ಬಾಡಿಗೆ ಮನೆಯಲ್ಲಿ ಇರೋರಿಗೆ ಗುಡ್ ನ್ಯೂಸ್! ಇನ್ಮುಂದೆ ಕೊಡಬೇಕಿಲ್ಲ ಅಡ್ವಾನ್ಸ್

ಪೇಂಟಿಂಗ್, ಪ್ಲಂಬಿಂಗ್, ಎಲೆಕ್ಟ್ರಿಸಿಟಿ ಮೊದಲಾದವುಗಳಿಗೆ ಸಂಬಂಧಪಟ್ಟಂತೆ ಹೆಚ್ಚುವರಿ ಹಣವನ್ನು ಬಾಡಿಗೆ ಮಾಲೀಕರು ತೆಗೆದುಕೊಳ್ಳುವಂತಿಲ್ಲ

Bengaluru, Karnataka, India
Edited By: Satish Raj Goravigere

ಇಂದು ಗ್ರಾಮೀಣ ಭಾಗದಲ್ಲಿ ಅಥವಾ ನಗರ ಭಾಗದಲ್ಲಿ ಜನರು ಯಾವುದಾದರೂ ಕೆಲಸಕ್ಕಾಗಿ ವಲಸೆ ಹೋಗಿದ್ದರೆ ಅಂತಹ ಸಂದರ್ಭದಲ್ಲಿ ಉಳಿದುಕೊಳ್ಳಲು ಒಂದು ಸೂರು ಬೇಕೇ ಬೇಕು. ಇದಕ್ಕಾಗಿ ಹೋದಲ್ಲೆಲ್ಲ ಸ್ವಂತ ಮನೆ (own house) ನಿರ್ಮಾಣ ಮಾಡಿಕೊಳ್ಳುವುದು ಎಂಬುದು ದೂರದ ಮಾತು. ಹೀಗಾಗಿ ನಾವು ಎಲ್ಲಿ ಹೋಗುತ್ತೇವೆ ಅಲ್ಲಿ ಯಾವುದಾದರೂ ಬಾಡಿಗೆ ಮನೆ ಪಡೆದುಕೊಂಡು ಅಲ್ಲಿ ವಾಸವಾಗುತ್ತೇವೆ.

ಬಾಡಿಗೆ ಮನೆ (rented house) ವಾಸ ಎನ್ನುವ ಕಾನ್ಸೆಪ್ಟ್ ಭಾರತಕ್ಕೆ ಹೊಸದೇನು ಅಲ್ಲ ಮೊದಲಿನಿಂದಲೂ ಹಣ ಇರುವವರು ಮನೆಗಳನ್ನು ಕಟ್ಟಿಸಿ, ಆ ಮನೆಗಳನ್ನು ಬಾಡಿಗೆ ಕೊಟ್ಟು ಅದರಿಂದ ಹಣ ಸಂಪಾದನೆ ಮಾಡುತ್ತಾರೆ.

Good news for renters, No need to pay advance anymore

ಸ್ವಂತ ಆಸ್ತಿ, ಜಮೀನು ಇರೋರಿಗೆ ಇನ್ಮುಂದೆ ಹೊಸ ರೂಲ್ಸ್! ಏಪ್ರಿಲ್ 1ರಿಂದ ಜಾರಿ

ಅದೇ ರೀತಿ ಸುಲಭವಾಗಿ ಒಂದು ಸುರಕ್ಷಿತ ಸ್ಥಳದಲ್ಲಿ ಇರಲು ಬಾಡಿಗೆ ಮನೆ ಅನುಕೂಲವಾಗುತ್ತದೆ ಎಂದು ಹೇಳಬಹುದು. ಆದರೆ ಬಾಡಿಗೆ ಮನೆ ಗೆ ಬರುವಾಗ ಬಾಡಿಗೆ ಮನೆಯಲ್ಲಿ ವಾಸಿಸುವವರು ಹಾಗೂ ಬಾಡಿಗೆ ಮನೆ ಕೊಡುವ ಮಾಲೀಕರು ಇವರಿಬ್ಬರ ನಡುವೆ ಸಾಕಷ್ಟು ಒಪ್ಪಂದಗಳು ಆಗಬೇಕಿರುತ್ತದೆ. ಇದಕ್ಕಾಗಿ ರೆಂಟ್ ಅಗ್ರಿಮೆಂಟ್ (Rent agreement) ಕೂಡ ಮಾಡಿಕೊಳ್ಳಲಾಗುತ್ತದೆ.

ಬಾಡಿಗೆ ಮನೆಯಲ್ಲಿ ವಾಸಿಸುವವರ ಪರವಾಗಿ ಸರ್ಕಾರದ ಕಾನೂನು!

ಒಂದಷ್ಟು ಒಳ್ಳೆಯ ಬಾಡಿಗೆ ಮಾಲೀಕರನ್ನು ಹೊರತುಪಡಿಸಿ ಇನ್ನೊಂದಿಷ್ಟು ಮಾಲೀಕರು ಸಾಕಷ್ಟು ಬಾರಿ ಬಾಡಿಗೆ ಮನೆಯಲ್ಲಿ ವಾಸಕ್ಕಾಗಿ ಬರುವ ಜನರಿಗೆ ಒಂದಲ್ಲ ಒಂದು ರೀತಿಯ ತೊಂದರೆ ಕೊಡುವುದು ಬೆಳಕಿಗೆ ಬಂದಿದೆ.

ಉದಾಹರಣೆಗೆ ಅಡ್ವಾನ್ಸ್ ಕೊಟ್ಟ ನಂತರವೂ ಕೂಡ ಕೆಲವು ತಮ್ಮದೇ ಆಗಿರುವ ನೀತಿ ನಿಯಮಗಳನ್ನು ಹಾಕಿಕೊಂಡು ಅದರಿಂದ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ತೊಂದರೆ ಆಗಿರುವ ಪ್ರಕರಣಗಳು ದಾಖಲಾಗಿವೆ. ಇದನ್ನ ಪರಿಗಣಿಸಿರುವ ಸರ್ಕಾರ ಇದೀಗ, ಮಾಡರ್ನ್ ಟೆನಾಲ್ಟ್ ಆಕ್ಟ್ (Modern Tenant act) ಜಾರಿಗೆ ತಂದಿದೆ.

ಈ ಸ್ಕೀಮ್ ನಲ್ಲಿ 5 ವರ್ಷಕ್ಕೆ 6 ಲಕ್ಷ ಹೂಡಿಕೆ ಮಾಡಿದ್ರೆ ಬ್ಯಾಂಕಿಗಿಂತ ಹೆಚ್ಚು ಬಡ್ಡಿ ಸಿಗುತ್ತೆ!

Rent Houseಏನಿದು ಮಾಡರ್ನ್ ಟೆನಾಲ್ಟ್ ಆಕ್ಟ್ (Modern Tenant act)?

ಜೂನಿಯರ್ 2021 ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ನಗರಸಭೆ, ಪುರಸಭೆ, ಗ್ರಾಮ ಪಂಚಾಯತ್ ಅಡಿಯಲ್ಲಿ ಬರುವ ಬಾಡಿಗೆ ಮನೆಗಳಿಗೆ ಸಂಬಂಧಪಟ್ಟ ನಿಯಮಗಳನ್ನು ಈ ಕಾಯ್ದೆ ಹೇಳುತ್ತದೆ.

ಮುಖ್ಯವಾಗಿ ಬಾಡಿಗೆ ಮನೆಯ ಅಡ್ವಾನ್ಸ್, ಪೇಂಟಿಂಗ್ ಚಾರ್ಜ್, ಎಲೆಕ್ಟ್ರಿಸಿಟಿ ಬಿಲ್, ವಾಟರ್ ಬಿಲ್ ಮೊದಲಾದವುಗಳನ್ನು ಬಾಡಿಗೆ ಕೊಡುವವರು ಬಾಡಿಗೆ ತೆಗೆದುಕೊಳ್ಳುವವರ ಮೇಲೆ ಹೆಚ್ಚುವರಿಯಾಗಿ ವಿಧಿಸಿದರೆ ಅದರ ವಿರುದ್ಧ ಕ್ರಮ ಕೈಗೊಳ್ಳುವ ಕಾಯ್ದೆ ಇದಾಗಿದೆ.

ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾಯಿಸಬೇಕಾ? ಆನ್‌ಲೈನ್‌ನಲ್ಲೇ ಬದಲಾಯಿಸಿ

ಇಲ್ಲಿಯವರೆಗೆ ಬಾಡಿಗೆ ಮನೆಯಲ್ಲಿ ವಾಸಿಸಿದರೆ ಅಥವಾ ಅಂಗಡಿ ಮುಂಗಟ್ಟುಗಳನ್ನು ಬಾಡಿಗೆಗೆ ತೆಗೆದುಕೊಂಡರೆ, 10 ತಿಂಗಳ ಬಾಡಿಗೆ ಹಣವನ್ನು ಅಡ್ವಾನ್ಸ್ ರೂಪದಲ್ಲಿ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಇದು ಬಾಡಿಗೆ ಮನೆ ಪಡೆದುಕೊಂಡಿರುವವರಿಗೆ ಹೊರೆ ಆಗುತ್ತಿದೆ ಎನ್ನುವ ಕಾರಣಕ್ಕೆ ಮಾಡರ್ನ್ ಟೆನಾಲ್ಟ್ ಆಕ್ಟ್ (Modern Tenant act) ಅಡಿಯಲ್ಲಿ ಅಂಗಡಿ ಮುಂಗಟ್ಟು ಬಾಡಿಗೆ ತೆಗೆದುಕೊಂಡಿದ್ದರೆ, ಆರು ತಿಂಗಳ ಬಾಡಿಗೆಯ ಅಡ್ವಾನ್ಸ್ ಹಾಗೂ ಮನೆಯನ್ನು ಬಾಡಿಗೆ ತೆಗೆದುಕೊಂಡಿದ್ದರೆ ಎರಡು ತಿಂಗಳ ಬಾಡಿಗೆ ಅಡ್ವಾನ್ಸ್ ಮಾತ್ರ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

ಅಷ್ಟೇ ಅಲ್ಲ ಪೇಂಟಿಂಗ್, ಪ್ಲಂಬಿಂಗ್, ಎಲೆಕ್ಟ್ರಿಸಿಟಿ ಮೊದಲಾದವುಗಳಿಗೆ ಸಂಬಂಧಪಟ್ಟಂತೆ ಹೆಚ್ಚುವರಿ ಹಣವನ್ನು ಬಾಡಿಗೆ ಮಾಲೀಕರು ತೆಗೆದುಕೊಳ್ಳುವಂತಿಲ್ಲ. ಆದರೆ ಗೀಸರ್ ನಂತಹ ವಸ್ತುಗಳು ಹಾಳಾದರೆ ಅಥವಾ ಹಾನಿ ಆದರೆ ಅದರ ಹಣವನ್ನು ಬಡಿಗೆದಾರ ಪಾವತಿ ಮಾಡಬೇಕಾಗುತ್ತದೆ.

ಇನ್ನು 11 ತಿಂಗಳ ಅಗ್ರಿಮೆಂಟ್ ಮುಗಿದ ನಂತರ ಯಾವುದೇ ಬಾಡಿಗೆ ಪಡೆದುಕೊಂಡ ವ್ಯಕ್ತಿ ಮನೆ ಖಾಲಿ ಮಾಡದೆ ಇದ್ದರೆ ಅಥವಾ ಮನೆ ಖಾಲಿ ಮಾಡಲು ನಿರಾಕರಿಸಿದರು ಆಗ ಅವರ ವಿರುದ್ಧ ದೂರು ನೀಡಬಹುದು ಹಾಗೂ ಮಾಲೀಕರು ಅವರು ಹೆಚ್ಚುವರಿ ಆಗಿ ವಾಸಿಸುವಷ್ಟು ದಿನ ದುಪ್ಪಟ್ಟು ಬಾಡಿಗೆ ವಸೂಲಿ ಮಾಡಬಹುದು ಎಂದು ಈ ಕಾನೂನಿನಲ್ಲಿ ತಿಳಿಸಲಾಗಿದೆ.

ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್! ಕೇವಲ 25000 ಹೂಡಿಕೆಗೆ ಸಿಗುತ್ತೆ 18 ಲಕ್ಷ ರೂಪಾಯಿ

ಟೆನಾಂಟ್ ಅಥಾರಿಟಿ (Tenant Authority) ಯನ್ನು ಸ್ಥಾಪಿಸಿ ಜಿಲ್ಲಾಡಳಿತ ಅಧಿಕಾರಿಗಳು ಬಾಡಿಗೆ ಮನೆಗೆ ಸಂಬಂಧಪಟ್ಟಂತೆ ಯಾವುದೇ ದೂರು ಇದ್ದರೂ ಅದನ್ನು ಕೈಗೆತ್ತಿಕೊಂಡು ಪರಿಶೀಲಿಸಿ ಅದಕ್ಕೆ ಸೂಕ್ತ ಪರಿಹಾರ ಕೊಡಬೇಕು. ಇನ್ನು, ಈ ಕಾಯ್ದೆ ಜಾರಿಗೆ ಬಂದ ನಂತರದ ದಿನಗಳಲ್ಲಿ ಬಾಡಿಗೆ ತೆಗೆದುಕೊಳ್ಳುವವರಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ.

Good news for renters, No need to pay advance anymore