ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾಯಿಸಬೇಕಾ? ಆನ್‌ಲೈನ್‌ನಲ್ಲೇ ಬದಲಾಯಿಸಿ
ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ನೀವು ಬದಲಾಯಿಸಬೇಕಾ? ಹಾಗಾದ್ರೆ ಕುಳಿತಲ್ಲೇ ಈ ಕೆಲಸ ಮಾಡಬಹುದು!
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಕೊಟ್ಟಿರುವ ಮಹತ್ವದ ಗುರುತಿನ ಚೀಟಿ ಆಧಾರ್ ಕಾರ್ಡ್ ಆಗಿದೆ. ಈ ಆಧಾರ್ ಕಾರ್ಡ್ ಇದ್ರೆ ನಾವು ಬ್ಯಾಂಕಿಂಗ್ ವ್ಯವಹಾರ (banking transaction) ಗಳನ್ನು ಹಾಗೂ ಸರ್ಕಾರದ ಇತರ ಕೆಲಸಗಳನ್ನು ಇದೇ ಗುರುತಿನ ಚೀಟಿಯನ್ನು ಕೊಟ್ಟು ಪಡೆದುಕೊಳ್ಳಬಹುದು.
ಆಧಾರ್ ಕಾರ್ಡ್ (Aadhaar card) ನಲ್ಲಿ ಬಯೋಮೆಟ್ರಿಕ್ ಮಾಹಿತಿ, ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ ಮೊದಲಾದ ಮಾಹಿತಿಗಳು ಸೇರಿದಂತೆ ನಮಗೆ ಸಂಬಂಧ ಪಟ್ಟ ಎಲ್ಲಾ ವಿವರಣೆಗಳನ್ನು ನಮೂದಿಸಲಾಗಿರುತ್ತದೆ. ಇನ್ನು ಆಧಾರ್ ಕಾರ್ಡನ್ನು ಕಾಲಕಾಲಕ್ಕೆ ತಕ್ಕಂತೆ ಅಪ್ಡೇಟ್ ಮಾಡುವುದು ಕೂಡ ಬಹಳ ಮುಖ್ಯ.
ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್! ಕೇವಲ 25000 ಹೂಡಿಕೆಗೆ ಸಿಗುತ್ತೆ 18 ಲಕ್ಷ ರೂಪಾಯಿ
ಎಷ್ಟೋ ಬಾರಿ ನಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಆಗಿರುತ್ತೇವೆ. ಅಂತಹ ಸಂದರ್ಭದಲ್ಲಿ ನಮ್ಮ ಅಡ್ರೆಸ್ (Address) ಬದಲಾಗುತ್ತದೆ ಆದ್ದರಿಂದ ಆಧಾರ್ ಕಾರ್ಡ್ ನಲ್ಲಿ ಹೊಸ ಅಡ್ರೆಸ್ ನವೀಕರಿಸಿಕೊಳ್ಳಬೇಕು.
ಇದನ್ನು ಹೊರತುಪಡಿಸಿ ಆಧಾರ ಕಾರ್ಡ್ ನ ಫೋಟೋ ಮಾತ್ರ ನಾವಿದ್ದಂತೆಯೇ ಬರಲು ಸಾಧ್ಯವೇ ಇಲ್ಲ ಎನ್ನುವಷ್ಟು ಕೆಟ್ಟದಾಗಿರುತ್ತದೆ ಎನ್ನಬಹುದು ಎಷ್ಟೋ ಜನರಿಗೆ ಆಧಾರ್ ಕಾರ್ಡ್ ನಲ್ಲಿ ತಮ್ಮ ಫೋಟೋದ ಬಗ್ಗೆ ತೃಪ್ತಿ ಇರುವುದೇ ಇಲ್ಲ. ಹಾಗೆ ನಿಮಗೂ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ಫೋಟೋ ಬಗ್ಗೆ ಅತೃಪ್ತಿ ಇದ್ದರೆ ಆನ್ಲೈನ್ ಮೂಲಕ ಆ ಫೋಟೋವನ್ನು ಬದಲಾಯಿಸಬಹುದು ಗೊತ್ತಾ?
ಉಚಿತ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ!
ಆಧಾರ್ ನಲ್ಲಿರುವ ನಿಮ್ಮ ಫೋಟೋವನ್ನು ಸುಲಭವಾಗಿ ಬದಲಾಯಿಸಿ!
https://uidai.gov.in/en/ ಈ ವೆಬ್ ಸೈಟ್ ಅಲ್ಲಿ ಮೇಲೆ ಕ್ಲಿಕ್ ಮಾಡಿ.
*ಈಗ ಮುಖಪುಟದಲ್ಲಿ ಕಾಣಿಸುವ ಆಧಾರ್ ದಾಖಲಾತಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
*ಆ ಅರ್ಜಿಯಲ್ಲಿ ಅಗತ್ಯ ಇರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ.
*ನಂತರ ಹತ್ತಿರದ ಆಧಾರ್ ಸೇವಾಕೇಂದ್ರಕ್ಕೆ ಭೇಟಿ ನೀಡಿ.
ಆಧಾರ್ ಕಾರ್ಡ್ ಕಳೆದುಕೊಂಡಿದ್ದೀರಾ? ಟೆನ್ಶನ್ ಬೇಡ, ಮತ್ತೆ ಹೀಗೆ ಪಡೆದುಕೊಳ್ಳಿ!
*ಈಗ ನೀವು ನಿಮ್ಮ ಅರ್ಜಿಯನ್ನು ಅಲ್ಲಿರುವ ಅಧಿಕಾರಿಗಳ ಬಳಿ ಕೊಡಬೇಕು ನಂತರ ನಿಮ್ಮ ಬಯೋಮೆಟ್ರಿಕ್ ಮಾಹಿತಿ (biometric details) ಯನ್ನು ತೆಗೆದುಕೊಂಡು ನಿಮ್ಮ ಲೈವ್ ಫೋಟೋ ತೆಗೆಯಲಾಗುತ್ತದೆ.
ಈ ರೀತಿ ಫೋಟೋ ಅಪ್ಡೇಟ್ ಮಾಡಲು ನೂರು ರೂಪಾಯಿ ಶುಲ್ಕ ಪಾವತಿಸಬೇಕು. ನಂತರ ನಿಮಗೆ ವಿನಂತಿ ಸಂಖ್ಯೆ URN ಕೊಡಲಾಗುತ್ತದೆ. ಈ ಮೂಲಕ ನೀವು ಆಧಾರ್ ಅಪ್ಡೇಟ್ ಸ್ಟೇಟಸ್ ಅನ್ನು ಆನ್ಲೈನ್ನಲ್ಲಿ ಚೆಕ್ ಮಾಡಬಹುದು.
ಇನ್ನು ಆಧಾರ್ ಬಯೋಮೆಟ್ರಿಕ್ ಮಾಹಿತಿಯನ್ನು ಒಳಗೊಂಡಿರುವುದರಿಂದ ನೀವು ಆನ್ಲೈನ್ ನಲ್ಲಿ ಫೋಟೋ ಬದಲಾಯಿಸಲು ಸಾಧ್ಯವಿಲ್ಲ ಹಾಗಾಗಿ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಫೋಟೋ ಬದಲಾಯಿಸಬೇಕಾಗುತ್ತದೆ.
ಬ್ಯಾಂಕ್ ಅಕೌಂಟ್ ನಲ್ಲಿ ಹೆಚ್ಚು ಹಣ ಇದ್ರೆ ಏನಾಗುತ್ತೆ? ಇನ್ಕಮ್ ಟ್ಯಾಕ್ಸ್ ನೋಟಿಸ್ ಬರುತ್ತಾ?
Need to change your Aadhaar card photo, Change in online