ರೈತರಿಗೆ ಸಿಹಿ ಸುದ್ದಿ! ಸಿಗಲಿದೆ 80% ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್ ಸೆಟ್ ಸೌಲಭ್ಯ

ಸರ್ಕಾರ ಕೃಷಿ ಭೂಮಿ (agriculture land) ಯಲ್ಲಿ ನೀರಾವರಿ ಮಾಡಲು ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್ ಸೆಟ್ (Solar Pump Set) ಒದಗಿಸಲು ಯೋಜನೆಯನ್ನು ರೂಪಿಸಿದೆ.

Bengaluru, Karnataka, India
Edited By: Satish Raj Goravigere

ರಾಜ್ಯ ಸರ್ಕಾರ ರೈತರಿಗೆ (farmers) ಶುಭ ಸುದ್ದಿಯನ್ನು ನೀಡಿದೆ. ಹಗಲು ಸಮಯದಲ್ಲಿ ತಮ್ಮ ಕೃಷಿ ಭೂಮಿ (agriculture land) ಯಲ್ಲಿ ನೀರಾವರಿ ಮಾಡಲು ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್ ಸೆಟ್ (Solar Pump Set) ಒದಗಿಸಲು ಯೋಜನೆಯನ್ನು ರೂಪಿಸಿದೆ.

ಈ ಯೋಜನೆ ಅಡಿಯಲ್ಲಿ ರೈತರು ಸುಲಭವಾಗಿ ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್ ಸೆಟ್ ಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಬಹುದು.

Apply for Free Solar Pump Set Scheme for Your agricultural land

ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ 2 ಉಚಿತ ಗ್ಯಾಸ್ ಸಿಲಿಂಡರ್! ಅರ್ಜಿ ಸಲ್ಲಿಸಿ

ಕುಸುಮ್ ಬಿ ಯೋಜನೆ!

ಅತಿ ಕಡಿಮೆ ಬೆಲೆಗೆ ಸೋಲಾರ್ ಪಂಪ್ ಸೆಟ್ ಅನ್ನು ತಮ್ಮ ಜಮೀನಿಗೆ ರೈತರು ಇನ್ನು ಮುಂದೆ ಅಳವಡಿಸಿಕೊಳ್ಳಬಹುದು. ಹೌದು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಮೂಲಕ 40,000 ಸೋಲಾರ್ ಪಂಪ್ ಸೆಟ್ ಗಳನ್ನು ರೈತರಿಗೆ ಒದಗಿಸುವ ಗುರಿ ಹೊಂದಿದೆ. ಸೌರ ಪಂಪ್ಸೆಟ್ ಅಗತ್ಯ ಇರುವವರು ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಬಹುದು.

ಸೋಲಾರ್ ಪಂಪ್ ಸೆಟ್ ಗೆ ಸಿಗುವ ಸಬ್ಸಿಡಿ ಮೊತ್ತ ಎಷ್ಟು?

ಮೂರು HP ಪವರ್ ನಿಂದ 10 HP ಪವರ್ ಒರೆಗಿನ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ರೈತರಿಗೆ ಸಹಾಯಧನ ನೀಡಲಾಗುವುದು. ಈ ಹಿಂದೆ 30% ಇದ್ದ ಸಹಾಯಧನವನ್ನು ಈಗ 50% ಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ಸರ್ ಕೇಂದ್ರ ಸರ್ಕಾರದಿಂದ 30% ಸಬ್ಸಿಡಿ ಸಿಗುತ್ತದೆ. ಅಂದ್ರೆ ನಿಜವಾಗಿ ರೈತರು ಸೋಲಾರ್ ಪಂಪ್ಸೆಟ್ ನಿಮಗೆ ಪಾವತಿ ಮಾಡಬೇಕಾಗಿದ್ದು ಕೇವಲ 20% ಅಷ್ಟು ಹಣ ಮಾತ್ರ.

5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಇರುವ ರೈತರಿಗೆ ಸಿಹಿ ಸುದ್ದಿ; ಸಿಗಲಿದೆ ಈ ಬೆನಿಫಿಟ್!

solar water pumpಅಲ್ಲಿಗೆ ಶೇಕಡಾ 80 ಪರ್ಸೆಂಟ್ ಸಬ್ಸಿಡಿ ಪಡೆದು ಸೋಲಾರ್ ಕೃಷಿ ಪಂಪ್ ಸೆಟ್ ಅಳವಡಿಸಿಕೊಳ್ಳಬಹುದು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಸಬ್ಸಿಡಿ ನೀಡುವುದರಿಂದ ಒಂದು ಲಕ್ಷ ರೂಪಾಯಿಯ ವೆಚ್ಚದಲ್ಲಿ ಪಂಪ್ ಸೆಟ್ ಅಳವಡಿಸುವುದಾದರೆ 20 ಸಾವಿರ ರೂಪಾಯಿಗಳಷ್ಟು ಮಾತ್ರ ರೈತರು ತಮ್ಮ ಕೈಯಿಂದ ಪಾವತಿ ಮಾಡಿದರೆ ಸಾಕು ಉಳಿದ ಹಣವನ್ನು ಸರ್ಕಾರವೇ ನೀಡುತ್ತದೆ.

ಕೇಂದ್ರದ ಬಂಪರ್ ಕೊಡುಗೆ! ಇಂತಹವರಿಗೆ ವಾರ್ಷಿಕ 36,000 ನೇರವಾಗಿ ಖಾತೆಗೆ ಜಮಾ

ಸೌರವಿದ್ಯುತ್ ಸಬ್ಸಿಡಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

https://souramitra.com/solar/beneficiary/register/Kusum-Yojana-Component-B ಸೌರ ಮಿತ್ರ ಅಧಿಕೃತ ವೆಬ್ಸೈಟ್ ಲಿಂಕ್ ಇಲ್ಲಿ ಕೊಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಆದಾಯದ ವಿವರ ಜಮೀನಿನ ವಿವರ ಮೊದಲಾದ ಮಾಹಿತಿಗಳನ್ನು ನೀಡಿ, ಸೋಲಾರ್ ಪಂಪ್ಸೆಟ್ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಬಹುದು.

ರೈತರು ನಾಲ್ಕು ಆದ್ಯತೆಗಳ ಮೇರೆಗೆ ಸಬ್ಸಿಡಿ ಸೋಲಾರ್ ಪಂಪ್ಸೆಟ್ ಪಡೆದುಕೊಳ್ಳಲು ಅವಕಾಶ ಇದ್ದು ಇದರ ಬಗ್ಗೆ ನೀವು ಸೌರ ಮಿತ್ರ ವೆಬ್ಸೈಟ್ನಲ್ಲಿ ಮಾಹಿತಿ ಪಡೆಯಬಹುದು. ಒಂದು ಕುಟುಂಬಕ್ಕೆ ಒಂದು ಸಾವಿರ ಸೋಲಾರ್ ಪಂಪ್ಸೆಟ್ ಮಾತ್ರ ನೀಡಲಾಗುವುದು.

ಇನ್ಮುಂದೆ ಕೃಷಿ ಭೂಮಿಯಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಬೇಕು ಪರ್ಮಿಷನ್! ಹೊಸ ನಿಯಮ

Solar pump set facility will be available at 80 Percent subsidy rate