ಗೂಗಲ್ ಪೇ ಇದ್ರೆ ಸಾಕು ಸುಲಭವಾಗಿ ಸಿಗುತ್ತೆ ಪರ್ಸನಲ್ ಲೋನ್! ಈ ರೀತಿ ಅಪ್ಲೈ ಮಾಡಿ

Personal Loan : ಇಂದು ಎಲ್ಲರ ಬಳಿ ಸ್ಮಾರ್ಟ್ ಫೋನ್ ಇದೆ, ಸ್ಮಾರ್ಟ್ ಫೋನ್ ಮೂಲಕವೇ ಹಣಕಾಸಿನ ವ್ಯವಹಾರವನ್ನು ಕೂಡ ಮಾಡುತ್ತಾರೆ. ಉದಾಹರಣೆಗೆ ಗೂಗಲ್ ಪೇ, ಫೋನ್ ಪೇ, ಅಮೇಜಾನ್ ಪೇ ಹೀಗೆ ಮೊದಲಾದ ಅಪ್ಲಿಕೇಶನ್ಗಳನ್ನು ಇಟ್ಟುಕೊಂಡು ಅದರ ಮೂಲಕ ಇನ್ನೊಬ್ಬರಿಗೆ ಹಣ ಕಳುಹಿಸುವುದು ಅಥವಾ ಪಡೆಯುವುದು ಎರಡು ಕೆಲಸವನ್ನು ಮಾಡಬಹುದು
ಹಾಗಾಗಿ ಬ್ಯಾಂಕಿಗೆ ಹೋಗದೆ ಮನೆಯಲ್ಲಿಯೇ ಕುಳಿತು ಸುಲಭವಾಗಿ ಹಣಕಾಸಿನ ವ್ಯವಹಾರ ನಡೆಸಬಹುದು. ಈಗ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದ್ದು ಗೂಗಲ್ ಪೇ (Google pay) ಯಲ್ಲಿ ನೀವು ಮನೆಯಲ್ಲಿಯೇ ಕುಳಿತು 15 ಸಾವಿರ ರೂಪಾಯಿಗಳ ವರೆಗೆ ಸಾಲ (Personal Loan) ಪಡೆಯಬಹುದು ಹಾಗೂ ಈ ಸಾಲ (Loan) ಕ್ಷಣಮಾತ್ರದಲ್ಲಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.. ಹೇಗೆ ಎಂಬುದನ್ನು ನೋಡೋಣ.
ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಬ್ಯಾಂಕ್ ಲೋನ್ ಪಡೆಯೋದು ಹೇಗೆ ಗೊತ್ತಾ; ಇಲ್ಲಿದೆ ಟಿಪ್ಸ್
ಗೂಗಲ್ ಪೇ ಸ್ಯಾಚಟ್ ಲೋನ್! (Google pay loan)
ಭಾರತದಲ್ಲಿ ಅತಿ ಹೆಚ್ಚು ಹಣಕಾಸಿನ ವ್ಯವಹಾರವನ್ನು ಗೂಗಲ್ ಪೇ ಮೂಲಕ ನಡೆಸಲಾಗುತ್ತದೆ ದೇಶಾದ್ಯಂತ ತನ್ನ ಗ್ರಾಹಕರನ್ನು ಇನ್ನಷ್ಟು ಸೆಳೆಯುತ್ತಿದೆ ಎನ್ನಬಹುದು, ಇದಕ್ಕೆ ಮುಖ್ಯ ಕಾರಣ ಗೂಗಲ್ ಪೇ ನಲ್ಲಿ ಸ್ಯಾಚೆಟ್ ಲೋನ್ ನೀಡಲಾಗುತ್ತದೆ. ಅಂದರೆ ಇನ್ಸ್ಟೆಂಟ್ ಆಗಿ 15,000ಗಳ ವರೆಗೆ ನೀವು ಸಾಲವನ್ನು ಪಡೆಯಬಹುದು ಇದು ಆನ್ಲೈನ್ ನಲ್ಲಿಯೇ ಮಾಡಿಕೊಳ್ಳಬಹುದಾದ ವ್ಯವಸ್ಥೆ ಆಗಿದೆ.
ಇದು ಏಳು ದಿನಗಳಿಂದ 12 ತಿಂಗಳವರೆಗೆ ನೀಡಬಹುದಾದ ಸಾಲ ಸೌಲಭ್ಯ ಆಗಿದೆ. ತುರ್ತು ವೈದ್ಯಕೀಯ ಬಿಲ್ಪಾವತಿಗಾಗಿ ಅಥವಾ ಇತರ ಯಾವುದೇ ವೆಚ್ಚ ನಿಮ್ಮ ನಿರೀಕ್ಷೆಗಿಂತ ಹೆಚ್ಚಾಗಿದ್ದರೆ ಅದನ್ನು ತ್ವರಿತವಾಗಿ ಪಾವತಿ ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.
ಗೂಗಲ್ ಪೇ ಲೋನ್ ಪಡೆದುಕೊಳ್ಳಲು ಯಾವುದೇ ಹೆಚ್ಚುವರಿ ದಾಖಲೆ ಕೊಡುವ ಅಗತ್ಯ ಇಲ್ಲ, ಈ ಸಾಲದ ಪ್ರೋಸೆಸ್ ಬಹಳ ವೇಗವಾಗಿ ನಡೆಯುವಂತದ್ದು. ನೀವು ಅರ್ಜಿ ಸಲ್ಲಿಸಿದ ನಂತರ ಅನುಮೋದನೆ ಸಿಕ್ಕರೆ ಕೆಲವೇ ಕ್ಷಣಗಳಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಸಾಲ ಮರುಪಾವತಿಗೆ ಏಳರಿಂದ 12 ತಿಂಗಳುಗಳ ಅವಕಾಶ ಇರುತ್ತದೆ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಪಡೆಯಿರಿ 20,500 ರೂಪಾಯಿ! ಭರ್ಜರಿ ಕೊಡುಗೆ
ಬ್ಯಾಂಕ್ ಗಳ ಬೆಂಬಲ!
ಗೂಗಲ್ ಪೇ ಬೇರೆ ಬೇರೆ ಬ್ಯಾಂಕುಗಳ ಜೊತೆಗೆ ಕೈಜೋಡಿಸಿದ್ದು ಲೋನ್ ನೀಡುವುದಕ್ಕಾಗಿ ಫೆಡರಲ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗಳ ಜೊತೆಗೆ ಟೈ ಅಪ್ ಮಾಡಿಕೊಂಡಿದೆ. ಹಾಗಾಗಿ ಆ ಬ್ಯಾಂಕ್ ನಲ್ಲಿ ಸಿಗುವ ಹಣವನ್ನು ನೀವು ಗೂಗಲ್ ಪೇ ಮೂಲಕ ಪಡೆದುಕೊಳ್ಳಬಹುದು. 21 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಸ್ಯಾಚೆಟ್ ಲೋನ್ ಪಡೆಯಬಹುದು.
ಇದಕ್ಕೆ ಗೂಗಲ್ ಪೇ ಗ್ರಾಹಕರಾಗಿರುವುದು ಬಹಳ ಮುಖ್ಯ ಆಧಾರ್ ಕಾರ್ಡ್ ಲಿಂಕ್ (Aadhaar Card link) ಆಗಿರಬೇಕು ಜೊತೆಗೆ ಸಿಬಿಲ್ ಸ್ಕೋರ್ (CIBIL score) 750 ಪಾಯಿಂಟ್ಸ್ ನಷ್ಟು ಕನಿಷ್ಠ ಇರಬೇಕು.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಪಡೆಯಿರಿ 20,500 ರೂಪಾಯಿ! ಭರ್ಜರಿ ಕೊಡುಗೆ
ಗೂಗಲ್ ಪೇ ಲೋನ್ ಪಡೆಯುವುದು ಹೇಗೆ!
ಇದಕ್ಕಾಗಿ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಇರುವುದು ಕಡ್ಡಾಯ ಈ ಅಪ್ಲಿಕೇಶನ್ ಓಪನ್ ಮಾಡಿದ ತಕ್ಷಣ ನಿಮಗೆ ಮುಖ್ಯ ಮೆನುವಿನಲ್ಲಿ ಲೋನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ ನಂತರ ಕೊಡುಗೆಗಳು ಎನ್ನುವ ಆಯ್ಕೆ ಇದೆ, ಅದರ ಮೇಲೆ ಕ್ಲಿಕ್ ಮಾಡಿ.
ಈಗ ನಿಮಗೆ ಸಾಲದ ಮೊತ್ತ ಎಷ್ಟು ಬೇಕು ಎನ್ನುವುದನ್ನು ಆಯ್ಕೆ ಮಾಡಬೇಕು ಬಳಿಕ ಅದಕ್ಕೆ ಸಂಬಂಧಪಟ್ಟ ಎಲ್ಲಾ ನಿಯಮಗಳು ಇರುತ್ತವೆ, ಅದನ್ನ ಸರಿಯಾಗಿ ಓದಿಕೊಂಡು ನಂತರ ಮುಂದುವರೆಯಿರಿ.
ಇಲ್ಲಿ ಕೆ ವೈ ಸಿ ಪ್ರಾಸೆಸ್ ಆಗಿರುವುದು ಕಡ್ಡಾಯ. ಒಂದು ವೇಳೆ ನೀವು ಈಗಾಗಲೇ ಮಾಡಿಕೊಂಡಿದ್ದರೆ ಮತ್ತೆ ಮಾಡುವ ಅಗತ್ಯ ಇಲ್ಲ. ನೀವು ಅರ್ಹರಾಗಿದ್ದರೆ ಕೆಲವೇ ಕ್ಷಣಗಳಲ್ಲಿ ನಿಮ್ಮ ಸಾಲ ಮಂಜೂರು ಆಗುತ್ತದೆ.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50 ಸಾವಿರದಿಂದ 1 ಲಕ್ಷದವರೆಗೆ ಸ್ಕಾಲರ್ಶಿಪ್! ಅಪ್ಲೈ ಮಾಡಿ
If you have Google Pay App, you can easily get a personal loan
ಬ್ಯಾಂಕ್ ಗಳ ಬೆಂಬಲ!



