ಚೆಕ್ ಮೂಲಕ ಹಣದ ವ್ಯವಹಾರ ಮಾಡೋರಿಗೆ ಹೊಸ ರೂಲ್ಸ್! ತಪ್ಪಿದ್ರೆ ಶಿಕ್ಷೆ ಗ್ಯಾರಂಟಿ
ಎಲ್ಲದಕ್ಕೂ ಯುಪಿಐ ಪೇಮೆಂಟ್ (UPI Payment) ಅವಲಂಬಿಸಲು ಸಾಧ್ಯವಿಲ್ಲ. ಹಾಗಾಗಿ ಚೆಕ್ (bank cheque) ಮೂಲಕ ಹಣಕಾಸಿನ ವ್ಯವಹಾರಗಳು ನಡೆಯುತ್ತವೆ.
ಇದು ಆನ್ಲೈನ್ ಜಮಾನ. ಎಲ್ಲಾ ಹಣಕಾಸಿನ ವ್ಯವಹಾರಗಳನ್ನು (finance transaction) ಕೂಡ ನಾವು ಆನ್ಲೈನ್ ನಲ್ಲಿಯೇ ಮಾಡುತ್ತೇವೆ. ಯುಪಿಐ ಪೇಮೆಂಟ್ (UPI payment) ಮೂಲಕ ಬ್ಯಾಂಕ್ ಗೆ ಹೋಗಿ ದಿನಗಟ್ಟಲೆ ಕಾಯದೆ ಸುಲಭವಾಗಿ ಪೇಮೆಂಟ್ ಮಾಡಬಹುದು
ಇದಕ್ಕಾಗಿ ಬೇರೆ ಬೇರೆ ಅಪ್ಲಿಕೇಶನ್ (applications for payments) ಗಳು ಕೂಡ ಲಭ್ಯವಿದ್ದು ಕ್ಷಣಮಾತ್ರದಲ್ಲಿ ನೀವು ಯಾವುದೇ ರೀತಿಯ ಪೇಮೆಂಟ್ ಮಾಡಬಹುದು.
ಸಾಮಾನ್ಯ ಜನರು ಯುಪಿಐ ಮೂಲಕ ಪೇಮೆಂಟ್ ಮಾಡುವುದು ಸಹಜ, ಆದ್ರೆ ದೊಡ್ಡ ದೊಡ್ಡ ವ್ಯಾಪಾರ ಅಥವಾ ವ್ಯವಹಾರ ಮಾಡುವವರು ದೊಡ್ಡ ಮೊತ್ತದ ಹಣದ ವ್ಯವಹಾರ ಮಾಡಬೇಕಾಗುತ್ತದೆ.
ಇದಕ್ಕಾಗಿ ಯುಪಿಐ ಪೇಮೆಂಟ್ (UPI Payment) ಅವಲಂಬಿಸಲು ಸಾಧ್ಯವಿಲ್ಲ. ಹಾಗಾಗಿ ಚೆಕ್ (bank cheque) ಮೂಲಕ ಹಣಕಾಸಿನ ವ್ಯವಹಾರಗಳು ನಡೆಯುತ್ತವೆ. ನೀವು ಬ್ಯಾಂಕ್ ನಲ್ಲಿ ಚೆಕ್ ಮೂಲಕ ಹಣಕಾಸಿನ ವ್ಯವಹಾರ ಮಾಡುತ್ತಿದ್ದರೆ ಇನ್ನು ಮುಂದೆ ಆರ್‌ಬಿಐ ವಿಧಿಸಿದ ಈ ಹೊಸ (RBI new rules) ನಿಯಮಗಳನ್ನು ಪಾಲನೆ ಮಾಡಲೇಬೇಕು, ಇಲ್ಲವಾದರೆ ಹೆಚ್ಚುವರಿ ದಂಡ ಹಾಗೂ ಜೈಲು ಊಟ ಫಿಕ್ಸ್!
ಕ್ರೆಡಿಟ್ ಸ್ಕೋರ್ ಇಲ್ಲ ಅಂದ್ರೂ ಸುಲಭವಾಗಿ ಸಿಗುತ್ತೆ ಪರ್ಸನಲ್ ಲೋನ್; ಎಲ್ಲಿ ಗೊತ್ತಾ?
ಆರ್ ಬಿ ಐ ವಿಧಿಸಿದೆ ಚೆಕ್ ವ್ಯವಹಾರದ ಮೇಲೆ ಹೊಸ ನಿಯಮ
ಮೊಟ್ಟಮೊದಲನೆಯದಾಗಿ ಯಾರು ಚೆಕ್ ಮೂಲಕ ವ್ಯವಹಾರ ಮಾಡುತ್ತಾರೋ ಅರ್ಜೆಂಟ್ ಇರುವಾಗ ಚೆಕ್ ಮೇಲೆ ಸಹಿ (signature) ಮಾಡಲು ಹೋಗಿ ತಪ್ಪಾಗಿ ಸಹಿ ಹಾಕುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಹಿ ಹಾಕುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.
ಸಾಕಷ್ಟು ಜನ ತಮ್ಮ ಸಹಿ ಹಾಕಿ ಬ್ಲಾಂಕ್ ಚೆಕ್ ಅನ್ನು ಅಡ್ವಾನ್ಸ್ (advance) ರೂಪದಲ್ಲಿ ನೀಡುತ್ತಾರೆ. ಆದರೆ ಇಂಥ ಚೆಕ್ ಅನ್ನು ಬೇರೆಯವರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ, ಅದರಲ್ಲೂ ನೀವು ಚೆಕ್ ಮೇಲೆ ಕ್ರಾಸ್ ಲೈನ್ (cross line on bank cheque) ಎಳೆದಿದ್ದರೆ ಅಂತಹ ಚೆಕ್ ಮೇಲೆ ತಮಗೆ ಬೇಕಾದ ಅಮೌಂಟ್ ಬರೆದುಕೊಂಡು ಬ್ಯಾಂಕಿಗೆ ಹಾಕಬಹುದು. ಯಾರಿಗೆ ಚೆಕ್ ಬರೆದುಕೊಡುವುದಿದ್ರೂ ಕೂಡ ಚೆಕ್ ಮೇಲೆ ನಿಮ್ಮ ಹೆಸರು, ಅಮೌಂಟ್ (amount) ದಿನಾಂಕ ಮತ್ತು ಸಹಿ ಹಾಕುವುದನ್ನು ಮರೆಯಬೇಡಿ.
ಇನ್ನು ನೀವು ಚೆಕ್ ಮೂಲಕ ಹೆಚ್ಚಿನ ಹಣಕಾಸಿನ ವ್ಯವಹಾರ ಮಾಡುವವರಾಗಿದ್ದರೆ ನಿಮ್ಮದೇ ಆಗಿರುವ ಒಂದು ಇಂಕ್ ಪೆನ್ನು (use own ink pen) ಇಟ್ಟುಕೊಳ್ಳುವುದು ಒಳ್ಳೆಯದು. ಈ ರೀತಿ ಮಾಡಿದ್ರೆ ಯಾರು ಕೂಡ ಕಾಪಿ ಮಾಡಲು ಸಾಧ್ಯವಿಲ್ಲ
ಸ್ಟೇಟ್ ಬ್ಯಾಂಕ್ ನಿಂದ ವಿದ್ಯಾರ್ಥಿಗಳಿಗೆ 10,000 ಸ್ಕಾಲರ್ಶಿಪ್ ಸಿಗುತ್ತಿದೆ, ಈಗಲೇ ಅರ್ಜಿ ಸಲ್ಲಿಸಿ
ಸ್ಟೇಟ್ ಬ್ಯಾಂಕ್ ಪರ್ಸನಲ್ ಲೋನ್ ಆಫರ್! ಅಡಮಾನ ಬೇಕಿಲ್ಲ, ಹೆಚ್ಚುವರಿ ಶುಲ್ಕವೂ ಇಲ್ಲ
ಯಾರಿಗೆ ಆದರೂ ಖಾಲಿ ಚೆಕ್ ನೀಡುವುದು ಒಳ್ಳೆಯದಲ್ಲ. ಸಹಿ ಮಾಡಿದ ಕ್ರಾಸ್ ಲೈನ್ ಎಳೆದ ಬ್ಲಾಂಕ್ ಚೆಕ್ (blank cheque) ಗಳನ್ನು ಯಾರು ಬೇಕಾದರೂ ಉಪಯೋಗಿಸಿಕೊಳ್ಳಬಹುದು.
ನೀವು ಸಹಿ ಮಾಡಿ ಕ್ರಾಸ್ ಲೈನ್ ಹಾಕಿ ಬರೆದುಕೊಟ್ಟ ಚೆಕ್ ಮೇಲೆ ಅವರಿಗೆ ಬೇಕಾದಷ್ಟು ಅಮೌಂಟ್ ಬರೆದುಕೊಂಡು ವಂಚಕರು ಆ ಚೆಕ್ ಅನ್ನು ಬ್ಯಾಂಕ್ ಗೆ (Bank) ನೀಡಿದರೆ ಅದು ಸುಲಭವಾಗಿ ಪಾಸ್ ಆಗುತ್ತಿದೆ. ಹಾಗೂ ನಿಮ್ಮ ಖಾತೆಯ ಎಲ್ಲಾ ಹಣವನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ ಎಚ್ಚರ.
ಇನ್ನು ಚೆಕ್ ನೀಡುವಾಗ ನೀವು ಅದರಲ್ಲಿ ಹಣ ಎಷ್ಟು ಎಂದು ಬರೆದಿದ್ದರೆ ಕೊನೆಯಲ್ಲಿ only (ಕನ್ನಡದಲ್ಲಾದರೆ ಮಾತ್ರ) ಎಂದು ಬರೆಯುವುದನ್ನು ಮರೆಯಬೇಡಿ. ಒಂದು ವೇಳೆ ನೀವು ಕೊನೆಯಲ್ಲಿ only ಎಂದು ಬರೆಯದೆ ಇದ್ದಾಗ ನಿಮ್ಮ ಅಮೌಂಟ್ ಮುಂದೆ ಇನ್ನೊಂದು ಸಂಖ್ಯೆಯನ್ನು ಸೇರಿಸಿ ಆ ಚೆಕ್ ದುರುಪಯೋಗ ಪಡಿಸಿಕೊಳ್ಳಬಹುದು.
ಇನ್ನು ಕೆಲವೊಮ್ಮೆ ದಾಖಲೆಗಾಗಿ ಚೆಕ್ ನೀಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಚೆಕ್ ಮೇಲೆ cancel ಎಂದು ಬರೆದುಕೊಡುವುದು ಸೂಕ್ತ. ಅದೇ ರೀತಿ ನೀವು ಚೆಕ್ ನೀಡುವಾಗ ಹೆಸರು ಹಾಗೂ ಹಣದ ಮೊತ್ತ ದಿನಾಂಕ ಸಹಿ ಇವುಗಳನ್ನು ತಪ್ಪದೇ ಹಾಕಬೇಕು ಹಾಗೂ ಚೆಕ್ ಹಿಂಭಾಗದಲ್ಲಿ ನಿಮ್ಮ ಸಹಿ ಹಾಗೂ ಫೋನ್ ನಂಬರ್ (Mobile Number) ಬರೆಯುವುದನ್ನು ಮರೆಯಬೇಡಿ.
ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜೀರೋ ಇದ್ರೂ ಕೂಡ ₹10,000 ಡ್ರಾ ಮಾಡಬಹುದು! ಹೊಸ ಯೋಜನೆ
New rules for cash transactions by Cheque Book