ಉಚಿತ ವಸತಿ ಯೋಜನೆಯ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ; ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರದ ಆವಾಸ್ ಯೋಜನೆಯ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ!

ಬಡವರ ಕನಸಿನ ಮನೆ ನಿರ್ಮಾಣಕ್ಕೆ, ಕೇಂದ್ರ ಸರ್ಕಾರದ ಕನಸಿನ ಯೋಜನೆ ಪ್ರಧಾನಮಂತ್ರಿ ಆವಾಸ್ ಯೋಜನೆ ಪೂರಕವಾಗಿದೆ. ಬಡತನ ರೇಖೆಗಿಂತ ಕೆಳಗಿನವರು, ಸಣ್ಣ ಪುಟ್ಟ ಗುಡಿಸಿಲಿನಲ್ಲಿ ವಾಸ ಮಾಡುತ್ತಿರುವವರು, ಬಾಡಿಗೆ ಮನೆಯಲ್ಲಿ ಜೀವನ ಕಳೆಯುತ್ತಿರುವವರು, ಸ್ಲಮ್ ಗಳಲ್ಲಿ ವಾಸವಾಗಿರುವವರು, ಅಷ್ಟೇ ಯಾಕೆ ನಗರ ಪ್ರದೇಶಗಳಲ್ಲಿ ಅಥವಾ ಹಳ್ಳಿಗಳಲ್ಲಿ ಮಧ್ಯಮ ವರ್ಗದ ಕುಟುಂಬದವರಿಗೂ ಕೂಡ ಸ್ವಂತ ಮನೆ ನಿರ್ಮಾಣದ ಕನಸನ್ನು ಈಡೇರಿಸಿಕೊಳ್ಳುವುದಕ್ಕೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಸಹಕಾರಿಯಾಗಿದೆ.

ಬಾಡಿಗೆ ಮನೆಯಲ್ಲಿ ಇರೋರಿಗೆ ಗುಡ್ ನ್ಯೂಸ್! ಇನ್ಮುಂದೆ ಕೊಡಬೇಕಿಲ್ಲ ಅಡ್ವಾನ್ಸ್

ಯಾರಿಗೆ ಸಿಗಲಿದೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನ!

ಪ್ರಧಾನ ಮಂತ್ರಿ ಆವಾಸ್ ಯೋಜನೆ ಆರಂಭವಾಗಿ ಕೆಲವು ವರ್ಷಗಳಲ್ಲಿ ಕೋಟ್ಯಂತರ ಮನೆ ನಿರ್ಮಾಣ ಮಾಡಿಕೊಡುವಲ್ಲಿ ಸರ್ಕಾರ ಯಶಸ್ವಿ ಆಗಿದೆ. ಇದೀಗ ಕ್ರೆಡಿಟ್ ಲಿಂಕ್ ಸಬ್ಸಿಡಿ (credit link subsidy) ನೀಡುವ ಮೂಲಕ ಹೊಸ ಮನೆ ನಿರ್ಮಾಣ (own house) ಮಾಡಿಕೊಳ್ಳುವವರಿಗೆ 2.65 ಲಕ್ಷ ರೂಪಾಯಿಗಳ ಸಬ್ಸಿಡಿ ಸರ್ಕಾರ ನೀಡುತ್ತದೆ.

ಉಚಿತ ವಸತಿ ಯೋಜನೆಯ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ; ಇಲ್ಲಿದೆ ಮಾಹಿತಿ - Kannada News

ಇನ್ನು ನೀವು ಈ ಸಬ್ಸಿಡಿಯನ್ನು ಪಡೆದುಕೊಳ್ಳುವುದಕ್ಕೆ, ಬ್ಯಾಂಕ್ ನಲ್ಲಿ ಗೃಹ ಸಾಲ (Home loan) ತೆಗೆದುಕೊಳ್ಳುವ ಸಮಯದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಗೃಹ ಸಾಲ ತೆಗೆದುಕೊಳ್ಳುತ್ತಿರುವುದಾಗಿ ಬ್ಯಾಂಕ್ ಗೆ ತಿಳಿಸಬೇಕು. ಅಂದ್ರೆ ಗೃಹ ಸಾಲದ (Home Loan) ಜೊತೆಗೆ ಪ್ರಧಾನಮಂತ್ರಿಯ ಆವಾಸ್ ಯೋಜನೆಗೂ ಅರ್ಜಿ ಸಲ್ಲಿಸಬೇಕು.

ಸ್ವಂತ ಆಸ್ತಿ, ಜಮೀನು ಇರೋರಿಗೆ ಇನ್ಮುಂದೆ ಹೊಸ ರೂಲ್ಸ್! ಏಪ್ರಿಲ್ 1ರಿಂದ ಜಾರಿ

ನೀವು ಈ ಹಿಂದೆ ಗೃಹ ಸಾಲವನ್ನು ತೆಗೆದುಕೊಂಡಿದ್ದು, ಈಗ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುತ್ತೇವೆ ಎಂದರೆ ಅದು ಸಾಧ್ಯವಿಲ್ಲ. ಗೃಹ ಸಾಲ ಹಾಗೂ PMAY ಗೆ ಒಟ್ಟಿಗೆ ಅರ್ಜಿ ಸಲ್ಲಿಸಬೇಕು. ಇನ್ನು 2.65 ಲಕ್ಷ ರೂಪಾಯಿಗಳ ಸಬ್ಸಿಡಿಯನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಜಮಾ ಮಾಡಲಾಗುತ್ತದೆ.

ಬ್ಯಾಂಕ್ ನಲ್ಲಿ ನಿಮ್ಮ ಆದಾಯದ ಅನುಗುಣವಾಗಿ 12 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಹಾಗೂ ಈ ಸಾಲದ ಮೇಲೆ 2.65 ಲಕ್ಷ ರೂಪಾಯಿಗಳನ್ನು ಸರ್ಕಾರ ಸಬ್ಸಿಡಿಯಾಗಿ ಕೊಡಲಿದ್ದು ಅಷ್ಟು ಹಣವನ್ನು ಬಿಟ್ಟು ಉಳಿದ ಮೊತ್ತವನ್ನು ನೀವು 20 ವರ್ಷಗಳ ಅವಧಿಯಲ್ಲಿ ಪಾವತಿ ಮಾಡಬೇಕು.

ಈ ಸ್ಕೀಮ್ ನಲ್ಲಿ 5 ವರ್ಷಕ್ಕೆ 6 ಲಕ್ಷ ಹೂಡಿಕೆ ಮಾಡಿದ್ರೆ ಬ್ಯಾಂಕಿಗಿಂತ ಹೆಚ್ಚು ಬಡ್ಡಿ ಸಿಗುತ್ತೆ!

Free Housing Schemeಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಪಟ್ಟಿ ಬಿಡುಗಡೆ!

ಯೋಜನೆ ಅಡಿಯಲ್ಲಿ ಈಗಾಗಲೇ ಲಕ್ಷಾಂತರ ಅರ್ಜಿಗಳು ಸರ್ಕಾರಕ್ಕೆ ಸಂದಾಯವಾಗಿವೆ. ಇದೀಗ ಫಲಾನುಭವಿಗಳ ಲಿಸ್ಟ್ (beneficiary list) ಅನ್ನು ಅಧಿಕೃತ ವೆಬ್ಸೈಟ್ನಲ್ಲಿ ಸರ್ಕಾರ ಬಿಡುಗಡೆ ಮಾಡಿದ್ದು ನೀವು ಅರ್ಜಿದಾರರಾಗಿದ್ದರೆ ನಿಮಗೆ ಸಬ್ಸಿಡಿ ಸಿಗುತ್ತದೆಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿ.

*ಮೊದಲಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ ಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://pmaymis.gov.in/

ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾಯಿಸಬೇಕಾ? ಆನ್‌ಲೈನ್‌ನಲ್ಲೇ ಬದಲಾಯಿಸಿ

*ಈಗ ಫಲಾನುಭವಿಗಳ ಲಿಸ್ಟ್ ಎಂದು ಸರ್ಚ್ ಮಾಡಿ. ಹೊಸ ಪುಟ ಕರೆದುಕೊಳ್ಳುತ್ತದೆ ಅದರಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

*ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿದ ನಂತರ ಅದಕ್ಕೆ ಒಟಿಪಿ (OTP) ಕಳುಹಿಸಲಾಗುತ್ತದೆ, ಅದನ್ನ ನಮೂದಿಸಿ.

*ಈಗ ನಿಮಗೆ ಫಲಾನುಭವಿಗಳ ಲಿಸ್ಟ್ ಕಾಣಿಸುತ್ತದೆ. ಈ ಲಿಸ್ಟ್ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಇದೆ ಡೌನ್ಲೋಡ್ ಮಾಡಿಕೊಂಡು ನಿಮ್ಮ ಹೆಸರು ಇದೆಯಾ ಎನ್ನುವುದನ್ನು ಸುಲಭವಾಗಿ ಚೆಕ್ ಮಾಡಬಹುದು.

Release of List for House Allotment of Free Housing Scheme, Here is the information

Follow us On

FaceBook Google News

Release of List for House Allotment of Free Housing Scheme, Here is the information