ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್! ಕೇವಲ 25000 ಹೂಡಿಕೆಗೆ ಸಿಗುತ್ತೆ 18 ಲಕ್ಷ ರೂಪಾಯಿ

ಈ ಪ್ರಮುಖ ಸೇವಿಂಗ್ಸ್ ಸ್ಕೀಮ್ (savings schemes) ಗಳಲ್ಲಿ ಹೂಡಿಕೆ (Investment) ಮಾಡಿದ್ರೆ ಅತ್ಯುತ್ತಮ ರಿಟರ್ನ್ ಪಡೆಯಬಹುದು.

ಭವಿಷ್ಯದ ದೃಷ್ಟಿಯಿಂದ ಹಣ ಉಳಿತಾಯ (savings ) ಮಾಡುವುದಕ್ಕೆ ಅತ್ಯುತ್ತಮ ಉಳಿತಾಯ ಯೋಜನೆಗಳನ್ನು ಅಂಚೆ ಕಚೇರಿ (post office) ಪರಿಚಯಿಸಿದೆ. ಹಾಗಾಗಿ ಬಡವರಿರಬಹುದು ಮದ್ಯಮ ವರ್ಗದವರಿರಬಹುದು ಅಥವಾ ಶ್ರೀಮಂತರೇ ಆಗಿರಬಹುದು ಪ್ರಮುಖ ಸೇವಿಂಗ್ಸ್ ಸ್ಕೀಮ್ (savings schemes) ಗಳಲ್ಲಿ ಹೂಡಿಕೆ (Investment) ಮಾಡಿದ್ರೆ ಅತ್ಯುತ್ತಮ ರಿಟರ್ನ್ ಪಡೆಯಬಹುದು.

ನಮ್ಮ ವೃದ್ಧಾಪ್ಯದ ಜೀವನ ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲದೆ ಸುಗಮವಾಗಿ ಸಾಗಬೇಕು ಎಂದು ನಾವು ಬಯಸಿದರೆ ಅದಕ್ಕಾಗಿ ಅತ್ಯುತ್ತಮ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು.

ಉಚಿತ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ!

ಮಾರುಕಟ್ಟೆಯ ಅಪಾಯವಿಲ್ಲದೆ ನಾವು ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ಆದಾಯವನ್ನು ನಾವು ನಿರೀಕ್ಷಿಸುತ್ತೇವೆ. ಯಾಕೆಂದರೆ ಮಧ್ಯಮ ವರ್ಗದ ಕುಟುಂಬದವರಿಗೆ ತಾವು ಹಾಕಿದ ಹಣಕ್ಕೆ ಉತ್ತಮ ಆದಾಯ ಬರಬೇಕು ಹೊರತು ಆ ಹಣದ ನಷ್ಟದ ಭಾರವನ್ನು ಹೊರುವ ಶಕ್ತಿ ಇರುವುದಿಲ್ಲ. ಹಾಗಾಗಿ ನೀವು ಅತ್ಯಂತ ಸೇಫ್ ಆಗಿರುವ ಹೂಡಿಕೆ ಮಾಡಲು ಬಯಸಿದರೆ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು.

ಅಂಚೆ ಕಚೇರಿಯ ಆರ್ ಡಿ! RD

ನೀವು ಅಂಚೆ ಕಚೇರಿಯಲ್ಲಿ ಮರುಕಳಿಸುವ ಠೇವಣಿ (recurring deposit) ಅಥವಾ ಆರ್ ಡಿ ಇಟ್ಟರೆ ನಿರೀಕ್ಷೆಯಂತೆಯೇ ಉತ್ತಮ ಆದಾಯವನ್ನು ಪಡೆಯಬಹುದು ಕೇವಲ 25,000 ಹೂಡಿಕೆ ಆರಂಭಿಸಿ ಕೆಲವೇ ಅವಧಿಗಳಲ್ಲಿ 18 ಲಕ್ಷ ರೂಪಾಯಿಗಳನ್ನು ಪಡೆಯಲು ಸಾಧ್ಯವಿದೆ. ಇದಕ್ಕೆ ಹೇಗೆ ಅಪ್ಲೈ ಮಾಡುವುದು? ಯಾರೆಲ್ಲಾ ಅರ್ಹರು ಎನ್ನುವುದನ್ನು ನೋಡೋಣ.

ಆಧಾರ್ ಕಾರ್ಡ್ ಕಳೆದುಕೊಂಡಿದ್ದೀರಾ? ಟೆನ್ಶನ್ ಬೇಡ, ಮತ್ತೆ ಹೀಗೆ ಪಡೆದುಕೊಳ್ಳಿ!

Post office Scheme*ಅಂಚೆ ಕಚೇರಿಯ ಮರುಕಳಿಸುವ ಠೇವಣಿ ಯೋಜನೆಯಲ್ಲಿ ನೀವು ಕೇವಲ 100 ರೂಪಾಯಿಗಳನ್ನು ತಿಂಗಳಿಗೆ ಹೂಡಿಕೆ ಮಾಡುವುದರ ಮೂಲಕ ನಿಮ್ಮ ಉಳಿತಾಯವನ್ನು ಆರಂಭಿಸಬಹುದು.

*ಮರುಕಳಿಸುವ ಠೇವಣಿಗೆ ಸದ್ಯ 6.7% ಬಡ್ಡಿದರವನ್ನು ನೀಡಲಾಗುತ್ತದೆ. ಹಾಗೂ ತಿಂಗಳಿಗೆ ಒಮ್ಮೆ ಪರಿಷ್ಕರಿಸಲಾಗುತ್ತದೆ.

*5 ವರ್ಷಗಳ ಅವಧಿಯ ಯೋಜನೆ ಇದಾಗಿದ್ದು ನೀವು ಎಷ್ಟು ಹಣವನ್ನು ಪ್ರತಿ ತಿಂಗಳು ಹೂಡಿಕೆ ಮಾಡುತ್ತಿರುವ ಮೆಚುರಿಟಿ ಅವಧಿಯಲ್ಲಿ ಅಷ್ಟೇ ಉತ್ತಮ ಲಾಭವನ್ನು ಪಡೆಯುತ್ತೀರಿ.

*ಪ್ರತಿ ತಿಂಗಳು 25000 ಗಳಂತೆ ಐದು ವರ್ಷಗಳವರೆಗೆ ಸತತವಾಗಿ ಹೂಡಿಕೆ ಮಾಡಿಕೊಂಡು ಬಂದರೆ ಕೇವಲ ಐದು ವರ್ಷಗಳಲ್ಲಿ 18 ಲಕ್ಷಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಬ್ಯಾಂಕ್ ಅಕೌಂಟ್ ನಲ್ಲಿ ಹೆಚ್ಚು ಹಣ ಇದ್ರೆ ಏನಾಗುತ್ತೆ? ಇನ್ಕಮ್ ಟ್ಯಾಕ್ಸ್ ನೋಟಿಸ್ ಬರುತ್ತಾ?

*ಇಲ್ಲಿ ಹೂಡಿಕೆ ಮಾಡುವ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ ಅದೇ ರೀತಿ ಹೂಡಿಕೆ ಮಾಡುವ ವಯಸ್ಸಿನ ಮಿತಿಯು ಇಲ್ಲ. 10 ವರ್ಷದ ಮಕ್ಕಳ ಹೆಸರಿನಲ್ಲಿ ತಂದೆ ತಾಯಿ ಈ ಖಾತೆಯನ್ನು ಆರಂಭಿಸಬಹುದು.

*ವೈಯಕ್ತಿಕ ಖಾತೆ ಮಾತ್ರವಲ್ಲದೆ ಜಂಟಿ ಖಾತೆ ತೆರೆಯಲು ಕೂಡ ಅವಕಾಶವಿದೆ ಎರಡಕ್ಕಿಂತ ಹೆಚ್ಚು ಅಂದರೆ ಮೂವರು ಸೇರಿ ಈ ಖಾತೆಯನ್ನು ಆರಂಭಿಸಬಹುದು.

*ಮರುಕಳಿಸುವ ಠೇವಣಿ ಇಟ್ಟರೆ ನೀವು ನಾಮಿನಿ ಹೆಸರನ್ನು ಸೂಚಿಸಬೇಕು. ಹಾಗೂ ಅವಧಿಗೂ ಮೊದಲೇ ಠೇವಣಿ ಇಟ್ಟ ವ್ಯಕ್ತಿ ಮರಣ ಹೊಂದಿದರೆ ಆತನ ನಾಮಿನಿ ಹೆಸರಿಗೆ ಈ ಹಣವನ್ನು ವರ್ಗಾಯಿಸಲಾಗುವುದು.

*ಡಿಪಾಸಿಟ್ ಇಟ್ಟ ಒಂದು ವರ್ಷಗಳ ಅವಧಿಯಲ್ಲಿ ಡಿಪಾಸಿಟ್ ಹಣದ ಅರ್ಥದಷ್ಟು ಹಣಕ್ಕೆ ಸಾಲ ಸೌಲಭ್ಯ ಪಡೆಯಬಹುದು.

ಹೆಣ್ಣು ಮಕ್ಕಳಿಗೆ ಬಂಪರ್ ಯೋಜನೆ ಇದು! ಬರೋಬ್ಬರಿ 27 ಲಕ್ಷ ನಿಮ್ಮದಾಗಿಸಿಕೊಳ್ಳಿ

ಅಂಚೆ ಕಚೇರಿಯ ಆರ್ ಡಿ ಖಾತೆ ಆರಂಭಿಸಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ಇತ್ತೀಚಿನ ಭಾವಚಿತ್ರ
ಮೊಬೈಲ್ ಸಂಖ್ಯೆ

ಮರುಕಳಿಸುವ ಠೇವಣಿ ಹೂಡಿಕೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.

Post Office Best Scheme, For 25000 investment will get 18 lakh rupees