Business News

ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ! ಮಾರ್ಚ್ 14 ಕೊನೆಯ ಗಡುವು

Aadhaar Card Update : ನಾವು ಯಾವುದೇ ಸರ್ಕಾರಿ ಕೆಲಸವನ್ನು ಮಾಡಿಕೊಳ್ಳುವುದಿದ್ದರು ಅಥವಾ ಯಾವುದೇ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದರೂ ಕೂಡ ಅದಕ್ಕೆ ಅಗತ್ಯ ಇರುವ ನಮ್ಮ ವೈಯಕ್ತಿಕ ದಾಖಲೆ (personal documents) ಯನ್ನು ಸಲ್ಲಿಕೆ ಮಾಡಬೇಕು.

ಈ ವಯಕ್ತಿಕ ದಾಖಲೆಗಳಲ್ಲಿ ಪಾರದರ್ಶಕತೆ (transparency) ಯನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ನಾವು ಯಾವುದೇ ಕೆಲಸಕ್ಕೆ ಕೊಡುವ ನಮ್ಮ ವೈಯಕ್ತಿಕ ದಾಖಲೆಗಳು ಅಪ್ ಟು ಡೇಟ್ ಇರಬೇಕು. ಇದಕ್ಕಾಗಿ ಸರ್ಕಾರ ಆಧಾರ್ ನವೀಕರಣವನ್ನು ಕಡ್ಡಾಯಗೊಳಿಸಿದೆ.

New system for correction of address in Aadhaar card will be implement

ರೆಟ್ರೋ ಲುಕ್ ನೊಂದಿಗೆ ರೋಡಿಗಿಳಿಯಲಿದೆ RX 100 ಬೈಕ್; ಖರೀದಿಗೆ ಮುಗಿಬಿದ್ದ ಜನ!

ನಿಮ್ಮ ಬಳಿ 10 ವರ್ಷಕ್ಕಿಂತ ಹಳೆಯದಾದ ಆಧಾರ್ ಕಾರ್ಡ್ ಇದ್ರೆ ಅದರ ನವೀಕರಣ ಅಥವಾ ಅಪ್ಡೇಟ್ ಮಾಡಿಕೊಳ್ಳುವುದು ಬಹಳ ಮುಖ್ಯ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ, ಹೆಸರು, ಲಿಂಗ, ವಯಸ್ಸು, ಹುಟ್ಟಿದ ದಿನಾಂಕ ಮೊದಲಾದ ವಿಚಾರಗಳ ಬಗ್ಗೆ ಅಪ್ಡೇಟ್ ಮಾಡಿಸಿಕೊಳ್ಳಬೇಕು.

ಇನ್ನು ಈ ನವೀಕರಣ ಪ್ರಕ್ರಿಯೆಯನ್ನು ನೀವು ಸುಲಭವಾಗಿ ಆನ್ಲೈನ್ ಮೂಲಕವೇ ಮಾಡಿಕೊಳ್ಳಬಹುದಾಗಿದ್ದು, ಇದಕ್ಕಾಗಿ ಹೊಸ ವೆಬ್ಸೈಟ್ ಅನ್ನು ಕೂಡ ಆರಂಭಿಸಲಾಗಿದೆ.

ಆಧಾರ್ ನವೀಕರಣಕ್ಕೆ ಹೊಸ ವೆಬ್ಸೈಟ್! (New website for Aadhar update)

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ (UIDAI) ಅಧಿಕೃತ ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಿದ್ದು ಅದರಲ್ಲಿಯೇ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದು. ಹಾಗೂ ಉಚಿತ ಅಪ್ಡೇಟ್ ಗೆ ಮಾರ್ಚ್ 14, 2024 ಕೊನೆಯ ದಿನಾಂಕವಾಗಿದೆ.

ಉಚಿತ ವಸತಿ ಯೋಜನೆಯ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ; ಇಲ್ಲಿದೆ ಮಾಹಿತಿ

ಆನ್ಲೈನ್ ನಲ್ಲಿ ಆಧಾರ್ ಅಪ್ಡೇಟ್ ಮಾಡಿಕೊಳ್ಳುವುದು ಹೇಗೆ? (How to update Aadhar in online)

ನಿಮ್ಮ ಬಳಿ ಇರು ಆಧಾರ್ ಕಾರ್ಡ್ ಹತ್ತು ವರ್ಷ ಕಳೆದು 11ನೇ ವರ್ಷವನ್ನು ಆರಂಭಿಸಿದ್ದರೆ ಖಂಡಿತವಾಗಿಯೂ ಮೊದಲು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ ಎಷ್ಟು ಬಾರಿ ನಾವು ಎಷ್ಟು ವರ್ಷಗಳ ಅವಧಿಯಲ್ಲಿ ನಾವು ವಾಸಿಸುವ ಸ್ಥಳವನ್ನು ಬದಲಾಯಿಸಿರುತ್ತೇವೆ.

ಹಾಗಾಗಿ ಆಧಾರ್ ಕಾರ್ಡ್ ನಲ್ಲಿ ವಿಳಾಸದ ಬಗ್ಗೆ ಪಾರದರ್ಶಕತೆಯನ್ನು ಹೊಂದಿರಲು ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳುವುದು ಮುಖ್ಯ ಇದಕ್ಕಾಗಿ ಭಾರತೀಯ ವಿಶಿಷ್ಟ ಗುರುತಿನ ಅಧಿಕಾರ ಹೊಸ ವೆಬ್ಸೈಟ್ ಒಂದನ್ನು ಬಿಡುಗಡೆ ಮಾಡಿದ್ದು ಆ ಮೂಲಕ ನೀವು ಆಧಾರ್ ಅಪ್ಡೇಟ್ ಮಾಡಿಕೊಳ್ಳಬಹುದು.

Aadhaar Card* ಮೊದಲಿಗೆ https://tathya.uidai.gov.in/access/login?role=resident ಈ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ.

* ಈಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಸ್ಕ್ರೀನ್ ಮೇಲೆ ಕಾಣಿಸುವ ಕ್ಯಾಪ್ಚ ಕೋಡ್ ಅನ್ನು ನಮೂದಿಸಿ ‘login with OTP” ಎಂದು ಕ್ಲಿಕ್ ಮಾಡಿ.

* ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ನಮೂದಿಸಿ ಮುಂದುವರೆಯಿರಿ.

* ಈಗ ನೆಕ್ಸ್ಟ್ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.

* ಇಲ್ಲಿ ನೀವು ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಎಲ್ಲಾ ಮಾಹಿತಿಯು ಸರಿಯಾಗಿದೆ ಎನ್ನುವುದನ್ನು ಪರಿಶೀಲಿಸಿ, ಸರಿಯಾಗಿದೆ ಎನ್ನುವುದಾದರೆ ನಾನು ವೆರಿಫೈ ಮಾಡಿದ್ದೇನೆ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನ next ಎಂದು ಒತ್ತಿ.

* ಈಗ ನಿಮ್ಮ ಹೆಸರು ವಿಳಾಸಕ್ಕೆ ದೃಢೀಕರಣ ಪ್ರಮಾಣ ಪತ್ರವಾಗಿ ಪಾನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಪಿಡಿಎಫ್ ಕಾಪಿ ಅಪ್ಲೋಡ್ ಮಾಡಬೇಕು ನಂತರ ಸಬ್ಮಿಟ್ ಮಾಡಿ.

ಬಾಡಿಗೆ ಮನೆಯಲ್ಲಿ ಇರೋರಿಗೆ ಗುಡ್ ನ್ಯೂಸ್! ಇನ್ಮುಂದೆ ಕೊಡಬೇಕಿಲ್ಲ ಅಡ್ವಾನ್ಸ್

ಇಷ್ಟು ಮಾಡಿದ್ರೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗುತ್ತದೆ ಇದು ಉಚಿತವಾಗಿರುವ ಹಾಗೂ ಬಹಳ ಸರಳವಾಗಿರುವ ವಿಧಾನವಾಗಿದೆ. ಒಂದು ವೇಳೆ 14 ಮಾರ್ಚ್ 2024ರ ಒಳಗೆ ಆಧಾರ ಅಪ್ಡೇಟ್ ಮಾಡಿಸಿಕೊಳ್ಳದೆ ಇದ್ರೆ ಮುಂದೆ ದಂಡ ತೆರಬೇಕಾಗಬಹುದು.

March 14 is the deadline for Update Aadhaar Card for Free

Related Stories