ಆಧಾರ್ ಕಾರ್ಡ್‌ನಲ್ಲಿ ಫೋಟೋ ಚನ್ನಾಗಿಲ್ವಾ! ಜಸ್ಟ್ ಒಂದು ಕ್ಲಿಕ್‌ನಲ್ಲಿ ಬದಲಾವಣೆ ಮಾಡಿಕೊಳ್ಳಿ

ಆಧಾರ್ ಕಾರ್ಡ್ ನಲ್ಲಿ ((Aadhar Card) ಹೆಸರು ವಿಳಾಸ (name and address) ಹಾಗೂ ಮತ್ತಿತರ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದಾಗಿದೆ, ಅದರಲ್ಲೂ ನೀವು 10 ವರ್ಷದ ಹಿಂದೆ ಆಧಾರ್ ಕಾರ್ಡನ್ನು ಪಡೆದುಕೊಂಡಿದ್ದರೆ ಅದರ ನವೀಕರಣ (Aadhar Card updating) ಬಹಳ ಮುಖ್ಯವಾಗಿರುತ್ತದೆ.

ನೀವು 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ (Aadhaar Card) ಮಾಡಿಸಿ ಇಂದಿಗೂ ಅದನ್ನ ಬಳಕೆ ಮಾಡುತ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ. ಆಧಾರ್ ಎನ್ನುವುದು ಭಾರತೀಯ ಪ್ರತಿಯೊಬ್ಬ ನಾಗರಿಕನ ‘ಆಧಾರ’.

ಆಧಾರ್ ಕಾರ್ಡ್ ಇಲ್ಲದೆ ನಾವು ಯಾವ ಕೆಲಸವನ್ನು ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ, ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಅನ್ನು ಮುಖ್ಯ ದಾಖಲೆಯಾಗಿ ಕೊಡಬೇಕು.

ಇನ್ನು ಆಧಾರ್ ಕಾರ್ಡನ್ನ ಮಾಡಿಸಿ 10 ವರ್ಷ ಕಳೆದರೂ ಕೂಡ ಅದನ್ನು ಹಾಗೆ ಇಟ್ಟುಕೊಂಡವರಿಗೆ ಕೇಂದ್ರ ಸರ್ಕಾರ ಬಹಳ ಮಹತ್ವದ ಸೂಚನೆ ಒಂದನ್ನು ನೀಡಿದೆ.

ಆಧಾರ್ ಕಾರ್ಡ್‌ನಲ್ಲಿ ಫೋಟೋ ಚನ್ನಾಗಿಲ್ವಾ! ಜಸ್ಟ್ ಒಂದು ಕ್ಲಿಕ್‌ನಲ್ಲಿ ಬದಲಾವಣೆ ಮಾಡಿಕೊಳ್ಳಿ - Kannada News

ಸ್ವಂತ ಜಮೀನು, ಆಸ್ತಿ ಇದ್ದವರಿಗೆ ಹೊಸ ನಿಯಮ! ಆಸ್ತಿ ಪತ್ರಗಳಿಗೆ ಸಂಬಂಧಿಸಿದಂತೆ ರೂಲ್ಸ್ ಜಾರಿ

ಆಧಾರ್ ಕಾರ್ಡ್ ನವೀಕರಣ:

ಆಧಾರ್ ಕಾರ್ಡ್ ನಲ್ಲಿ ((Aadhar Card) ಹೆಸರು ವಿಳಾಸ (name and address) ಹಾಗೂ ಮತ್ತಿತರ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದಾಗಿದೆ, ಅದರಲ್ಲೂ ನೀವು 10 ವರ್ಷದ ಹಿಂದೆ ಆಧಾರ್ ಕಾರ್ಡನ್ನು ಪಡೆದುಕೊಂಡಿದ್ದರೆ ಅದರ ನವೀಕರಣ (Aadhar Card updating) ಬಹಳ ಮುಖ್ಯವಾಗಿರುತ್ತದೆ.

ಯಾಕಂದ್ರೆ ಚಿಕ್ಕ ವಯಸ್ಸಿನಲ್ಲಿ ಆಧಾರ್ ಕಾರ್ಡ್ ಮಾಡಿಕೊಂಡಿದ್ದರೆ ಮಕ್ಕಳು ಬೆಳೆಯುತ್ತಿದ್ದ ಹಾಗೆ ಅವರ ಮುಖಚರ್ಯೆ ಬದಲಾಗುತ್ತದೆ. ಈ ಕಾರಣಕ್ಕೆ ನೀವು ಆಧಾರ್ ಕಾರ್ಡ್ ನಲ್ಲಿ ಈಗ ಫೋಟೋವನ್ನು (photo changes) ಕೂಡ ನವೀಕರಿಸಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಫೋಟೋ ಅಪ್ಡೇಟ್ ಮಾಡುವುದು ಹೇಗೆ? – Update Photo

ಈಗ ನೀವು ಸುಲಭವಾಗಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು ವಿಳಾಸ ಮೊಬೈಲ್ ಸಂಖ್ಯೆ (mobile number) ಲಿಂಗ ಹೀಗೆ ಮೊದಲಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.

ಈ ಬದಲಾವಣೆಗೆ ಡಿಸೆಂಬರ್ 14 2023 ರವರೆಗೆ ಅವಕಾಶ ನೀಡಲಾಗಿದೆ. ಇದರ ಜೊತೆಗೆ ನೀವು ಫೋಟೋವನ್ನು ಕೂಡ ಬದಲಾಯಿಸಿಕೊಳ್ಳಬಹುದು, ಆದರೆ ಬೇರೆ ಎಲ್ಲಾ ಬದಲಾವಣೆಯನ್ನೂ ಆನ್ಲೈನ್ (online) ನಲ್ಲಿ ಮಾಡಿಕೊಳ್ಳುವುದಾಗಿದ್ದರು ಫೋಟೋ ಬದಲಾಯಿಸಲು ಮಾತ್ರ ನೀವು ಹತ್ತಿರದ ಆಧಾರ ಕೇಂದ್ರಕ್ಕೆ ಹೋಗಬೇಕು.

ಆರ್ಗಾನಿಕ್ ಜೇನು ಸಾಕಾಣಿಕೆಗೂ ಬಂತು ವಿಶೇಷ ವ್ಯಾಲ್ಯೂ; ದುಡಿಯಬಹುದು ಲಕ್ಷ ಲಕ್ಷ ಹಣ!

ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾಯಿಸುವುದು ಹೇಗೆ?

Aadhaar Card Update - Change Photoಇದಕ್ಕಾಗಿ ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ UIDAI Website ಮೂಲಕ ಆಧಾರದಲ್ಲಿ ಬೇಕಾಗಿರುವ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತದೆ. ಒಂದು ಅರ್ಜಿ ಫಾರಂ ಅನ್ನೋ ಡೌನ್ಲೋಡ್ (download) ಮಾಡಿಕೊಂಡು ಅದರಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು.

ನಂತರ ಬಯೋಮೆಟ್ರಿಕ್ (biometric) ವಿವರಗಳನ್ನು ಕೂಡ ನೀಡಬೇಕು, ಬಳಿಕ ಸೇವಾ ಕೇಂದ್ರದಲ್ಲಿ ಇರುವ ಸಿಬ್ಬಂದಿಗಳು ನಿಮ್ಮ ಫೋಟೋ ತೆಗೆದು ಆಧಾರ್ ನವೀಕರಣಕ್ಕೆ ಕಳುಹಿಸುತ್ತಾರೆ.

ಈ ಪ್ರಕ್ರಿಯೆಗೆ ನೂರು ರೂಪಾಯಿಗಳ ಶುಲ್ಕ ಪಾವತಿಸಬೇಕು. ನಂತರ ನಿಮಗೆ ಸ್ವೀಕೃತಿ ಪ್ರತಿ ನೀಡಲಾಗುತ್ತದೆ, ಇದರಲ್ಲಿ ನವೀಕರಣ ವಿನಂತಿ ಸಂಖ್ಯೆಯನ್ನು ನಮೂದಿಸಿರಲಾಗುತ್ತದೆ. ಈ ಮೂಲಕ ನೀವು ನಿಮ್ಮ ಆಧಾರ್ ನವೀಕರಣದ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಈ ಮೇಕೆ ತಳಿ ಸಾಕಾಣಿಕೆಗೆ ಸರ್ಕಾರವೇ ಕೊಡುತ್ತೆ ಸಬ್ಸಿಡಿ, ಸುಲಭವಾಗಿ ಗಳಿಸಿ ಲಕ್ಷ ಲಕ್ಷ ಆದಾಯ

ಯು ಆರ್ ಎನ್ ಸಂಖ್ಯೆ ಬಳಸಿ ಸ್ಟೇಟಸ್ ತಿಳಿದುಕೊಳ್ಳಿ;

ನಿಮ್ಮ ಸ್ವೀಕೃತಿಯಲ್ಲಿ ನಮೂದಿಸಲಾಗಿರುವ ಯು ಆರ್ ಎನ್ (URN number) ಸಂಖೆಯನ್ನು uidai.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಮೈ ಆಧಾರ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರೊಳಗೆ ಈ ಸಂಖ್ಯೆಯನ್ನು ನಮೂದಿಸಿ. ನೀವು ಇಲ್ಲಿ ಕ್ಯಾಪ್ಚ ನಂಬರ್ ಹಾಗೂ ನಿಮ್ಮ ಮೊಬೈಲ್ಗೆ ಕಳುಹಿಸಿದ ಓಟಿಪಿ (OTP) ಯನ್ನು ನಮೂದಿಸಿ ಲಾಗಿನ್ ಆಗಬೇಕು.

myaadhaar.uidai.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಧಾರ್ ನವೀಕರಣ ದಾಖಲಾತಿ ಪರಿಶೀಲಿಸಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಯು ಆರ್ ಎನ್ ನಂಬರ್ ಹಾಗೂ ಕ್ಯಾಪ್ಚರ್ ಸಂಖ್ಯೆಯನ್ನು ಹಾಕಿದರೆ ನಿಮಗೆ ನಿಮ್ಮ ಆಧಾರ್ ನವೀಕರಣದ ಸ್ಟೇಟಸ್ (Aadhar status) ತಿಳಿಯುತ್ತದೆ.

ಈ ರೀತಿ ಸುಲಭವಾಗಿ ಆಧಾರ್ ನಲ್ಲಿ ಅಡ್ರೆಸ್ ಹೆಸರು ಮೊದಲಾದವುಗಳನ್ನು ಮಾತ್ರವಲ್ಲದೆ ಫೋಟೋವನ್ನು ಕೂಡ ಬದಲಾಯಿಸಿಕೊಳ್ಳಬಹುದು.

Photo Change in Aadhaar Card, Step by Step Process

Follow us On

FaceBook Google News

Photo Change in Aadhaar Card, Step by Step Process