ನಿಮ್ಮ ಮಗಳ ಹೆಸರಲ್ಲಿ 1,799 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ 7 ಲಕ್ಷ ಪಡೆಯಿರಿ
ಹಲವು ದಶಕಗಳಿಂದ ಗ್ರಾಹಕರ ನಂಬಿಕೆಯನ್ನು ಗಳಿಸಿಕೊಂಡು ಬಂದಿರುವ ಜೀವ ವಿಮಾ ಕಂಪನಿ ಎಲ್ಐಸಿ (LIC). ಭಾರತೀಯ ಜೀವ ವಿಮಾ ಕಂಪನಿ ಆಗಿರುವ ಎಲ್ಐಸಿಯಲ್ಲಿ ಇಲ್ಲಿಯವರೆಗೆ ಕೋಟ್ಯಾಂತರ ಜನ ಹಣ ಹೂಡಿಕೆ ಮಾಡಿದ್ದಾರೆ, ಮಾಡುತ್ತಿದ್ದಾರೆ ಕೂಡ.
ಎಲ್ಐಸಿಯಲ್ಲಿ ಅಲ್ಪಾವಧಿಯ ಹೂಡಿಕೆಯಿಂದ ಹಿಡಿದು ದೀರ್ಘಾವಧಿಯವರೆಗೆ ನೀವು ಹಣ ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯಬಹುದು.
ಡ್ರೈವಿಂಗ್ ಲೈಸೆನ್ಸ್ ಪಡೆಯೋದು ಈಗ ಇನ್ನಷ್ಟು ಸುಲಭ! ನಿಯಮದಲ್ಲಿ ಬದಲಾವಣೆ
ಎಲ್ಐಸಿ ಜೀವ ವಿಮೆ ಅಥವಾ ಲೈಫ್ ಇನ್ಶೂರೆನ್ಸ್ (Life Insurance) ಗಳನ್ನು ನೀಡುವುದರ ಜೊತೆಗೆ ಸಾಕಷ್ಟು ಉಳಿತಾಯ ಯೋಜನೆ (savings scheme) ಗಳನ್ನು ಕೂಡ ಪರಿಚಯಿಸಿದೆ. ಅದರಲ್ಲೂ ಇತ್ತೀಚಿಗೆ ಮಹಿಳೆಯರಿಗಾಗಿಯೇ ಪರಿಚಯ ಹೊಂದಿರುವ ಈ ಒಂದು ಪಾಲಿಸಿ ಮೂಲಕ ನೀವು ಅತಿ ಕಡಿಮೆ ಅವಧಿಯಲ್ಲಿ 7 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು.
ಎಲ್ಐಸಿ ಪರಿಚಯಿಸಿರುವ ಆಧಾರ್ ಶಿಲಾ ಪಾಲಿಸಿ! (Aadhar shila Yojana)
ನಾನು ಲಿಂಕ್ ವೈಯಕ್ತಿಕ ಜೀವ ವಿಮೆ ಆಗಿದೆ ಆದಾರ್ ಶಿಲಾ ಪಾಲಿಸಿ. ವಿಶೇಷವಾಗಿ ಮಹಿಳೆಯರಿಗಾಗಿಯೇ ಈ ಹೂಡಿಕೆ ಯೋಜನೆ ಆರಂಭಿಸಲಾಗಿದ್ದು, ನೀವು ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಅಕೌಂಟ್ ತೆರೆದರೆ 7 ಲಕ್ಷ ರೂಪಾಯಿಗಳ ಆದಾಯ ಪಡೆಯಬಹುದು.
ಈ ಯೋಜನೆಯಲ್ಲಿ ಎಂಟು ವರ್ಷದ ಮಗುವಿನಿಂದ ಹಿಡಿದು 55 ವರ್ಷ ವಯಸ್ಸಿನವರೆಗಿನ ವ್ಯಕ್ತಿ ಹೂಡಿಕೆ ಮಾಡಬಹುದು. ಮಕ್ಕಳ ಹೆಸರಿನಲ್ಲಿ ಜೀವ ವಿಮೆ ಆರಂಭಿಸಲು ಬಯಸಿದರೆ ಪೋಷಕರು ಆರಂಭಿಸಬಹುದು.
ಎಲ್ಐಸಿಯು ಆಧಾರ್ ಶಿಲಾ ಯೋಜನೆಯಲ್ಲಿ, ಹತ್ತರಿಂದ ಇಪ್ಪತ್ತು ವರ್ಷಗಳ ವರೆಗೆ ಮೆಚುರಿಟಿ ಅವಧಿ ಇರುತ್ತದೆ ಹಾಗೂ ಗರಿಷ್ಠ 70 ವರ್ಷಕ್ಕೆ ಯೋಜನೆಯ ಅವಧಿ ಮುಕ್ತಾಯಗೊಳ್ಳುತ್ತದೆ. ಆಧಾರ್ ಶಿಲಾ ಯೋಜನೆಯಲ್ಲಿ 75,000ಗಳ ಕನಿಷ್ಠ ಹೂಡಿಕೆಯಿಂದ ಮೂರು ಲಕ್ಷ ರೂಪಾಯಿಗಳ ಗರಿಷ್ಠ ಹೂಡಿಕೆಯನ್ನು ಮಾಡಬಹುದು.
ಫೋನ್ ಪೇ ಯಲ್ಲಿ ಎರಡು ಬ್ಯಾಂಕ್ ಖಾತೆ ಸೇರಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ
ಎಲ್ಐಸಿ ಆದಾರ್ ಶಿಲಾ ಹೂಡಿಕೆಯ ಲೆಕ್ಕಾಚಾರ!
ಒಂದು ಉದಾಹರಣೆಯ ಪ್ರಕಾರ, ಒಬ್ಬ ಮಹಿಳೆ ತನ್ನ 30ನೇ ವಯಸ್ಸಿನಲ್ಲಿ ಪ್ರತಿದಿನ 58 ರೂಪಾಯಿಗಳನ್ನು ಹೂಡಿಕೆ ಮಾಡಲು ಬಯಸಿದರೆ, ಪ್ರತಿ ತಿಂಗಳು 1,799ಗಳನ್ನು ಹೂಡಿಕೆ ಮಾಡಬೇಕು. ಅಂದರೆ ಒಂದು ವರ್ಷಕ್ಕೆ 21,918 ರೂಪಾಯಿಗಳನ್ನು ಪ್ರೀಮಿಯಂ ಆಗಿ ಪಾವತಿಸಬೇಕು.
ಇದು 20 ವರ್ಷಗಳ ಮೆಚುರಿಟಿ ಅವಧಿಯಲ್ಲಿ ಹೂಡಿಕೆ ಮಾಡಲ್ಪಡುವ ಹಣ 4,29,392 ರೂ. ಹಾಗೂ ಯೋಜನೆ ಮುಕ್ತಾಯದ ಅವಧಿಯಲ್ಲಿ ರೂ. 7,94,000 ಗಳನ್ನು ಹಿಂಪಡೆಯಬಹುದು.
ಎಲ್ಐಸಿ ಆಧಾರ್ ಶಿಲಾ ಯೋಜನೆಯಲ್ಲಿ ನಾಮಿನಿ ಆಯ್ಕೆ ಮಾಡಿಕೊಳ್ಳಬಹುದು. ಈ ಎಲ್ ಐ ಸಿ ಪ್ರೀಮಿಯಂ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಎಲ್ಐಸಿ ಕಚೇರಿಗೆ ಭೇಟಿ ನೀಡಿ ಅಥವಾ ಏಜೆಂಟ್ ಗಳನ್ನು ಸಂಪರ್ಕಿಸಬಹುದು. ಅಥವಾ ಎಲ್ಐಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ರೆಟ್ರೋ ಲುಕ್ ನೊಂದಿಗೆ ರೋಡಿಗಿಳಿಯಲಿದೆ RX 100 ಬೈಕ್; ಖರೀದಿಗೆ ಮುಗಿಬಿದ್ದ ಜನ!
Invest Rs 1,799 and get Rs 7 lakh in this LIC Scheme