿಕೆಗೆ ಪಾತ್ರವಾಗಿದೆ ಭಾರತೀಯ ಅಂಚೆ ಕಚೇರಿ.

ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾಯಿಸಬೇಕಾ? ಆನ್‌ಲೈನ್‌ನಲ್ಲೇ ಬದಲಾಯಿಸಿ

ನೀವು ಪೋಸ್ಟ್ ಆಫೀಸ್ನಲ್ಲಿ ಪರಿಚಯಿಸಲಾಗಿರುವ 12ಕ್ಕೂ ಹೆಚ್ಚಿನ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಹಾಗೂ ನಿಶ್ಚಿತ ಆದಾಯವನ್ನು ಕೂಡ ಹಿಂಪಡೆಯಬಹುದು.

ಅಂಚೆ ಕಚೇರಿಯ ಸಮಯ ಠೇವಣಿ ಯೋಜನೆ! (Post office time deposit scheme)

ಬ್ಯಾಂಕುಗಳಲ್ಲಿ ನೀವು ಡೆಪಾಸಿಟ್ ಇರುವ ನಿಶ್ಚಿತ ಠೇವಣಿ ಯೋಜನೆಯನ್ನು ಅಂಚೆ ಕಚೇರಿಯಲ್ಲಿ ಸಮಯ ಠೇವಣಿ ಯೋಜನೆ ಎಂದು ಹೇಳಲಾಗುತ್ತದೆ. ಸಮಯ ಠೇವಣಿ ಯೋಜನೆಯಲ್ಲಿ ಕೆಲಸಗಳಿಂದ ಹೂಡಿಕೆ ಮಾಡಬಹುದು ಹಾಗೂ ಗರಿಷ್ಠ ಹೂಡಿಕೆಯ ಮಿತಿ ಇಲ್ಲ. ಸಮಯ ಕಳೆದ ಹಾಗೆ ಸಮಯ ಠೇವಣಿಯಲ್ಲಿ ನೀವು ಇಟ್ಟ ಹಣ ದುಬ್ಬಟ್ಟಾಗುವುದನ್ನು ನೋಡಬಹುದು.

ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್! ಕೇವಲ 25000 ಹೂಡಿಕೆಗೆ ಸಿಗುತ್ತೆ 18 ಲಕ್ಷ ರೂಪಾಯಿ

Post Office Schemesಸಮಯ ಠೇವಣಿಯ ಬಡ್ಡಿದರ! (Rate of interest)

ಬ್ಯಾಂಕುಗಳಲ್ಲಿ ಕೊಡುವ ಅನಿಶ್ಚಿತ ಠೇವಣಿಗೆ ಹೆಚ್ಚಿನ ಬಡ್ಡಿ ದರವನ್ನು ಅಂಚೆ ಕಚೇರಿಯ ಸಮಯ ಠೇವಣಿಯಲ್ಲಿ ಪಡೆದುಕೊಳ್ಳಬಹುದು. ನೀವು 1,2,3 ಮತ್ತು 5 ವರ್ಷಗಳ ಅವಧಿಯ ಠೇವಣಿ ಯೋಜನೆಯ ಆಯ್ದು ಕೊಳ್ಳಬಹುದು. ಇನ್ನು ಈ ವರ್ಷಗಳಿಗೆ ಅನ್ವಯವಾಗುವ ಬಡ್ಡಿ ದರವನ್ನು ನೋಡುವುದಾದರೆ,

1 ವರ್ಷದ ಸಮಯ ಠೇವಣಿಗೆ 6.50%
2 ವರ್ಷಕ್ಕೆ 7%
3 ವರ್ಷಕ್ಕೆ 7.10%
ಐದು ವರ್ಷಕ್ಕೆ 7.50% ಬಡ್ಡಿದರ.
ಈ ಬಡ್ಡಿ ದರವು ಮಾರ್ಚ್ 31, 2024 ವರೆಗೆ ಮಾತ್ರ ಅನ್ವಯವಾಗಲಿದೆ ಎನ್ನುವುದನ್ನು ಗಮನಿಸಿ.

ಉಚಿತ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ!

ಐದು ವರ್ಷಗಳ ಅವಧಿಗೆ 6 ಲಕ್ಷ ರೂಪಾಯಿಗಳ ಸಮಯ ಠೇವಣಿ ಇಟ್ಟರೆ ಸಿಗುವ ಲಾಭ ಎಷ್ಟು?

6 ಲಕ್ಷ 5 ವರ್ಷಗಳ ಅವಧಿಗೆ ಠೇವಣಿಯು 2,69,969 ರ ಬಡ್ಡಿಯನ್ನು ಪಡೆಯಬಹುದು. ಇದರಿಂದ 8,69,969 ಹಿಂಪಡೆಯಬಹುದು.

ಅದೇ ರೀತಿ ನೀವು ಐದು ಲಕ್ಷ ರೂಪಾಯಿಗಳನ್ನು ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ, ಅದೇ 7.5% ಬಡ್ಡಿ ದರದಲ್ಲಿ, ಬಡ್ಡಿಯಾಗಿ 2,24,974 ರೂ. ಪಡೆಯಬಹುದು. ಅಂದರೆ ಒಟ್ಟಿಗೆ ನಿಮಗೆ ಸಿಗುವ ಮೊತ್ತ 7,24,974 ರೂಪಾಯಿಗಳು. ಈ ಹಣವನ್ನು ಇನ್ನೂ ಐದು ವರ್ಷಗಳ ಕಾಲ ಠೇವಣಿ ಇಟ್ಟರೆ ಬರೋಬ್ಬರಿ 10,51,175 ರೂಪಾಯಿ ನಿಮ್ಮ ಕೈ ಸೇರುತ್ತದೆ.

ಆಧಾರ್ ಕಾರ್ಡ್ ಕಳೆದುಕೊಂಡಿದ್ದೀರಾ? ಟೆನ್ಶನ್ ಬೇಡ, ಮತ್ತೆ ಹೀಗೆ ಪಡೆದುಕೊಳ್ಳಿ!

how much interest you will get if you invest 6 lakhs in this Scheme for 5 years

Related Stories