ಈ ಯೋಜನೆಯಲ್ಲಿ ನೀವು 3 ಲಕ್ಷ ಹಣ ಇಟ್ರೆ 6 ಲಕ್ಷ ರೂಪಾಯಿ ನಿಮ್ಮ ಕೈ ಸೇರಲಿದೆ

Story Highlights

ಸರ್ಕಾರದ ಹೊಸ ಉಳಿತಾಯ ಯೋಜನೆ; ಮೂರು ಲಕ್ಷ ಹಣ ಇಟ್ಟರೆ ಆರು ಲಕ್ಷ ಪಡೆಯಬಹುದು

ಉಳಿತಾಯ (savings) ಮಾಡುವುದು ಬಹಳ ಒಳ್ಳೆಯದು. ನಾವು ಹಣ ದುಡಿಮೆ ಮಾಡಿದ ನಂತರ ಒಂದಷ್ಟು ಹಣವನ್ನು ನಮ್ಮ ಭವಿಷ್ಯಕ್ಕಾಗಿ ಎತ್ತಿಟ್ಟರೆ ಅದರಿಂದ ಹೆಚ್ಚು ಪ್ರಯೋಜನ ಆಗುತ್ತದೆ.

ನಮ್ಮ ವೃದ್ಧಾಪ್ಯದ ಸಮಯದಲ್ಲಿ ಯಾರ ಮುಂದೆಯೂ ಕೈ ಚಾಚುವ ಅಗತ್ಯ ಇಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಹೂಡಿಕೆ (Investment) ಮಾಡಿದರೆ ಬಹಳ ಬೇಗ ಮೆಚೂರ್ಡ್ ಆಗುವ ಯೋಜನೆಗಳನ್ನು ನಾವು ಕಾಣಬಹುದು.

ಇಂತಹ ಯೋಜನೆಗಳಿಂದಾಗಿ ನಾವು ಇಡುವ ಹಣ, ಬಹಳ ಕಡಿಮೆ ಅವಧಿಯಲ್ಲಿ ದುಪ್ಪಟ್ಟಾಗುತ್ತದೆ ಅಂತಹ ಒಂದು ಯೋಜನೆಯ ಬಗ್ಗೆ ಈ ಲೇಖನದಲ್ಲಿದೆ ಸಂಪೂರ್ಣ ಮಾಹಿತಿ.

ಕುರಿ, ಕೋಳಿ ಸಾಕಾಣಿಕೆಗೆ ಸರ್ಕಾರದ ಸಹಾಯಧನ! ಕೈತುಂಬ ಹಣ ಸಂಪಾದನೆ ಮಾಡಿ

ಕಿಸಾನ್ ವಿಕಾಸ ಪತ್ರ ಯೋಜನೆ (Kisan Vikas Patra Yojana)

ಈ ಯೋಜನೆಯನ್ನು ವಿಶೇಷವಾಗಿ ರೈತರಿಗೆ ಮೀಸಲಿಟ್ಟು ಆರಂಭಿಸಲಾಗಿತ್ತು. ಆದರೆ ಈಗ ರೈತರು ಮಾತ್ರವಲ್ಲದೆ ಬೇರೆಯವರು ಕೂಡ ಕಿಸಾನ್ ವಿಕಾಸ ಪತ್ರ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಯಾವುದೇ ಅಂಚೆ ಕಚೇರಿ ಅಥವಾ ಬ್ಯಾಂಕುಗಳಲ್ಲಿ ಕೆ ವಿ ಪಿ ಯೋಜನೆಗೆ ನಿಮ್ಮ ಖಾತೆ ತೆರೆಯಬಹುದು.

ಎಷ್ಟು ಹೂಡಿಕೆ ಮಾಡಬೇಕು?

ಕಿಸಾನ್ ವಿಕಾಸ ಪತ್ರ ಯೋಜನೆಯ ಹೂಡಿಕೆ (Investment ) ಮಿತಿ ನೋಡುವುದಾದರೆ ಕನಿಷ್ಠ ಸಾವಿರ ರೂಪಾಯಿಗಳಿಂದ ಆರಂಭವಾಗುತ್ತದೆ ಮತ್ತು ಗರಿಷ್ಠ ಹೂಡಿಕೆ ಮಿತಿ ನಿಗದಿ ಪಡಿಸಿಲ್ಲ. ಇದು 124 ತಿಂಗಳುಗಳ ಯೋಜನೆ ಆಗಿದೆ ನೀವು ಒಮ್ಮೆ ಹೂಡಿಕೆ ಮಾಡಿದರೆ 124 ತಿಂಗಳುಗಳ ನಂತರ ಆ ಹಣವನ್ನು ದುಪ್ಪಟ್ಟಾಗಿಸಿಕೊಳ್ಳಬಹುದು.

ಈ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಬಿಗ್ ಅಪ್ಡೇಟ್! ಬಂಪರ್ ಕೊಡುಗೆ

Post Office Schemeಕೆವಿಪಿ ಬಡ್ಡಿದರ!

ಈ ಯೋಜನೆಯಲ್ಲಿ 2024 25ನೇ ಸಾಲಿನಲ್ಲಿ ಹೂಡಿಕೆ ಮಾಡುವವರಿಗೆ 7.5% ನಷ್ಟು ಬಡ್ಡಿ ದರ ನೀಡಲಾಗುವುದು. ಹಾಗಾಗಿ ನೀವು ಯೋಜನೆಯ ಅವಧಿ ಮುಗಿಯುವ ಹೊತ್ತಿಗೆ, ಮೂರು ಲಕ್ಷ ಹೂಡಿಕೆ ಮಾಡಿದರೆ ಆರು ಲಕ್ಷ ರೂಪಾಯಿಗಳನ್ನು ಪಡೆಯುತ್ತೀರಿ. ಕಿಸಾನ್ ವಿಕಾಸ ಪತ್ರವನ್ನು 1000, 2000, 5,000, 10,000, 50,000 ಈ ರೀತಿಯ ಬೆಲೆಯಲ್ಲಿ ಪಡೆದುಕೊಳ್ಳಬಹುದು.

ಸ್ವಂತ ಬಿಸಿನೆಸ್ ಮಾಡೋ ಮಹಿಳೆಯರಿಗೆ ಸಿಗುತ್ತೆ 2.5 ಲಕ್ಷ ಸಾಲ ಸೌಲಭ್ಯ! ಅಪ್ಲೈ ಮಾಡಿ

ಯಾರು ಖಾತೆ ತೆರೆಯಬಹುದು?

ವಯಸ್ಕರು ವಯಕ್ತಿಕ ಖಾತೆ ತೆರೆಯಬಹುದು ಅಥವಾ ಮೂರು ಜನ ವಯಸ್ಕರು ಸೇರಿ ಜಂಟಿ ಖಾತೆ ಆರಂಭಿಸಬಹುದು. ಹತ್ತು ವರ್ಷ ಮೇಲ್ಪಟ್ಟ ಮಕ್ಕಳ ಖಾತೆ ತೆರೆಯುವುದಕ್ಕೆ ಪಾಲಕರು ಗಾರ್ಡಿಯನ್ ಆಗಿರಬೇಕಾಗುತ್ತದೆ. ಈ ಯೋಜನೆಯಲಿ ಖಾತೆ ತೆರೆಯಲು ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಪಾಸ್ಪೋರ್ಟ್ ಅಳತೆಯ ಫೋಟೋ ಅಡ್ರೆಸ್ ಪ್ರೂಫ್ ಮೊದಲಾದ ಮಾಹಿತಿಗಳನ್ನು ನೀಡಬೇಕು. ಯಾವುದೇ ಭಾರತೀಯ ಅಂಚೆ ಕಚೇರಿ ಅಥವಾ ಬ್ಯಾಂಕುಗಳಲ್ಲಿ (Bank) ಕಿಸಾನ್ ವಿಕಾಸ ಪತ್ರ ಯೋಜನೆಗೆ ಹೂಡಿಕೆ ಮಾಡಲು ಅವಕಾಶವಿದೆ.

ಮಹಿಳೆಯರಿಗೆ ಲಕ್ಷ ಲಕ್ಷ ಆದಾಯ ನೀಡುವ ಪೋಸ್ಟ್ ಆಫೀಸ್ ಅದ್ಭುತ ಸ್ಕೀಮ್ ಇದು

If you deposit 3 lakh in this scheme, you will get 6 lakh rupees