Business News

ರೆಟ್ರೋ ಲುಕ್ ನೊಂದಿಗೆ ರೋಡಿಗಿಳಿಯಲಿದೆ RX 100 ಬೈಕ್; ಖರೀದಿಗೆ ಮುಗಿಬಿದ್ದ ಜನ!

Yamaha RX 100 Bike : ನೀವು ಹಳೆಯ ಕಾಲದ ಹಿಂದಿ ಅಥವಾ ಇತರ ಭಾಷೆಯ ಸಿನಿಮಾಗಳನ್ನು ನೋಡಿದ್ರೆ, ಕಾಲೇಜಿನ ಯುವಕರು ಅಥವಾ ರೋಡ್ ರೋಮಿಯೋ ಗಳು RX 100 ಬೈಕ್ ನಲ್ಲಿ ಸೌಂಡ್ ಮಾಡ್ತಾ ಬರುವುದನ್ನ ನೋಡಿರಬಹುದು.

ಎಷ್ಟೋ ಬಾರಿ ಇಂಥವರನ್ನು ನೋಡಿ ಇಂಪ್ರೆಸ್ ಆಗಿ ನಿಜ ಜೀವನದಲ್ಲಿಯೂ ಕೂಡ RX, 100 ಬೈಕ್ ಖರೀದಿಸಿ ಶೋಕಿ ಮಾಡಿದವರು ಇದ್ದಾರೆ. ಒಂದು ಕಾಲದಲ್ಲಿ ಅಷ್ಟರ ಮಟ್ಟಿಗೆ ಯುವಕರ ಹಾರ್ಟ್ ಫೇವರೆಟ್ ಬೈಕ್ ಇದಾಗಿತ್ತು.

Yamaha RX 100 bike to hit the road with retro look

ಉಚಿತ ವಸತಿ ಯೋಜನೆಯ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ; ಇಲ್ಲಿದೆ ಮಾಹಿತಿ

ಕೆಲವು ವರ್ಷಗಳ ಹಿಂದೆ ಯಮಹಾ ಕಂಪನಿ ತನ್ನ RX 100 ಬೈಕ್ ತಯಾರಿಕೆಯನ್ನು ಸ್ಥಗಿತಗೊಳಿಸಿತ್ತು. ಇದರಿಂದ ಅದೇಷ್ಟೋ ಯುವಕರಿಗೆ ಬೇಸರವಾಗಿತ್ತು. ಆದರೆ ಈಗ ಮತ್ತೆ ಹೊಸ ಲುಕ್ ನಲ್ಲಿ ಹಳೆಯ ಸ್ಟೈಲ್ ನಲ್ಲಿ ಯಮಹ RX 100 ಮಾರುಕಟ್ಟೆಗೆ ಬರಲಿದೆ ಎನ್ನುವ ಸುದ್ದಿ ವೈರಲ್ ಆಗಿದೆ.

ಹೊಸ ಯಮಹ RX 100 Bike ನಲ್ಲಿ ಹೊಸತೇನಿದೆ?

ಯಮಹ RX 100, 225.9cc ಎಂಜಿನ್ ನೊಂದಿಗೆ ಬರಲಿದೆ. ಇದು 20.1 ಬಿಎಚ್‌ಪಿ ಪವರ್ ಹಾಗೂ 19.93 ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹೊಸ RX 100, ಪ್ರತಿ ಲೀ. ಗೆ 65 ಕಿಲೋಮೀಟರ್ ಮೈಲೇಜ್ ನೀಡುವ ಸಾಧ್ಯತೆ ಇದೆ.

ಬಾಡಿಗೆ ಮನೆಯಲ್ಲಿ ಇರೋರಿಗೆ ಗುಡ್ ನ್ಯೂಸ್! ಇನ್ಮುಂದೆ ಕೊಡಬೇಕಿಲ್ಲ ಅಡ್ವಾನ್ಸ್

Yamaha RX100 bike Re Launchಯಮಹಾ RX 100 ವೈಶಿಷ್ಟ್ಯತೆಗಳು!

ಯಮಹಾ ತನ್ನ ಹೊಸ RX 100 ನಲ್ಲಿಯೂ ಕೂಡ ಹಳೆಯ ಲುಕ್ ಅನ್ನು ಉಳಿಸಿಕೊಂಡಿದೆ ಇದರ ಜೊತೆಗೆ ಇನ್ನೊಂದಿಷ್ಟು ಸ್ಟೈಲಿಶ್ ಆಗಿರುವ ಫೀಚರ್ ಗಳನ್ನು ಅಳವಡಿಸಲಾಗಿದೆ. ಫ್ಲ್ಯಾಟ್ ಆಗಿರುವ ಸೀಟುಗಳು ಹಾಗೂ ಮುಂಭಾಗದಲ್ಲಿ ರೆಟ್ರೋ ಲುಕ್ ನೀಡುವ ವಿನ್ಯಾಸ ಕಾಣಬಹುದು.

ದೊಡ್ಡದಾಗಿರುವ ರೌಂಡ್ ಹ್ಯಾಂಡಲ್ ಬಾರ್, ಟಿಯರ್ ಡ್ರಾಪ್ ಸ್ಟೈಲ್ ನಲ್ಲಿ ಇಂಧನ ಟ್ಯಾಂಕ್, ಅತ್ಯುತ್ತಮ ಲುಕ್ ಹೊಂದಿರುವ ಟೈಲ್ ಲ್ಯಾಂಪ್ ಗಳು, ಮಾಡ್ರನ್ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮೊದಲಾದ ವೈಶಿಷ್ಟತೆಗಳನ್ನು ಕಾಣಬಹುದು.

ಸ್ವಂತ ಆಸ್ತಿ, ಜಮೀನು ಇರೋರಿಗೆ ಇನ್ಮುಂದೆ ಹೊಸ ರೂಲ್ಸ್! ಏಪ್ರಿಲ್ 1ರಿಂದ ಜಾರಿ

ಯಮಹಾ RX 100 ಬೆಲೆ!

ಇನ್ನು ಈ ಹೊಸ ಮಾದರಿಯ ಬೈಕ್ ನ ಬೆಲೆ ನೋಡುವುದಾದರೆ ಎಕ್ಸ್ ಶೋರೂಮ್ ಬೆಲೆ 1.25 ಲಕ್ಷ ರೂಪಾಯಿಗಳಿಂದ 1.50 ಲಕ್ಷ ರೂಪಾಯಿಗಳವರೆಗೆ ಇರಬಹುದು. ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರಲಿರುವ ಯಮಹಾದ RX 100 ಬುಲೆಟ್ ಬೈಕ್ ಗಳಿಗೆ ನೇರವಾಗಿ ಸ್ಪರ್ಧಿಸಲಿದೆ.

ಒಟ್ಟಿನಲ್ಲಿ ಹಳೆಯ ಯಮಹಾ RX 100 ಇಷ್ಟಪಡುತ್ತಿದ್ದವರಿಗೆ ಈ ಹೊಸ RX 100 ಬಿಡುಗಡೆ ಆದರೆ ಜನರ ಮೆಚ್ಚುಗೆಗೆ ಪಾತ್ರವಾಗಲಿದ್ಯಾ ಇಲ್ವಾ ಎನ್ನುವುದನ್ನು ಕಾದು ನೋಡಬೇಕು.

ಈ ಸ್ಕೀಮ್ ನಲ್ಲಿ 5 ವರ್ಷಕ್ಕೆ 6 ಲಕ್ಷ ಹೂಡಿಕೆ ಮಾಡಿದ್ರೆ ಬ್ಯಾಂಕಿಗಿಂತ ಹೆಚ್ಚು ಬಡ್ಡಿ ಸಿಗುತ್ತೆ!

Yamaha RX 100 bike to hit the road with retro look

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories