Business News

ಆಸ್ತಿ, ಜಮೀನು ನೋಂದಣಿ ವಿಚಾರದಲ್ಲಿ ಹೊಸ ರೂಲ್ಸ್! ಸರ್ಕಾರ ಖಡಕ್ ವಾರ್ನಿಂಗ್

ಆಸ್ತಿ ನೋಂದಣಿ (property registration) ವಿಚಾರದಲ್ಲಿ ಹೊಸ ರೂಲ್ಸ್ ಅನ್ನು ಸರ್ಕಾರ ಜಾರಿಗೆ ತಂದಿದೆ. ನೀವು ಕೇವಲ ಆಸ್ತಿ ಖರೀದಿ ಮಾಡಿದರೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಆಸ್ತಿ ವರ್ಗಾವಣೆ (property transfer) ಆಗುವುದಿಲ್ಲ ಇದಕ್ಕಾಗಿ ನೋಂದಣಿ ಮಾಡಿಸಿಕೊಳ್ಳುವುದು ಬಹಳ ಮುಖ್ಯ.

ಆದರೆ ನೋಂದಣಿ ಬಗ್ಗೆ ಸಾಕಷ್ಟು ಮಾಹಿತಿಗಳು ಸಾರ್ವಜನಿಕರಿಗೆ ತಿಳಿದಿಲ್ಲ. ಇದನ್ನ ತಿಳಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡುತ್ತಿದ್ದೇವೆ ಮುಂದೆ ಓದಿ.

government solution if You Dont Have Road to go Your Agriculture Land

ಪಿಂಚಣಿ ಯೋಜನೆಗೆ ಇನ್ಮುಂದೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ; ಸುಲಭ ವಿಧಾನ!

ಆಸ್ತಿ ನೋಂದಣಿ ನಂತರ ಈ ಕೆಲಸ ಮಾಡಲೇಬೇಕು!

ನೀವು ಯಾವುದೇ ಆಸ್ತಿ ಖರೀದಿ (property purchase) ಮಾಡಿ ಆ ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿಕೊಂಡ ನಂತರ ಅಂದರೆ ನೋಂದಣಿ (registration) ಮಾಡಿಕೊಂಡ ನಂತರ ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ನೀವು ಈ ಕೆಲಸ ಮಾಡಿಸಿಕೊಳ್ಳುವುದರ ಬಗ್ಗೆ ನಿರ್ಲಕ್ಷ ತೋರಿಸಿದರೆ ನಿಮ್ಮ ಆಸ್ತಿ ನಿಮ್ಮ ಕೈ ಸೇರುವುದಿಲ್ಲ.

ಸೇಲ್ ಡೀಡ್ ಮಾಡಿಸಿಕೊಳ್ಳುವುದು!

ನಿಮ್ಮ ಆಸ್ತಿಯ ಸಂಪೂರ್ಣ ಮಾಲೀಕತ್ವ ನಿಮ್ಮದೇ ಆಗಿರಬೇಕು ಎಂದಾದರೆ, ಸೇಲ್ ಡಿಡ್ (Sale deed) ಮಾಡಿಸುವುದು ಬಹಳ ಮುಖ್ಯ. ಸಾಕಷ್ಟು ಜನ ರಿಜಿಸ್ಟ್ರೇಷನ್ ಮತ್ತು ಸೇಲ್ ಡೀಡ್ ಎರಡು ಒಂದೇ ಎಂದು ಭಾವಿಸಿದ್ದಾರೆ. ಆದರೆ ಇವೆರಡು ಪ್ರತ್ಯೇಕ ವಿಷಯ ಎನ್ನುವುದು ನಿಮ್ಮ ಗಮನದಲ್ಲಿ ಇರಲಿ.

ನೀವು ಆಸ್ತಿ ನೋಂದಣಿ ಮಾಡಿಸಿಕೊಂಡ ತಕ್ಷಣ ಆ ಸಂಪೂರ್ಣ ಆಸ್ತಿ ನಿಮ್ಮ ಕೈ ಸೇರುವುದಿಲ್ಲ ಅಥವಾ ಆಸ್ತಿಯ ಮಾಲೀಕತ್ವವನ್ನು ನೀವು ಪಡೆದುಕೊಳ್ಳುವುದಿಲ್ಲ.

ಯಾವುದೇ ಬ್ಯಾಂಕ್ ಅಕೌಂಟ್ ಇದ್ದವರಿಗೆ ಭರ್ಜರಿ ಸುದ್ದಿ! 2 ಲಕ್ಷ ರೂಪಾಯಿ ಪಡೆಯಿರಿ

Property documentsಹಾಗಾಗಿ ನೋಂದಣಿಗಿಂತ ಮೊದಲು ನೀವು ಮಾಡಬೇಕಾಗಿರುವ ಕೆಲಸ ಏನೆಂದರೆ, ನೀವು ಆಸ್ತಿ ಖರೀದಿಸಿದ ಬಳಿಕ ಆಸ್ತಿಯ ಮೇಲೆ ಯಾವುದೇ ಸಾಲ (Property Loan) ಇದೆಯೇ ಎನ್ನುವುದನ್ನು ಪರಿಶೀಲಿಸಬೇಕು. ಹಳೆಯ ಓನರ್ ಆ ಆಸ್ತಿಯ ಮೇಲೆ ಸಾಲ (loan) ಮಾಡಿ ಅದನ್ನು ಮರುಪಾವತಿ ಮಾಡದೇ ಇದ್ದರೆ ನೊಂದಣಿ ನಂತರ ಆ ಸಾಲವನ್ನು (Loan) ನೀವೇ ಪಾವತಿ ಮಾಡಬೇಕಾಗುತ್ತದೆ. ಹಾಗಾಗಿ ಈ ವಿಷಯವನ್ನು ಪರಿಶೀಲಿಸಿಕೊಳ್ಳುವುದು ಬಹಳ ಮುಖ್ಯ.

ಸರ್ಕಾರದ ಈ ಯೋಜನೆಯಲ್ಲಿ ಪ್ರತಿದಿನ ಸಿಗುತ್ತೆ 500 ರೂಪಾಯಿ! ಅರ್ಜಿ ಸಲ್ಲಿಸಿ

ಆಸ್ತಿ ನೋಂದಣಿ ನಂತರ ಮಾಡಲೇಬೇಕಾಗಿರುವ ಕೆಲಸ ಇದು!

ಭಾರತೀಯ ನೋಂದಣಿ ಕಾಯ್ದೆಯ ಪ್ರಕಾರ 100 ರೂಪಾಯಿಗಳಿಗಿಂತ ಮೇಲ್ಪಟ್ಟ ಯಾವುದೇ ರೀತಿಯ ಆಸ್ತಿ ವರ್ಗಾವಣೆ ಲಿಖಿತ ರೂಪದಲ್ಲಿ ಇರುತ್ತದೆ. ಇದನ್ನು ನೀವು ನೋಂದಾವಣೆ ಕಚೇರಿಗೆ ಹೋಗಿ ನೋಂದಣಿ ಮಾಡಿಸಿಕೊಳ್ಳಬೇಕು. ಇದನ್ನ ‘ರಿಜಿಸ್ಟ್ರಿ’ ಎನ್ನಲಾಗುತ್ತದೆ.

ನೀವು ಖರೀದಿಸಿದ ಜಮೀನು ಮನೆ ಅಥವಾ ಇತರ ಯಾವುದೇ ಸ್ತಿರಾಸ್ತಿಯನ್ನು ನೋಂದಣಿ ಮಾಡಿಕೊಂಡ ಮಾತ್ರಕ್ಕೆ ಅದರ ಮಾಲೀಕರು ನೀವಾಗುವುದಿಲ್ಲ. ಹಾಗಾಗಿ ನೋಂದಣಿ ಮಾಡಿಕೊಂಡ ನಂತರ ಮ್ಯೂಟೇಶನ್ (mutation) ಮಾಡಿಸುವುದು ಅಗತ್ಯ. ನೀವು ಆಸ್ತಿ ರೂಪಾಂತರ ಮಾಡಿಸಿಕೊಂಡರೆ ಮಾತ್ರ ಆ ಆಸ್ತಿಯ ಸಂಪೂರ್ಣ ಮಾಲೀಕತ್ವವನ್ನು ನೀವು ಪಡೆದುಕೊಳ್ಳುತ್ತೀರಿ. ಹಾಗಾಗಿ ಯಾವುದೇ ಆಸ್ತಿ ನೋಂದಣಿ ನಂತರ ಮ್ಯೂಟೇಶನ್ ಮಾಡಿಸುವುದನ್ನು ಮರೆಯಬೇಡಿ.

ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳು ಪಾಲು ಪಡೆಯೋದು ಹೇಗೆ? ಕಾನೂನು ತಿಳಿಯಿರಿ

New rules regarding property, land registration

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories