ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ಗೂಗಲ್ ಸ್ಕಾಲರ್ಶಿಪ್! ನೇರವಾಗಿ ಬ್ಯಾಂಕ್ ಖಾತೆಗೆ ಜಮಾ

Google Scholarship : ಗೂಗಲ್ ಈಗ ಜಗತ್ತಿನ ಅತ್ಯಂತ ದೊಡ್ಡ ಕಂಪನಿಗಳಲ್ಲಿ ಒಂದು. ಗೂಗಲ್ ಹಲವಾರು ಸೇವೆಗಳು ಹಾಗೂ ಉತ್ಪನ್ನಗಳನ್ನು ಹೊಂದಿದೆ. ಗೂಗಲ್ ತಾನು ಮಾಡುವ ವೈವಿಧ್ಯಮಯ ಬಿಸಿನೆಸ್ ನ ಜೊತೆಗೆ ತನ್ನ ಸಾಮಾಜಿಕ ಕಳಕಳಿಯ ಕೆಲವು ಕಾರ್ಯಗಳಿಂದಾಗಿ ಆಗಿಂದಾಗೆ ಗುರುತಿಸಿಕೊಳ್ಳುತ್ತಿದೆ. ಹೀಗೆ ದೊಡ್ಡ ಕಂಪನಿಯೊಂದು ಸಮಾಜವನ್ನು ತನ್ನ ಜೊತೆ ಬೆಳೆಸುತ್ತಾ ಹೋದರೆ ಖಂಡಿತ ಎಲ್ಲರಿಗೂ ನೆರವಾಗುತ್ತದೆ.
ಜಗತ್ತಿನಾದ್ಯಂತ ಇರುವ ವಿಧಾರ್ಥಿಗಳನ್ನು ಗಮನದಲ್ಲಿಟ್ಟು ಗೂಗಲ್ ಈಗ ಸ್ಕಾಲರ್ಶಿಪ್ (Education Scholarship) ನೀಡುವ ಯೋಜನೆ ಒಂದನ್ನು ಆರಂಭಿಸಿದೆ. ಇದರ ಮೂಲಕ ಬಡ ಹಾಗೂ ಅರ್ಹ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಬಹುದು, ಹಣದ ಸಮಸ್ಯೆ ಇದೆ, ಎಂದಾದಲ್ಲಿ ಈ ಸ್ಕಾಲರ್ಶಿಪ್ ಅನ್ನು ಬಳಸಿಕೊಂಡು ತಮ್ಮ ಗುರಿ ಮುಟ್ಟಬಹುದು. ಇದರಿಂದಾಗಿ ಹಲವಾರು ವಿದ್ಯಾರ್ಥಿಗಳು ಹಣದ ಸಮಸ್ಯೆಯಿಂದ ಶಿಕ್ಷಣವನ್ನು ಅರ್ಧದಲ್ಲಿಯೇ ಕೈಬಿಡುವ ಸಂದರ್ಭ ತಪ್ಪುತ್ತದೆ.
ಇಂತಹ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿ! ಕೇಂದ್ರದ ಬಂಪರ್ ಯೋಜನೆ
ಜನರೇಶನ್ ಗೂಗಲ್ ಸ್ಕಾಲರ್ಶಿಪ್
ಗೂಗಲ್ ಸ್ಕಾಲರ್ಶಿಪ್ ಯೋಜನೆಯನ್ನು ಜನರೇಶನ್ ಗೂಗಲ್ ಸ್ಕಾಲರ್ಶಿಪ್ ಎಂದು ಕರೆಯುತ್ತಿದೆ. ಜನರೇಶನ್ ಸ್ಕಾಲರ್ಶಿಪ್ ಫೌಂಡೇಶನ್ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ನ ಪ್ರಯೋಜನಗಳನ್ನು ಪಡೆಯಬಹುದು. ಪ್ರಪಂಚದಾದ್ಯಂತ ಇರುವ ಬಡ ಮತ್ತು ಹಿಂದುಳಿದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಗೂಗಲ್ ಈ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಮೂಲಕ ಅರ್ಹ ವಿದ್ಯಾರ್ಥಿಗಳು 2,500 ಯು ಎಸ್ ಡಾಲರ್ಸ್ ತನಕದ ನೆರವನ್ನು ಪಡೆಯಲು ಸಾಧ್ಯ.
ದಿನಕ್ಕೆ 20 ಲೀಟರ್ ಹಾಲು ಕೊಡೋ ಈ ತಳಿ ಹಸು ಸಾಕಿದ್ರೆ ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್
ವಿಜ್ಞಾನ ಮತ್ತು ತಂತ್ರಜ್ಞಾನದ ಉನ್ನತ ಶಿಕ್ಷಣಕ್ಕಾಗಿ ಈ ಯೋಜನೆ
ಈ ಸ್ಕಾಲರ್ಶಿಪ್ ಅನ್ನು ಪಡೆಯಬೇಕಾದರೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರಬೇಕು. ಉನ್ನತ ಕೌಶಲ್ಯಕ್ಕಾಗಿ ಹಣದ ಸಹಾಯ ಬೇಕು ಎಂದು ಅನಿಸಿದವರು ಈ ಸ್ಕಾಲರ್ಶಿಪ್ ನ ಮೂಲಕ ತಮ್ಮ ಗುರಿ ಮುಟ್ಟಬಹುದು.
ಈ ಯೋಜನೆ ಜಗತ್ತಿನ ಹಲವು ದೇಶಗಳಿಗೆ ನೀಡಲಾಗುತ್ತಿದ್ದು, ಭಾರತೀಯರು ಕೂಡ ಯೋಜನೆಯ ಲಾಭ ಪಡೆಯಬಹುದು. 2,500 ಯು ಎಸ್ ಡಾಲರ್ಸ್ ಎಂದರೆ ಎರಡು ಲಕ್ಷ ತೊಂಭತ್ತು ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತದ ಸಹಾಯ ಸಿಗಲಿದೆ.
ಗ್ಯಾಸ್ ಸಿಲಿಂಡರ್, ಬ್ಯಾಂಕ್ ಅಕೌಂಟ್ ಸೇರಿದಂತೆ ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಈಗಾಗಲೇ ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸುವಂತಹ ಕೆಲಸಗಳು ನಡೆದಿದ್ದು, ನೀವು ಕೂಡ ಈ ಸ್ಕಾಲರ್ಷಿಪ್ ಅನ್ನು ಪಡೆಯಬೇಕು ಎಂದಾದರೆ ತಡ ಮಾಡಬೇಡಿ. ಅರ್ಜಿ ಸಲ್ಲಿಸುವ ಕೆಲಸಗಳು ಆರಂಭವಾಗಿದ್ದು, 26 ಮಾರ್ಚ್ 2024 ರಿಂದ ಗೂಗಲ್ ಅರ್ಜಿಗಳನ್ನು ಆಹ್ವಾನಿಸುತ್ತಿದೆ.
16 ಮೇ 2024 ರ ತನಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಹ ವಿದ್ಯಾರ್ಥಿಗಳಿಗೆ ಇದಾದ ನಂತರ ಸ್ಕಾಲರ್ಶಿಪ್ ಅನ್ನು ವಿತರಿಸಲಾಗುವುದು. ಈ ಯೋಜನೆಯ ಮೂಲಕ ಖಂಡಿತ ಹಲವಾರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ನಿಪುಣರು ಉತ್ತಮ ಕಾಲೇಜುಗಳಲ್ಲಿ ತಮ್ಮ ಶಿಕ್ಷಣ ಮುಂದುವರೆಸುವ ಅವಕಾಶ ಪಡೆಯುತ್ತಾರೆ.
ಉಚಿತ ಮನೆ ಯೋಜನೆ ಮೂಲಕ ವಸತಿ ಹಂಚಿಕೆಯ ಲಿಸ್ಟ್ ಬಿಡುಗಡೆ! ಪಟ್ಟಿ ಚೆಕ್ ಮಾಡಿ
Such students will get Google Scholarship into bank account
ವಿಜ್ಞಾನ ಮತ್ತು ತಂತ್ರಜ್ಞಾನದ ಉನ್ನತ ಶಿಕ್ಷಣಕ್ಕಾಗಿ ಈ ಯೋಜನೆ



