Business News

2 ಲಕ್ಷಕ್ಕೆ 4 ಲಕ್ಷ ಸಿಗುವ ಸರ್ಕಾರಿ ಯೋಜನೆ! ಈ ಬಂಪರ್ ಸ್ಕೀಮ್ ಬಿಟ್ಟೋರು ಉಂಟಾ

9 ವರ್ಷ 7 ತಿಂಗಳಲ್ಲಿ ನಿಮ್ಮ ಹಣ ಡಬಲ್! ಕೇಂದ್ರ ಸರ್ಕಾರದ ಭರವಸೆಯೊಂದಿಗೆ ಸುರಕ್ಷಿತ ಮತ್ತು ಲಾಭದಾಯಕ ಯೋಜನೆ!

  • ₹2 ಲಕ್ಷ ಹೂಡಿದರೆ ₹4 ಲಕ್ಷ, ₹5 ಲಕ್ಷ ಹೂಡಿದರೆ ₹10 ಲಕ್ಷ!
  • ಸಾಮಾನ್ಯ ಜನರಿಂದ ಮಕ್ಕಳ ಹೆಸರಿನಲ್ಲಿಯೂ ಖಾತೆ ತೆರೆಯುವ ಅವಕಾಶ!
  • ಇನ್ವೆಸ್ಟ್ ಮಾಡಿದ ಹಣಕ್ಕೆ ಬಡ್ಡಿಯೊಂದಿಗೆ ಗ್ಯಾರಂಟಿ ಆದಾಯ

ಕಿಸಾನ್ ವಿಕಾಸ್ ಪತ್ರ: ನಿಮ್ಮ ಹಣ ಡಬಲ್!

Post Office Scheme : ನಿಮ್ಮ ಹಣವನ್ನು ಸುರಕ್ಷಿತವಾಗಿ ಹೆಚ್ಚಿಸಿಕೊಳ್ಳುವ ಸರಳ ವಿಧಾನ! ಹೌದು, ನೀವು ಯಾವುದೇ ರಿಸ್ಕ್ (Risk) ತೆಗೆದುಕೊಳ್ಳದೆ ನಿಮ್ಮ ಹಣವನ್ನು ಡಬಲ್ (Double) ಮಾಡಿಕೊಳ್ಳಬಹುದು. ಇದಕ್ಕೆ ಕೇಂದ್ರ ಸರ್ಕಾರ (Central Government) ಭರವಸೆ ನೀಡುತ್ತಿದೆ. ಅದೆಂಥ ಯೋಜನೆ ಎಂಬುದನ್ನು ನೋಡೋಣ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಹೊಸ ರೂಲ್ಸ್: SBI, IDFC ಫಸ್ಟ್ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್!

2 ಲಕ್ಷಕ್ಕೆ 4 ಲಕ್ಷ ಸಿಗುವ ಸರ್ಕಾರಿ ಯೋಜನೆ! ಈ ಬಂಪರ್ ಸ್ಕೀಮ್ ಬಿಟ್ಟೋರು ಉಂಟಾ

ಪೋಸ್ಟ್ ಆಫೀಸ್‌ನಲ್ಲಿ ಅತ್ಯುತ್ತಮ ಯೋಜನೆ!

ಹೌದು, ಪೋಸ್ಟ್ ಆಫೀಸ್ (Post Office) ಒದಗಿಸುತ್ತಿರುವ ಕಿಸಾನ್ ವಿಕಾಸ್ ಪತ್ರ (KVP – Kisan Vikas Patra) ಯೋಜನೆ ಇದಾಗಿದೆ. ಇದು ಜನಪ್ರಿಯ ಯೋಜನೆಯಾಗಿದ್ದು, ಹೂಡಿಕೆ ಮಾಡಿದ ಹಣ 115 ತಿಂಗಳುಗಳ (9 ವರ್ಷ 7 ತಿಂಗಳು) ಒಳಗೆ ದ್ವಿಗುಣಗೊಳ್ಳುತ್ತದೆ.

ಯಾರು ಸೇರಬಹುದು?

ಈ ಯೋಜನೆ (Scheme) ಯಲ್ಲಿ ಯಾವುದೇ ವಯೋಮಿತಿಯಿಲ್ಲದೆ ಯಾರಾದರೂ ಸೇರ್ಪಡೆಯಾಗಬಹುದು. ಮಕ್ಕಳ ಹೆಸರಿನಲ್ಲಿ ಕೂಡಾ ಖಾತೆ ತೆರೆಯಬಹುದಾಗಿದೆ. ಜೊತೆಗೆ, ನಾಮಿನಿ (Nominee) ಸೌಲಭ್ಯ ಲಭ್ಯವಿದೆ.

Kisan Vikas Patra Post Office Scheme

ಕನಿಷ್ಠ ₹1000 ದಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹೆಚ್ಚಿಗೆ ಹೂಡಿಕೆ ಮಿತಿಯಿಲ್ಲ (No Maximum Limit), ನೀವು ಇಚ್ಛಿಸಿದಷ್ಟು ಹಣವನ್ನು ಹೂಡಿಸಬಹುದು. ಒಂದು ಪೋಸ್ಟ್ ಆಫೀಸ್‌ನಿಂದ (Post Office) ಮತ್ತೊಂದು ಶಾಖೆಗೆ ಹಣ ವರ್ಗಾಯಿಸಲು ಕೂಡ ಅವಕಾಶವಿದೆ.

ಇದನ್ನೂ ಓದಿ: ನಿಮ್ಮತ್ರ ಪ್ಯಾನ್ ಕಾರ್ಡ್ ಇದ್ದು ಈ ತಪ್ಪು ಮಾಡಿದ್ರೆ 10,000 ದಂಡ! ಎಚ್ಚರ

ಬಡ್ಡಿ ಮತ್ತು ಇತರ ಸೌಲಭ್ಯಗಳು!

ಪ್ರಸ್ತುತ 7.5% ಬಡ್ಡಿದರ (Interest Rate) ಲಭ್ಯವಿದೆ. ಹೂಡಿಕೆಯ ಮೊತ್ತವನ್ನು ತುರ್ತು ಅಗತ್ಯಗಳಿಗಾಗಿ ಬಳಸಬೇಕಾದರೆ, 2 ವರ್ಷ 6 ತಿಂಗಳು ಕಳೆದ ನಂತರ ಹಣ ಹಿಂತೆಗೆದುಕೊಳ್ಳಬಹುದಾಗಿದೆ. ಇನ್ನೂ ಹೆಚ್ಚಿನ ಪ್ರಯೋಜನಕ್ಕಾಗಿ, ಮೆಚ್ಯೂರಿಟಿ (Maturity) ತನಕ ಕಾಯುವುದು ಉತ್ತಮ.

ಹೂಡಿಕೆದಾರರ ಅಕಾಲಿಕ ನಿಧನ (Death) ಸಂಭವಿಸಿದರೆ, ಹಣ ನಾಮಿನಿಗೆ ಅಥವಾ ಕಾನೂನುಬದ್ಧ ವಾರಸುದಾರರಿಗೆ ನೀಡಲಾಗುತ್ತದೆ. ಇದರಿಂದ ರಿಸ್ಕ್ ಇಲ್ಲದ, ಭದ್ರ (Safe Investment) ಹಾಗೂ ಲಾಭದಾಯಕ ಹೂಡಿಕೆ ಯೋಜನೆಯಾಗಿದೆ.

KVP Scheme, Double Your Money with Government Assurance

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories