Kannada News Business News

ಹೊಸ ಮನೆ ಕಟ್ಟೋರಿಗೆ ಸರ್ಕಾರದಿಂದಲೇ ಸಿಗಲಿದೆ 2.67 ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ

Free housing Scheme for 3 crore poor people, apply for PM Awas Yojana

ಹೊಸ ಮನೆ ನಿರ್ಮಾಣಕ್ಕೆ ಸರ್ಕಾರದಿಂದ 2.67 ಲಕ್ಷ ರೂಪಾಯಿ ಪಡೆಯಬಹುದು; ಹೀಗೆ ಅರ್ಜಿ ಸಲ್ಲಿಸಿ!

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕೂಡ ತಮ್ಮದೇ ಆಗಿರಬಹುದು ಸ್ವಂತ ಸೂರು (own house) ಹೊಂದಿರಬೇಕು ಎನ್ನುವುದು ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರ ಕನಸು.

ಇದೇ ಕಾರಣಕ್ಕೆ 2015ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ, ಹಾಗೂ ಈ ಯೋಜನೆಯ ಅಡಿಯಲ್ಲಿ ಈಗಾಗಲೇ 7 ಕೋಟಿ ಮನೆ ನಿರ್ಮಾಣ ಮಾಡಲಾಗಿದೆ.

ಫೆಬ್ರವರಿ 1, 2024 ಮಧ್ಯಂತರ ಬಜೆಟ್ ಅನ್ನು ಘೋಷಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ (minister Nirmala sitaraman) ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಬಗ್ಗೆ ಮಾತನಾಡಿದರು. ಮುಂದಿನ ಐದು ವರ್ಷಗಳಲ್ಲಿ ಎರಡು ಕೋಟಿ ಮನೆ ನಿರ್ಮಾಣವನ್ನು ಈ ಯೋಜನೆಯ ಅಡಿಯಲ್ಲಿ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ ಎಂದರು.

ಆಸ್ತಿ, ಜಮೀನು ನೋಂದಣಿ ವಿಚಾರದಲ್ಲಿ ಹೊಸ ರೂಲ್ಸ್! ಸರ್ಕಾರ ಖಡಕ್ ವಾರ್ನಿಂಗ್

ಪ್ರಧಾನ ಮಂತ್ರಿ ಆವಾಸ್ ಯೋಜನೆ ಕ್ರೆಡಿಟ್ ಲಿಂಕ್ ಸಬ್ಸಿಡಿ (credit link subsidy scheme) ಆಗಿದ್ದು, ಈ ಯೋಜನೆಯ ಫಲಾನುಭವಿಗೆ ರೂ.2,67,000 ಸಬ್ಸಿಡಿ ಸರ್ಕಾರ ನೀಡುತ್ತದೆ ಹಾಗೂ ನೀವು ಯಾವ ಬ್ಯಾಂಕ್ ನಲ್ಲಿ ಹೋಂ ಲೋನ್ (home loan) ತೆಗೆದುಕೊಳ್ಳುತ್ತಿರೋ ಅದೇ ಬ್ಯಾಂಕ್ಗೆ ಸರ್ಕಾರ ಈ ಹಣವನ್ನು ಜಮಾ ಮಾಡುತ್ತದೆ.

ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಬಗ್ಗೆ ಪ್ರಮುಖ ಮಾಹಿತಿ! 

ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2.67 ಲಕ್ಷ ರೂಪಾಯಿಗಳನ್ನು ಸಬ್ಸಿಡಿಗಾಗಿ ಪಡೆಯಬೇಕು ಎಂದಾದರೆ, ಯಾವಾಗ ಗೃಹ ಸಾಲವನ್ನು (Home Loan) ಪಡೆದುಕೊಳ್ಳುತ್ತಿರುವ ಅದೇ ಸಮಯದಲ್ಲಿ ಈ ಯೋಜನೆಗೆ ಅಪ್ಲೈ ಮಾಡಿರಬೇಕು. ಹೋಂ ಲೋನ್ ಪಡೆದುಕೊಂಡ ಒಂದೆರಡು ವರ್ಷಗಳ ನಂತರ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ

ಪಿಂಚಣಿ ಯೋಜನೆಗೆ ಇನ್ಮುಂದೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ; ಸುಲಭ ವಿಧಾನ!

housing schemeಬ್ಯಾಂಕ್ ನಲ್ಲಿ ಹೋಂ ಲೋನ್ (Home Loan) ಮರುಪಾವತಿ ಮಾಡುವ ಅವಧಿ 20 ವರ್ಷಗಳು. ಇದು ನೀವು ಯಾವ ವಯಸ್ಸಿನಲ್ಲಿ ಹೋಂ ಲೋನ್ ತೆಗೆದುಕೊಳ್ಳುತ್ತೀರಿ ಎನ್ನುವುದರ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಇನ್ನು ನೀವು ಯಾವ ರೀತಿ ಸರ್ಕಾರದಿಂದ ಸಬ್ಸಿಡಿ ಪಡೆಯಬಹುದು ಎಂದು ನೋಡುವುದಾದರೆ, ಬ್ಯಾಂಕ್ ನಿಮಗೆ 10% ಬಡ್ಡಿ ದರ (rate of interest) ದಲ್ಲಿ ಹೋಂ ಲೋನ್ ಮಂಜೂರು ಮಾಡಿದೆ ಎಂದು ಭಾವಿಸಿ. ಆಗ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನ ದೊರೆತರೆ ಈ ಎಂಐ (EMI) ಪಾವತಿ ಮಾಡುವ ಮೊತ್ತ ಕಡಿಮೆ ಆಗುತ್ತದೆ. ಅಂದರೆ ಬ್ಯಾಂಕ್ ವಿಧಿಸಿರುವ ಬಡ್ಡಿ ದರ ನಿಮಗೆ ಕಡಿಮೆ ಆಗುತ್ತದೆ.

ಯಾವುದೇ ಬ್ಯಾಂಕ್ ಅಕೌಂಟ್ ಇದ್ದವರಿಗೆ ಭರ್ಜರಿ ಸುದ್ದಿ! 2 ಲಕ್ಷ ರೂಪಾಯಿ ಪಡೆಯಿರಿ

ಯಾರಿಗೆ ಎಷ್ಟು ಬಡ್ಡಿದರ ಕಡಿತ!

EWS – 6.7%
LLG – 6.7%
MIG I & MIG – 3%

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed documents)

ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಆದಾಯದ ಪುರಾವೆ
ವಿಳಾಸದ ಪುರಾವೆ
ಉದ್ಯೋಗ ಮಾಡುವವರಾಗಿದ್ದರೆ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (bank statement)
ಸ್ವಂತ ಉದ್ಯಮಮಾಡುವವರಾಗಿದ್ದರೆ ಐ ಟಿ ಆರ್ ಫೈಲಿಂಗ್ (ITR filing) ಮಾಹಿತಿ.

ಸರ್ಕಾರದ ಈ ಯೋಜನೆಯಲ್ಲಿ ಪ್ರತಿದಿನ ಸಿಗುತ್ತೆ 500 ರೂಪಾಯಿ! ಅರ್ಜಿ ಸಲ್ಲಿಸಿ

ಯಾರು ಅರ್ಜಿ ಸಲ್ಲಿಸಬಹುದು ಗೊತ್ತಾ?

ಕುಟುಂಬದ ವಾರ್ಷಿಕ ಆದಾಯ 18 ಲಕ್ಷ ರೂಪಾಯಿಗಳನ್ನು ಮೀರಬಾರದು. PUCCA ಮನೆ ಆಗಿರಬಾರದು. ನೀವು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಹತ್ತಿರದ ಬ್ಯಾಂಕ್ ಅಥವಾ CSC ಕೇಂದ್ರಕ್ಕೆ ಭೇಟಿ ನೀಡಿ.

The government will give 2.67 lakh rupees to build a new Own house