ರಾಜ್ಯದ ಎಲ್ಲಾ ಮಹಿಳೆಯರು ಪಡೆಯಬಹುದು ಉಚಿತ ಹೊಲಿಗೆ ಯಂತ್ರ; ಅರ್ಜಿ ಸಲ್ಲಿಸಿ
Loan : ಸಾಕಷ್ಟು ಮಹಿಳೆಯರು ಹೊಲಿಗೆಯನ್ನು ಕಲಿತುಕೊಂಡು ಮನೆಯಲ್ಲಿಯೇ ಸಣ್ಣಪುಟ್ಟ ಸ್ಟಿಚಿಂಗ್ ಮಾಡಿಕೊಂಡು ಇರುತ್ತಾರೆ. ಅಥವಾ ಕೆಲವು ಬಾರಿ ಬೇರೆ ಯಾರದೋ ಹೊಲಿಗೆ ಅಂಗಡಿಯಲ್ಲಿ ಕೈ ಕೆಲಸ ಮಾಡಿಕೊಂಡು ಇರಬಹುದು.
ಆದರೆ ಹೀಗೆ ಅಲ್ಲೆಲ್ಲೋ ಕೆಲಸ ಮಾಡುವುದಕ್ಕಿಂತ ನೀವು ನಿಮ್ಮದೇ ಆಗಿರುವ ಸ್ವಂತ ಹೊಲಿಗೆ (sewing machine) ಯಂತ್ರವನ್ನು ಇಟ್ಟುಕೊಂಡು ನೀವೇ ಸಣ್ಣದಾಗಿ ಹೊಲಿಗೆ ಅಂಗಡಿ ಆರಂಭಿಸಿದ್ರೆ ಕೈತುಂಬ ಹಣ ಗಳಿಸಬಹುದು ಅಲ್ವಾ? ಹಾಗಾದ್ರೆ ಹೇಗೆ ಮಾಡಬಹುದು ಇಲ್ಲಿದೆ ಮಾಹಿತಿ.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ಗೂಗಲ್ ಸ್ಕಾಲರ್ಶಿಪ್! ನೇರವಾಗಿ ಬ್ಯಾಂಕ್ ಖಾತೆಗೆ ಜಮಾ
ಹೌದು, ಇಂದು ಸಾಕಷ್ಟು ಮಹಿಳೆಯರು ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಳ್ಳುತ್ತಾ ಸಂಸಾರವನ್ನು ಸುಧಾರಿಸಿಕೊಂಡು ಅವರ ಟ್ಯಾಲೆಂಟ್ ಅನ್ನು ಹೊರ ಹಾಕದೆ ತಮ್ಮ ಜೀವನವನ್ನು ಅಷ್ಟಕ್ಕೆ ಸೀಮಿತಗೊಳಿಸಿಕೊಂಡಿರುತ್ತಾರೆ.
ಆದರೆ ಹೆಣ್ಣು ಮಕ್ಕಳಿಗೆ ಈಗ ಸರ್ಕಾರ ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದು ನೀವು ನಿಮ್ಮ ಮನೆಯಲ್ಲಿಯೇ ಬೇಕಾದರೂ ಹೊಲಿಗೆ ಯಂತ್ರವನ್ನು ಇಟ್ಟುಕೊಂಡು ಸ್ಟಿಚಿಂಗ್ ಮಾಡಬಹುದು. ಇದಕ್ಕಾಗಿ ಉಚಿತವಾಗಿ ಹೊಲಿಗೆ ಯಂತ್ರ ಕೊಡಲು ಮುಂದಾಗಿದೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಿಗುತ್ತೆ ಉಚಿತ ಹೊಲಿಗೆ ಯಂತ್ರ!
ದೇಶದಲ್ಲಿ ವಾಸಿಸುವ ಸಾಂಪ್ರದಾಯಿಕ ಉದ್ಯಮಗಳನ್ನ ಮಾಡಿಕೊಂಡು ಬಂದಿರುವ ಅಥವಾ ಕರಕುಶಲ ಕೆಲಸಗಳನ್ನು ಮಾಡಿಕೊಂಡು ಬಂದಿರುವವರಿಗೆ ಸಹಾಯಕವಾಗಲು ಪ್ರಧಾನಮಂತ್ರಿಯ ವಿಶ್ವಕರ್ಮ ಯೋಜನೆಯ ಜಾರಿಗೆ ತರಲಾಗಿದೆ
ಇದರ ಅಡಿಯಲ್ಲಿ ಬೇರೆ ಬೇರೆ ಉದ್ಯಮಗಳನ್ನು ಮಾಡುವವರಿಗೆ ಸರ್ಕಾರ ಸಾಲ ಸೌಲಭ್ಯ (Loan) ನೀಡುವುದರ ಜೊತೆಗೆ ತರಬೇತಿ ಟೂಲ್ ಕಿಟ್ ಪಡೆದುಕೊಳ್ಳಲು ಹಣ ಸಹಾಯ ಮೊದಲಾದವುಗಳನ್ನು ನೀಡುತ್ತದೆ
ಇದರ ಜೊತೆಗೆ ಇದೇ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿದೆ. ಈ ಯೋಜನೆ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ ಪುರುಷರು ಕೂಡ ಹೊಲಿಗೆ ಯಂತ್ರವನ್ನು ಪಡೆಯಬಹುದು.
ಗ್ಯಾಸ್ ಸಿಲಿಂಡರ್, ಬ್ಯಾಂಕ್ ಅಕೌಂಟ್ ಸೇರಿದಂತೆ ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ
ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ?
ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳುವುದಕ್ಕಾಗಿ ಮಹಿಳೆಯರಿಗೆ 15000 ರೂಪಾಯಿಗಳ ಇ – ವೋಚರ್ ಅಥವಾ ರೂಪೇ ಮುಖಾಂತರ ಬ್ಯಾಂಕ್ ಖಾತೆಗೆ (Bank Account) ಹಣ ಜಮಾ ಮಾಡಲಾಗುವುದು. ಇದರ ಜೊತೆಗೆ ಮಹಿಳೆಯರಿಗೆ ಒಂದು ವಾರಗಳ ಕಾಲ ಟ್ರೈನಿಂಗ್ ನೀಡಲಾಗುತ್ತದೆ. ಈ ಹಣವನ್ನು ಬಳಸಿಕೊಂಡು ಹೊಲಿಗೆ ಯಂತ್ರವನ್ನು ಖರೀದಿ ಮಾಡಬಹುದು.
ಯಾರಿಗೆ ಸಿಗುತ್ತೆ ಉಚಿತ ಹೊಲಿಗೆ ಯಂತ್ರ?
* ಭಾರತ ದೇಶದ ನಿವಾಸಿಗಳಾಗಿರಬೇಕು.
* 18 ವರ್ಷ ಕಳೆದ ಪುರುಷ ಅಥವಾ ಮಹಿಳೆ ಅರ್ಜಿ ಸಲ್ಲಿಸಬಹುದು
* ಸರ್ಕಾರದ ಯಾವುದೇ ಯೋಜನೆ ಅಡಿಯಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆದುಕೊಂಡಿರಬಾರದು.
* ಮನೆಯಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗಲಿದೆ
* ಆದಾಯ ತೆರಿಗೆ ಪಾವತಿ ಮಾಡುವವರಾಗಿದ್ದರೆ ಅಥವಾ ಸರ್ಕಾರಿ ನೌಕರರಾಗಿದ್ದರೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಹರಲ್ಲ.
ಉಚಿತ ಮನೆ ಯೋಜನೆ ಮೂಲಕ ವಸತಿ ಹಂಚಿಕೆಯ ಲಿಸ್ಟ್ ಬಿಡುಗಡೆ! ಪಟ್ಟಿ ಚೆಕ್ ಮಾಡಿ
ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ದಾಖಲೆಗಳು!
* ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಆದಾಯ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ
* ಹೊಲಿಗೆ ತರಬೇತಿ ಸರ್ಟಿಫಿಕೇಟ್
* ಬ್ಯಾಂಕ್ ಪಾಸ್ ಬುಕ್ ವಿವರ
* ಮೊಬೈಲ್ ಸಂಖ್ಯೆ
ಈ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಇದ್ರೂ ಸರ್ಕಾರವೇ ಕೊಡಲಿದೆ 10,000 ರೂಪಾಯಿ!
ಅರ್ಜಿ ಸಲ್ಲಿಸುವುದು ಹೇಗೆ?
https://pmvishwakarma.gov.in/Login ಈ ವೆಬ್ ಸೈಟಿಗೆ ಲಾಗಿನ್ ಆಗಿ. ನಂತರ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. ಒಟ್ಟಾರೆಯಾಗಿ ಮಹಿಳೆಯರ ಸ್ವಾವಲಂಬಿ ಜೀವನವನ್ನು ಉತ್ತೇಜಿಸುವ ಸಲುವಾಗಿ ಉಚಿತ ಹೊಲಿಗೆ ಯಂತ್ರವನ್ನು ಸರ್ಕಾರ ನೀಡುತ್ತಿದ್ದು, ದೇಶದ ಎಲ್ಲ ರಾಜ್ಯದ ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
Such women in the state can get a free sewing machine
Our Whatsapp Channel is Live Now 👇