ಚಿಕನ್ ಪ್ರಿಯರಿಗೆ ಬೇಸರದ ಸುದ್ದಿ! ಕೋಳಿ ಮಾಂಸ ಬೆಲೆಯಲ್ಲಿ ದಾಖಲೆಯ ಏರಿಕೆ

Story Highlights

ಕೋಳಿಮಾಂಸ ಸೇವಿಸುವವರಿಗೆ ಆತಂಕ ಸೃಷ್ಟಿಸಿದ ಬೆಲೆ; ಗಗನಕ್ಕೇರಿದೆ ಚಿಕನ್ ಪ್ರೈಸ್!

ಇತ್ತೀಚಿಗೆ ನಾವು ಹಣದುಬ್ಬರದ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಪ್ರತಿಯೊಂದು ವಸ್ತುವಿನ ಬೆಲೆಯೂ ಕೂಡ ಗಗನಕ್ಕೆ ಏರಿದೆ. ಅಕ್ಕಿ, ಬೇಳೆ, ಕಾಳುಗಳು, ತರಕಾರಿ, ಹಣ್ಣು, ಹೂವು ಹೀಗೆ ದಿನನಿತ್ಯ ಬಳಸುವ ಪ್ರತಿಯೊಂದು ವಸ್ತುವಿನ ಬೆಲೆಯೂ ಕೂಡ ಜಾಸ್ತಿಯಾಗಿದೆ. ದುಡಿಮೆ ಒಂದು ಪರ್ಸೆಂಟ್ ಆಗಿದ್ರೆ ಖರ್ಚು ಅದರ ಡಬಲ್ ಎನ್ನುವಂತೆ ಆಗಿದೆ.

ಹೌದು, ನಮ್ಮ ದುಡಿಮೆಗೆ ತಕ್ಕಂತೆ ಖರ್ಚು ಇದ್ರೆ ನಿಭಾಯಿಸುವುದು ಕಷ್ಟ, ಆದರೆ ದುಡಿಮೆಗಿಂತ ಮೂರು ಪಟ್ಟು ಹೆಚ್ಚು ಖರ್ಚೇ ಆದರೆ ಆ ವ್ಯಕ್ತಿ ಎಷ್ಟು ದುಡಿದರು ಸಂಸಾರ ನಡೆಸುವುದೇ ಕಷ್ಟವಾಗುತ್ತದೆ..

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಗಳಿಸಬಹುದು 20,000! ಇಲ್ಲಿದೆ ಮಾಹಿತಿ

ಇದಕ್ಕೆ ಪೂರಕವಾಗಿ ಬೆಲೆ ಏರಿಕೆ (price increased) ಎನ್ನುವುದು ಜನರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ ಇಷ್ಟು ದಿನ ಸಸ್ಯಹಾರಿಗಳಿಗೆ ಮಾತ್ರ ಬೆಲೆ ಏರಿಕೆ ಬಿಸಿ ತಟ್ಟಿತ್ತು. ಆದರೆ ಈಗ ಮಾಂಸ (meet) ಸೇವನೆ ಮಾಡುವವರು ಕೂಡ ತಲೆಕೆಡಿಸಿಕೊಳ್ಳುವಂತೆ ಆಗಿದೆ ಯಾಕೆ ಅಂದರೆ ಚಿಕನ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತದೆ.

ದಿಡೀರ್ ಅಂತ ಜಾಸ್ತಿ ಆಯ್ತು ಚಿಕನ್ ಪ್ರೈಸ್ (Chicken meet Price increased)

Chicken Priceನೀವು ಮಾಂಸಹಾರಿಗಳಾಗಿದ್ದರೆ ಅಥವಾ ಚಿಕನ್ ಪ್ರಿಯರಾಗಿದ್ರೆ, ಖಂಡಿತವಾಗಿಯೂ ನಿಮಗೆ ಬೇಸರ ಆಗಿಯೇ ಆಗುತ್ತೆ. ಅದರಲ್ಲಿ ಪ್ರತಿ ನಿತ್ಯವೂ ಚಿಕನ್ ಸೇವನೆ ಮಾಡುವವರಿಗೆ ಈ ಬೆಲೆ ಏರಿಕೆ ಬಿಸಿ ತಟ್ಟುತ್ತದೆ. ಈ ಹಿಂದೆ 100ರಿಂದ 150 ರೂಪಾಯಿಗಳಿಗೆ ಒಂದು ಕೆಜಿ ಚಿಕನ್ ಖರೀದಿ ಮಾಡಬಹುದಾಗಿತ್ತು.

ಅದೇ ಚಿಕನ್ ಬೆಲೆ ಕಳೆದ ವಾರ 180ಕ್ಕೆ ಏರಿಕೆ ಆಗಿತ್ತು ಆದರೆ ಈಗ ದಿಡೀರ್ ಅಂತ 250ಗಳಿಗೆ ಒಂದು ಕೆಜಿ ಚಿಕನ್ ಖರೀದಿಸಬೇಕು. ಅಂದರೆ ಒಮ್ಮೆಲೆ ಸುಮಾರು 100 ರೂಪಾಯಿಗಳಷ್ಟು ಏರಿಕೆ ಕಂಡಿದೆ ಎನ್ನಬಹುದು.

ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು ಗೊತ್ತಾ? ಹೊಸ ನಿಯಮ

ಚಿಕನ್ ದರ ಏರಿಕೆಗೆ ಕಾರಣ ಏನು?

ಹೀಗೆ, ಒಮ್ಮಿಂದೊಮ್ಮೆಲೆ ಚಿಕನ್ ದರ ಏರಿಕೆ ಆಗಿರುವುದಕ್ಕೆ ಮುಖ್ಯ ಕಾರಣ ಈ ದಿನ ಬಿಸಿ ವಾತಾವರಣ. ವಾತಾವರಣದಲ್ಲಿ ಸಿಕ್ಕಾಪಟ್ಟೆ ಬಿಸಿ ಇರುವ ಹಿನ್ನಲೆಯಲ್ಲಿ ಸರಿಯಾಗಿ ಕೋಳಿಗಳು ಮೊಟ್ಟೆ ಇಡುತ್ತಿಲ್ಲ.

ಅಷ್ಟೇ ಅಲ್ಲದೆ ಬಿಸಿ ಹಾಗೂ ತಾಪಮಾನದಲ್ಲಿ ಇರುವ ಉಷ್ಣಾಂಶದಿಂದಾಗಿ ಕೋಳಿಗಳು ಸಾವನ್ನಪ್ಪುತ್ತಿವೆ ಇದರಿಂದಾಗಿ ಕೋಳಿ ಸಾಕಾಣಿಕೆ ದೊಡ್ಡ ಸಮಸ್ಯೆ ಆಗುತ್ತಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಚಿಕನ್ ದರವು ಕೂಡ ಆಟೋಮೆಟಿಕ್ ಆಗಿ ಮೇಲೇರಿದೆ.

ಕೇವಲ 151 ರೂಪಾಯಿ ಉಳಿತಾಯಕ್ಕೆ 31 ಲಕ್ಷ ನಿಮ್ಮದಾಗಿಸಿಕೊಳ್ಳಿ! ಬೆಸ್ಟ್ ಎಲ್ಐಸಿ ಸ್ಕೀಮ್

Increase in the price of chicken meat, here is the details

Related Stories