ಇಂತಹ ಪ್ಯಾನ್ ಕಾರ್ಡ್ ಬಳಸಿದರೆ ₹10,000 ದಂಡ! ತೆರಿಗೆ ಇಲಾಖೆಯಿಂದ ವಾರ್ನಿಂಗ್
ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರಿಯಗೊಳ್ಳಬಹುದು. ನಿಷ್ಕ್ರಿಯ ಪ್ಯಾನ್ ಬಳಸಿದರೆ ₹10,000 ದಂಡ ಸಾಧ್ಯತೆ! ಆದಾಯ ತೆರಿಗೆ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

- ನಿಷ್ಕ್ರಿಯ ಪ್ಯಾನ್ ಬಳಸಿದರೆ ₹10,000 ದಂಡ
- ಇಟಿಆರ್ ಸಲ್ಲಿಕೆ, ಹೂಡಿಕೆಗಳಲ್ಲಿ ಪ್ಯಾನ್ ಅಗತ್ಯ
- ಪ್ಯಾನ್ ಸ್ಥಿತಿ ಪರಿಶೀಲನೆಗೆ ಇ-ಫೈಲಿಂಗ್ ಪೋರ್ಟಲ್
ನಿಮ್ಮ ಪ್ಯಾನ್ ಕಾರ್ಡ್ (PAN card) ನಿಷ್ಕ್ರಿಯವಾಗಿದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಲು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ನ್ನು ಬಳಸಿ ತಕ್ಷಣ ಪರಿಶೀಲಿಸಬಹುದು.
ನಿಷ್ಕ್ರಿಯ ಪ್ಯಾನ್ ಬಳಸಿ ಮುಂದುವರಿಸಿದರೆ, ಅದು ಕೇವಲ ತಪ್ಪು ಮಾತ್ರವಲ್ಲ — ಅದಕ್ಕೆ ಗಂಭೀರ ಶಸ್ತಿಯಿಂದ ಕೂಡಿದ ದಂಡ (penalty) ವಿಧಿಸಲಾಗುತ್ತದೆ.
ಪಾನ್-ಆಧಾರ್ ಲಿಂಕ್ ಮಾಡದೇ ಇದ್ದರೆ, ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಆದರೆ ಹಲವರು ಅದನ್ನು ಬಳಸಿ ಮುಂದುವರಿಸುತ್ತಿದ್ದಾರೆ. ಇದು ಎಚ್ಚರಿಕೆಕೊಟ್ಟ ನಂತರವೂ, ಕಾನೂನು ಮೀರಿ ನಡೆಯುತ್ತಿರುವ ತಪ್ಪು. ಆದಾಯ ತೆರಿಗೆ ಇಲಾಖೆ (Income Tax Department) ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ₹10,000 ವರೆಗೆ ದಂಡ ವಿಧಿಸಬಹುದೆಂದು ತಿಳಿಸಿದೆ.
ಇದನ್ನೂ ಓದಿ: ನಿಮ್ಮ ಆಸ್ತಿ ದಾಖಲೆ ಫೋರ್ಜರಿ ಆಗಿದ್ಯಾ? ಯಾವುದಕ್ಕೂ ಒಂದ್ಸಲ ಚೆಕ್ ಮಾಡಿಕೊಳ್ಳಿ
ಪ್ಯಾನ್ ಕಾರ್ಡ್‌ವಿಲ್ಲದೆ ಅಥವಾ ನಿಷ್ಕ್ರಿಯ ಪ್ಯಾನ್‌ನಿಂದ ಇಟಿಆರ್ (Income Tax Returns) ಸಲ್ಲಿಸುವುದು ಸಾಧ್ಯವಿಲ್ಲ. ಪ್ಯಾನ್ ಲಿಂಕ್ ಮಾಡದಿದ್ದರೆ, ಹೂಡಿಕೆ (investment), ಬ್ಯಾಂಕ್‌ಗಳಲ್ಲಿ ದೊಡ್ಡ ಮೊತ್ತದ ವ್ಯವಹಾರಗಳು (bank transactions), ಡಿಮ್ಯಾಟ್ ಖಾತೆ ತೆರೆಯುವುದು ಎಲ್ಲವೂ ಕಷ್ಟವಾಗುತ್ತದೆ.
ಇನ್ನೂ ಮುಂದುವರಿದರೆ, ಟಿಡಿಎಸ್ (TDS) ದರ 20%ವರೆಗೆ ಹೆಚ್ಚಾಗಬಹುದು. ಇದಲ್ಲದೆ, ಐಟಿ ರಿಫಂಡ್ ಪಡೆಯುವುದೂ ಅಸಾಧ್ಯವಾಗುತ್ತದೆ. ಸರಳವಾಗಿ ಹೇಳುವುದಾದರೆ, ಪ್ಯಾನ್‌ಗಾಗಿ ಆಧಾರ್ ಲಿಂಕ್ ಮಾಡುವುದು ಕೇವಲ ಶಿಫಾರಸು ಅಲ್ಲ, ಕಡ್ಡಾಯ ಕ್ರಮವಾಗಿದೆ.
ಇದನ್ನೂ ಓದಿ: ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದ್ರೆ ಬ್ಯಾಂಕಿನಲ್ಲಿ ಹೋಮ್ ಲೋನ್ ಸಿಗುತ್ತೆ ಗೊತ್ತಾ
ಪ್ಯಾನ್ ಲಿಂಕ್ ಮಾಡದೇ ಇದ್ದರೆ ನಿಮ್ಮ ಹಣಕಾಸಿನ ವ್ಯವಹಾರಗಳು ತಾತ್ಕಾಲಿಕವಾಗಿ ಸ್ಥಗಿತವಾಗಬಹುದು. ಹಾಗಾಗಿ ತಕ್ಷಣವೇ ಲಿಂಕ್ ಮಾಡುವುದು ಅತ್ಯಂತ ಅವಶ್ಯಕ. ನಿಮ್ಮ ಪ್ಯಾನ್ ಸಕ್ರಿಯವಾಗಿದೆಯೇ ಎಂದು ಪೂರೈಸಿದ ಮಾಹಿತಿಯ ಆಧಾರದ ಮೇಲೆ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ.
ಸರಕಾರದಿಂದ ಮಾತ್ರವಲ್ಲ, ನಾವು ಹಣಕಾಸು ಶಿಸ್ತಿನ ದೃಷ್ಟಿಯಿಂದಲೂ ಈ ಕ್ರಮ ಕೈಗೊಳ್ಳಬೇಕು. ಇನ್ನೂ ವಿಳಂಬವಾಗಿದೆಯೆಂದರೆ, ತಕ್ಷಣ ಲಿಂಕ್ ಮಾಡಿಕೊಳ್ಳಿ, ಈಗ ದಂಡದೊಂದಿಗೆ ಲಿಂಕ್ ಮಾಡುವ ಸೌಲಭ್ಯವಿದೆ. ಇಲ್ಲವೇ ಅಪ್ಪಿತಪ್ಪಿಯೂ ನಿಷ್ಕ್ರಿಯ ಕಾರ್ಡ್ ಬಳಸಬೇಡಿ.
PAN-Aadhaar Not Linked? You May Be Fined ₹10,000!




