ಸರ್ಕಾರದ ಹೊಸ ಯೋಜನೆ! ಯಾವುದೇ ಗ್ಯಾರಂಟಿ ಕೊಡದೆ ಪಡೆಯಿರಿ 50 ಸಾವಿರ ಸಾಲ

ಸಾಲ ಸೌಲಭ್ಯ (loan facility) ನೀಡಿ ಸ್ವಂತ ಉದ್ಯಮ ಮಾಡಿ ಕೊಂಡು ಜೀವನ ಕಟ್ಟಿಕೊಳ್ಳಬೇಕು ಎಂದುಕೊಂಡಿರುವವರ ಕನಸನ್ನು ನನಸು ಮಾಡುವತ್ತ ಕೇಂದ್ರ ಸರ್ಕಾರ ಬಹಳ ಜವಾಬ್ದಾರಿಯುತ ಹೆಜ್ಜೆಯನ್ನು ಇಟ್ಟಿದೆ

ಕಡಿಮೆ ಬಡ್ಡಿ ದರ (Low interest rate) ದಲ್ಲಿ ಸಾಲ ಸೌಲಭ್ಯ (loan facility) ನೀಡಿ ಸ್ವಂತ ಉದ್ಯಮ ಮಾಡಿ ಕೊಂಡು ಜೀವನ ಕಟ್ಟಿಕೊಳ್ಳಬೇಕು ಎಂದುಕೊಂಡಿರುವವರ ಕನಸನ್ನು ನನಸು ಮಾಡುವತ್ತ ಕೇಂದ್ರ ಸರ್ಕಾರ ಬಹಳ ಜವಾಬ್ದಾರಿಯುತ ಹೆಜ್ಜೆಯನ್ನು ಇಟ್ಟಿದೆ.

ಇತ್ತೀಚಿಗೆ ಮಂಡಿಸಲಾದ ಮಧ್ಯಂತರ ಬಜೆಟ್ ಅಲ್ಲಿಯೂ ಕೂಡ ಸಾಕಷ್ಟು ಬಡ ಹಾಗೂ ಮಧ್ಯಮ ವರ್ಗದ ಪರವಾಗಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದೀಗ ಪ್ರಧಾನ ಮಂತ್ರಿ ಅವರು ಬಡವರಿಗಾಗಿ ಜಾರಿಗೆ ತಂದಿರುವ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಪ್ರಧಾನ ಮಂತ್ರಿ ಸ್ಟ್ರೀಟ್‌ ವೆಂಡರ್ಸ್‌ ಆತ್ಮನಿರ್ಭರ್‌ ನಿಧಿ ಯೋಜನೆ (PM Street vendors Vendors Atmanirbhar Nidhi scheme)!

ಸರ್ಕಾರದ ಹೊಸ ಯೋಜನೆ! ಯಾವುದೇ ಗ್ಯಾರಂಟಿ ಕೊಡದೆ ಪಡೆಯಿರಿ 50 ಸಾವಿರ ಸಾಲ - Kannada News

ಮನೆಯಲ್ಲೇ ಕುಳಿತು ತಿಂಗಳಿಗೆ 1 ಲಕ್ಷ ಗಳಿಸಿ; ಕೇವಲ 2 ಗಂಟೆ ಕೆಲಸ ಮಾಡಿದ್ರೆ ಸಾಕು

ವ್ಯಾಪಾರ ಸಣ್ಣದಿರಲಿ ಅಥವಾ ದೊಡ್ಡದಿರಲಿ ಅದನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗಲು ಸೂಕ್ತವಾಗಿರುವ ಬಂಡವಾಳ ಬೇಕು. ಆದರೆ ಬಡವರಿಗೆ ತಮ್ಮ ಉದ್ಯಮವನ್ನು ವಿಸ್ತರಿಸಲು ಬಂಡವಾಳ ಹಾಕಲು ಸಾಧ್ಯವಾಗದೆ ಇದ್ದಾಗ ಅವರ ಉದ್ಯಮ ಮುಂದುವರಿಯಲು ಸಾಧ್ಯವಿಲ್ಲ. ಜೊತೆಗೆ ಕೇಂದ್ರ ಸರ್ಕಾರ ಈ ಒಂದು ಹೊಸ ಯೋಜನೆಯನ್ನು ಆರಂಭಿಸಿದ್ದು ಬೀದಿಯಲ್ಲಿ ವ್ಯಾಪಾರ ಮಾಡುವವರಿಗೆ ಬಹಳ ಸಹಾಯಕವಾಗಲಿದೆ.

ಪ್ರಧಾನಮಂತ್ರಿ ಸ್ವಾನಿಧಿ ಯೋಜನೆ (PM Svanidhi schem)

2020ರಲ್ಲಿ ಕರೋನಾ ಎನ್ನುವ ಮಹಾಮಾರಿ, ದೇಶವನ್ನು ಆವರಿಸಿದ್ದ ಸಂದರ್ಭದಲ್ಲಿ ಹೆಚ್ಚು ನಷ್ಟವಾಗಿದ್ದೆ ಬೀದಿ ಬದಿಯಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ. ಇಂಥವರು ಮತ್ತೆ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಯಾವುದೇ ಗ್ಯಾರಂಟಿ ಇಲ್ಲದೆ 50,000 ರೂಪಾಯಿಗಳ ಸಾಲ ಸೌಲಭ್ಯ ನೀಡಲು ಸರ್ಕಾರ ಯೋಜನೆಯ ಆರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ ಸಾಲಕ್ಕಾಗಿ 76,78,830 ಅರ್ಜಿಗಳು ಬಂದಿದ್ದು, 60,03,816 ಜನರಿಗೆ ಸಾಲ ಮಂಜೂರು ಮಾಡಲಾಗಿದೆ.

ಕುರಿ ಕೋಳಿ ಮೇಕೆ ಹಸು ಸಾಕಾಣಿಕೆಗೆ ಸಿಗಲಿದೆ 20 ಲಕ್ಷ ಸಾಲ, 7 ಲಕ್ಷ ಸಬ್ಸಿಡಿ! ಅರ್ಜಿ ಸಲ್ಲಿಸಿ

ಸ್ವಾನಿಧಿ ಯೋಜನೆಯ ಪ್ರಯೋಜನ!

ಈ ಯೋಜನೆಯ ಅಡಿಯಲ್ಲಿ ಮೊದಲು 10,000ಗಳನ್ನು ಯಾವುದೇ ಗ್ಯಾರಂಟಿ ಇಲ್ಲದಿದ್ದರೆ ನೀಡಲಾಗುತ್ತದೆ. ಇದನ್ನು ಮರುಪಾವತಿ ಮಾಡಿದ ನಂತರ 20,000 ಹಾಗೂ 50,000ಗಳನ್ನು ಸಾಲವಾಗಿ ಪಡೆಯಬಹುದು. ಇದನ್ನು ಮರುಪಾವತಿ ಮಾಡಿದ ನಂತರ ಮತ್ತೆ ಸಾಲ ಪಡೆಯಬಹುದು. ಮೊದಲ ಹಂತದ ಅಂದರೆ 10,000 ತೆಗೆದುಕೊಂಡರೆ ಒಂದು ವರ್ಷದ ಅವಧಿಯಲ್ಲಿ ಮರುಪಾವತಿ ಮಾಡಬೇಕು. ಹಾಗೆಯೇ 20 ರಿಂದ 50 ಸಾವಿರ ರೂಪಾಯಿಗಳ ಸಾಲ ಪಡೆದುಕೊಂಡರೆ ಎರಡು ವರ್ಷಗಳಲ್ಲಿ ಮರುಪಾವತಿ ಮಾಡಬೇಕು. ಯೋಜನೆಯಡಿಯಲ್ಲಿ ಫಲಾನುಭವಿಗಳು 7% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳುತ್ತಾರೆ.

Bank Loanಸ್ವನಿಧಿ ಯೋಜನೆ ಯಾರಿಗಾಗಿ?

ಸ್ಥಳೀಯ ಆಡಳಿತ ಸಂಸ್ಥೆಯಿಂದ ನೀಡಲಾದ ಐಡಿ ಕಾರ್ಡ್ ಹೊಂದಿರುವ ಬೀದಿ ಬದಿಯ ವ್ಯಾಪಾರಿಗಳು ಅರ್ಜಿ ಸಲ್ಲಿಸಲು ಅವಕಾಶ ಇದೆ. ಬೀದಿ ಬದಿಯಲ್ಲಿ ಹಣ್ಣು ತರಕಾರಿ ಮಾರಾಟ ಮಾಡುವವರು, ರಸ್ತೆಯಲ್ಲಿ ಆಟಿಕೆ ಮಾರಾಟ ಮಾಡುವವರು, ಇಸ್ತ್ರಿ ಅಂಗಡಿ, ಪಾನ್ ಶಾಪ್, ಬೀದಿ ಬದಿಯಲ್ಲಿ ಸಲೂನ್ ಇಟ್ಟುಕೊಂಡವರು, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರು ಈ ಯೋಜನೆಯಡಿಯಲ್ಲಿ ತಮ್ಮ ವ್ಯಾಪಾರಕ್ಕೆ ಬಂಡವಾಳವಾಗಿ ಸಾಲ ಸೌಲಭ್ಯ ಪಡೆಯಬಹುದು.

ಸೈಟ್ ಖರೀದಿಗೂ ಸಿಗುತ್ತೆ ಸಾಲ? ಸಿಕ್ಕ ಸಾಲಕ್ಕೆ ಬಡ್ಡಿ ಎಷ್ಟು ಗೊತ್ತಾ? ಇಲ್ಲಿದೆ ಡೀಟೇಲ್ಸ್

ಎಲ್ಲಿ ಸಾಲ ಪಡೆಯಬಹುದು?

ಯಾವುದೇ ಸಾರ್ವಜನಿಕ ವಲಯದ ಬ್ಯಾಂಕ್, ಹಣಕಾಸು ಸಂಸ್ಥೆಗಳು, ಕೋ ಆಪರೇಟಿವ್ ಸೊಸೈಟಿ, NBFC ಗಳಲ್ಲಿ ಸಾಲ ಪಡೆಯಬಹುದಾಗಿದೆ.

ಸ್ವನಿಧಿ ಸಾಲಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ನರೇಗಾ ಕಾರ್ಡ್
ಡ್ರೈವಿಂಗ್ ಲೈಸೆನ್ಸ್
ವಿಳಾಸದ ಪುರಾವೆ

5 ಸಾವಿರ ಹೂಡಿಕೆ ಮಾಡಿ 5 ಲಕ್ಷ ಪಡೆಯಿರಿ; ಉಳಿತಾಯ ಮಾಡೋಕೆ ಹೊಸ ಯೋಜನೆ

ಸ್ವನಿಧಿ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ನೀವು ಸರ್ಕಾರಿ ಸ್ವಾಮೀದ ಬ್ಯಾಂಕ್ ಅಥವಾ ಕೊ ಆಪರೇಟಿವ್ ಸೊಸೈಟಿ ಮೊದಲದ ಸಂಸ್ಥೆಗಳಲ್ಲಿ ಸ್ವನಿಧಿ ಯೋಜನೆಯ ಅರ್ಜಿ ಫಾರ್ಮ್ ಭರ್ತಿ ಮಾಡಿ. ಅಗತ್ಯ ಇರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು. ಅರ್ಹತೆ ಇರುವ ವ್ಯಾಪಾರಿಗಳಿಗೆ ಬ್ಯಾಂಕ್ನಿಂದ ತಕ್ಷಣ ಸಾಲ ಸೌಲಭ್ಯ ಸಿಗುತ್ತದೆ.

The government new Scheme, Get 50 thousand loan without any guarantee

Follow us On

FaceBook Google News

The government new Scheme, Get 50 thousand loan without any guarantee