ಮಕ್ಕಳಿಗೂ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿದ ಸರ್ಕಾರ! ಪ್ಯಾನ್ ಕಾರ್ಡ್ ಮಾಡಿಸುವುದು ಹೇಗೆ?
ಹಣಕಾಸಿನ ವ್ಯವಹಾರ (Bank Transaction) ಮಾಡುವಾಗ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವಾಗ ಪ್ಯಾನ್ ಕಾರ್ಡ್ (PAN card) ಬಹಳ ಮುಖ್ಯವಾಗಿರುವ ದಾಖಲೆಯಾಗಿರುತ್ತದೆ.
ನಾವು ಹಣಕಾಸಿನ ವ್ಯವಹಾರ (Bank Transaction) ಮಾಡುವಾಗ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವಾಗ ಪ್ಯಾನ್ ಕಾರ್ಡ್ (PAN card) ಬಹಳ ಮುಖ್ಯವಾಗಿರುವ ದಾಖಲೆಯಾಗಿರುತ್ತದೆ.
ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ (Aadhaar Pan Card Link) ಆಗದಿದ್ದರೆ ಈ ಯಾವುದೇ ಕೆಲಸವನ್ನು ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ಯಾನ್ ಕಾರ್ಡ್ಗೆ ಸಂಬಂಧಪಟ್ಟ ಹಾಗೆ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ. 18 ವರ್ಷಕ್ಕಿಂತ ಕೆಳಗಿನವರಿಗೂ ಕೂಡ ಪ್ಯಾನ್ ಕಾರ್ಡ್ ಮಾಡಿಸಬಹುದು.
ಕೈತುಂಬಾ ಲಕ್ಷ ಲಕ್ಷ ಆದಾಯ ಗಳಿಸಿ ಕೊಡುವ ಈ ಬಿಸಿನೆಸ್ ಆರಂಭಿಸಲು ಮುಗಿಬಿದ್ದ ಜನ!
ಅಪ್ರಾಪ್ತ ವಯಸ್ಸಿನ ಮಕ್ಕಳಿಗೂ (minor children) ಪ್ಯಾನ್ ಕಾರ್ಡ್ ಕಡ್ಡಾಯ!
ಇನ್ಕಮ್ ಟ್ಯಾಕ್ಸ್ ರಿಟರ್ನ್ (income tax return) ಸಲ್ಲಿಕೆ ಮಾಡಲು ಯಾವುದೇ ವಯಸ್ಸಿನ ಮಿತಿ ಇಲ್ಲ, ಅಪ್ರಾಪ್ತ ವಯಸ್ಸಿನ ಮಕ್ಕಳು (minor children) ಕೂಡ ತಿಂಗಳಿಗೆ 15000 ಗಳಿಗಿಂತ ಹೆಚ್ಚಿನ ಹಣವನ್ನು ಗಳಿಸುವುದಾದರೆ ಅಂತವರು ಐಟಿಆರ್ ಫೈಲ್ (ITR file) ಮಾಡಬಹುದು..
ಇನ್ನು ಐಟಿಆರ್ ಫೈಲ್ ಮಾಡಲು ಪ್ಯಾನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆಯಾಗಿರುವುದರಿಂದ ಅಪ್ರಾಪ್ತ ಮಕ್ಕಳಿಗೂ ಕೂಡ ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಲೇಬೇಕು.
ಯಾವ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯ?
*ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವಾಗ
*ತಂದೆ ತಾಯಿ ಹೂಡಿಕೆ ಮಾಡಿ ಆ ಹೂಡಿಕೆಗೆ (investment) ಅಪ್ರಾಪ್ತ ವಯಸ್ಸಿನ ಮಗುವನ್ನು ನಾಮಿನಿ ಮಾಡಿದಾಗ.
*ಅಪ್ರಾಪ್ತ ವಯಸ್ಸಿನ ಮಗುವಿನ ಹೆಸರಿನಲ್ಲಿ ಬ್ಯಾಂಕ್ ಖಾತೆ (Bank Account) ಆರಂಭಿಸುವಾಗ.
*ಅಪ್ರಾಪ್ತ ವಯಸ್ಸಿನಲ್ಲಿ ಮಗು 15000 ಕ್ಕಿಂತ ಹೆಚ್ಚು ಮಾಸಿಕ ಆದಾಯ ಗಳಿಸಿದಾಗ.
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಸರಕಾರ! ದೀಪಾವಳಿ ಹಬ್ಬಕ್ಕೂ ಮುನ್ನವೇ ಬಂಪರ್ ಗಿಫ್ಟ್
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪ್ಯಾನ್ ಕಾರ್ಡ್ ಮಾಡಿಸಲು ಬೇಕಾಗಿರುವ ದಾಖಲೆಗಳು;
ತಂದೆ ತಾಯಿಯ ಹೆಸರು, ವಿಳಾಸ
ಅರ್ಜಿದಾರರ ವಿಳಾಸ ಮತ್ತು ಪುರಾವೆ.
ಪೋಷಕರು ತಮ್ಮ ಗುರುತಿನ ಪುರಾವೆಯಾಗಿ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್ ಪೋರ್ಟ್ ಇಂತಹ ಯಾವುದಾದರೂ ಒಂದು ಗುರುತಿನ ಪುರಾವೆಯನ್ನು ಹೊಂದಿರಲೇಬೇಕು.
ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ! ಮೊಬೈಲ್ ಅಲ್ಲೇ ಚೆಕ್ ಮಾಡಿ
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪ್ಯಾನ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸುವುದು ಹೇಗೆ?
*ತಮ್ಮ ಮಕ್ಕಳಿಗೆ ಪ್ಯಾನ್ ಕಾರ್ಡ್ ಮಾಡಿಸಲು ಪೋಷಕರು ಅರ್ಜಿ ಸಲ್ಲಿಸಬಹುದು.
* ಇದಕ್ಕಾಗಿ ಮೊದಲು NSDL ವೆಬ್ಸೈಟ್ ಗೆ ಪ್ರವೇಶ ಮಾಡಿ.
*ಅಲ್ಲಿ ಫಾರ್ಮ್ 49A ನ್ನು ಸರಿಯಾದ ಮಾಹಿತಿಯನ್ನು ನೀಡಿ ಭರ್ತಿ ಮಾಡಬೇಕು. ಫಾರ್ಮ್ ಬರ್ತಿ ಮಾಡುವುದಕ್ಕೂ ಮೊದಲು ನಮೂದಿಸಲಾಗಿರುವ ಸೂಚನೆಯನ್ನು ಸರಿಯಾಗಿ ಗಮನಿಸಿ.
*ನಿಮ್ಮ ಮಗುವಿನ ಜನನ ಪ್ರಮಾಣ ಪತ್ರ ಮಗುವಿನ ಜೊತೆಗಿನ ಪೋಷಕರ ಫೋಟೋ ಮೊದಲಾದವುಗಳನ್ನು ಕೊಡಬೇಕು, ಜೊತೆಗೆ ಪೋಷಕರ ಸಹಿಯನ್ನು ಕೂಡ ಅಪ್ಲೋಡ್ ಮಾಡಬೇಕಾಗುತ್ತದೆ.
*ಈ ಪ್ರಕ್ರಿಯೆ ಮುಗಿದ ನಂತರ ಅರ್ಜಿ ಶುಲ್ಕವಾಗಿ 107 ರೂಪಾಯಿಗಳನ್ನು ಪಾವತಿ ಮಾಡಬೇಕು.
*ನಂತರ ಸಬ್ಮಿಟ್ ಎನ್ನುವ ಬಟನ್ ಕ್ಲಿಕ್ ಮಾಡಿ, ನಿಮಗೆ ಹತ್ತು ಡಿಜಿಟಲ್ ಇರುವ ರಿಜಿಸ್ಟರ್ ನಂಬರ್ ಕೊಡಲಾಗುತ್ತದೆ. ಈ ಮೂಲಕ ನೀವು ನಿಮ್ಮ ಪ್ಯಾನ್ನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಬಹುದು, ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಪ್ಯಾನ್ ಕಾರ್ಡ್ ಬರುತ್ತದೆ.
How To Get Pan Card for your Minor Children, Step by Step Process
Follow us On
Google News |