ಆಸ್ತಿ ಖರೀದಿಗೆ ಇನ್ಮುಂದೆ ಈ ದಾಖಲೆಗಳು ಕಡ್ಡಾಯ! ಇಲ್ಲದೆ ಇದ್ರೆ ಭೂಮಿ ಖರೀದಿಸಲು ಸಾಧ್ಯವಿಲ್ಲ

Story Highlights

ಅಸ್ತಿ ಖರೀದಿಯ ಬಗ್ಗೆ ಸರ್ಕಾರ ವಿಶೇಷವಾದ ಆದೇಶ ಒಂದನ್ನು ಹೊರಡಿಸಿದ್ದು ತಪ್ಪದೇ ಆಸ್ತಿ ಖರೀದಿ (Property Purchase) ಮಾಡುವವರು ಇದನ್ನು ತಿಳಿದುಕೊಳ್ಳಲೇಬೇಕು.

ಆಸ್ತಿ ಖರೀದಿ (land purchase) ಅಥವಾ ಯಾವುದೇ ರೀತಿಯಾದಂತಹ ಜಮೀನು ಹಾಗೂ ಭೂಮಿ ಖರೀದಿಸುವುದಕ್ಕೆ ಭಾರತೀಯ ಕಾನೂನಿನಲ್ಲಿ (Indian law) ಸಾಕಷ್ಟು ನೀತಿ ನಿಯಮಗಳು ಇವೆ

ಪ್ರತಿಯೊಬ್ಬರು ಇದನ್ನು ಸರಿಯಾಗಿ ಪಾಲಿಸಿದರೆ ಮಾತ್ರ ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ರೀತಿಯ ಆಸ್ತಿಯನ್ನು ಖರೀದಿ ಮಾಡಲು ಸಾಧ್ಯ, ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದ್ರೆ.. ಖರೀದಿಸಿದ ಆಸ್ತಿಯನ್ನು ಕೂಡ ಸರ್ಕಾರ (government) ಮುಟ್ಟುಗೋಲು ಹಾಕಿಕೊಳ್ಳಬಹುದು.

ಇದೀಗ ಅಸ್ತಿ ಖರೀದಿಯ ಬಗ್ಗೆ ಸರ್ಕಾರ ವಿಶೇಷವಾದ ಆದೇಶ ಒಂದನ್ನು ಹೊರಡಿಸಿದ್ದು ತಪ್ಪದೇ ಆಸ್ತಿ ಖರೀದಿ (Property Purchase) ಮಾಡುವವರು ಇದನ್ನು ತಿಳಿದುಕೊಳ್ಳಲೇಬೇಕು.

ಒಂದು ಆಸ್ತಿ ಖರೀದಿ ಮಾಡುವುದು ಅಂದ್ರೆ ಅದು ಉತ್ತಮ ಉಳಿತಾಯ (saving) ಎನಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಭಾರತದಲ್ಲಿ ಹಣ ಇದ್ದಾಗ ಅದನ್ನ ಭೂಮಿ ಖರೀದಿಯ ಮೇಲೆ ಹೂಡಿಕೆ (investment) ಮಾಡುವವರ ಸಂಖ್ಯೆ ಜಾಸ್ತಿ.

ಆದರೆ ಹೀಗೆ ಒಂದು ಸಣ್ಣ ತುಂಡು ಜಮೀನು ಖರೀದಿ ಮಾಡುವುದಿದ್ದರೂ ಅದಕ್ಕೆ ನಿಮ್ಮ ಬಳಿ ಮುಖ್ಯವಾದ ದಾಖಲೆ (documents) ಇರಬೇಕು, ಒಂದು ವೇಳೆ ಈ ದಾಖಲೆ ಇಲ್ಲದೆ ನೀವು ಭೂಮಿ ಖರೀದಿಗೆ ಮುಂದಾದರೆ ಆಗ ಸರ್ಕಾರದಿಂದ ನಿಮ್ಮನ್ನ ಪ್ರಶ್ನಿಸಲಾಗುತ್ತದೆ. ಹಾಗೂ ನೀವು ಖರೀದಿಸಿದ ಆಸ್ತಿ ಕೂಡ ನಿಮಗೆ ಸಿಗದೇ ಇರಬಹುದು.

ಹಾಗಾದ್ರೆ ಆಸ್ತಿ ಖರೀದಿ ಮಾಡುವಾಗ ಬೇಕಾಗಿರುವ ಪ್ರಮುಖ ದಾಖಲೆ ಯಾವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ನವೆಂಬರ್ ತಿಂಗಳಿನಲ್ಲಿ 15 ದಿನ ಬ್ಯಾಂಕ್ ರಜೆ, ಈಗಲೇ ಬ್ಯಾಂಕ್ ಕೆಲಸ ಇದ್ರೆ ಮುಗಿಸಿಕೊಳ್ಳಿ

ಮಾರಾಟ ಒಪ್ಪಂದದ ಪತ್ರ! (Property Sale deed)

Property Documentsಯಾವುದೇ ಒಂದು ಆಸ್ತಿ ಖರೀದಿ ಮಾಡುವುದಾದರೂ ನಿಮ್ಮ ಬಳಿ ಮಾರಾಟ ಒಪ್ಪಂದದ ಪತ್ರ ಇರಲೇ ಬೇಕು, ಈ ಒಂದು ದಾಖಲೆ ಇದ್ರೆ ಆ ದಾಖಲೆಯಲ್ಲಿ, ನೀವು ಖರೀದಿ ಮಾಡಲು ಹೊರಟಿರುವ ಜಮೀನಿನ ಸಂಪೂರ್ಣ ವಿವರ (details about land) ಅಡಕವಾಗಿರುತ್ತದೆ.

ಜಮೀನಿನ ಉದ್ದ ಅಗಲ, ಅದರ ಬೆಲೆ, ಜಮೀನಿನ ಸ್ಥಳ, ಬ್ಯಾಂಕ್ ಮಾಹಿತಿಗಳು, ಖರೀದಿಸಿದ ರೀತಿ.. ಹೀಗೆ ಪ್ರತಿಯೊಂದು ಮಾಹಿತಿಯೂ ಕೂಡ ಒಪ್ಪಂದ ಪ್ರಮಾಣ ಪತ್ರದಲ್ಲಿ ಇರುತ್ತದೆ. ನೀವು ಬ್ಯಾಂಕ್ನಿಂದ ಸಾಲ (bank loan) ತೆಗೆದುಕೊಳ್ಳುವುದಿದ್ದರೂ ಕೂಡ ಈ ಮಾರಾಟ ಒಪ್ಪಂದ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬೇಕಾಗುತ್ತದೆ.

ಮಹಿಳೆಯರು ವ್ಯಾಪಾರ ಮಾಡಿಕೊಳ್ಳಲು ಸಿಗಲಿದೆ 10 ಲಕ್ಷ! ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಿ

ಮದರ್ ಡೀಡ್! (Mother deed)

ಆಸ್ತಿ ಖರೀದಿ ಎನ್ನುವ ವಿಚಾರಕ್ಕೆ ಬಂದಾಗ ನಿಮ್ಮ ಬಳಿ ಮದರ್ ಡೀಡ್ ಇರಲೇಬೇಕು. ಅಂದರೆ ನೀವು ಯಾರಿಂದ ಜಮೀನು ಅಥವಾ ಆಸ್ತಿ ಖರೀದಿ ಮಾಡುತ್ತೀರಿ ಎಂಬುದರ ಬಗ್ಗೆ ಇರುವ ದಾಖಲೆ ಇದಾಗಿದೆ. ನೀವು ಬ್ಯಾಂಕ್ ನಲ್ಲಿ ಸಾಲಕ್ಕೆ (Bank Loan Application) ಅರ್ಜಿ ಸಲ್ಲಿಸಿದರೆ ಈ ದಾಖಲೆಯನ್ನು ಪ್ರಮುಖವಾಗಿ ಕೊಡಬೇಕಾಗುತ್ತದೆ.

ಎನ್ಕಂಬರೆನ್ಸ್ /ಹೊರೆಯ ಪ್ರಮಾಣ ಪತ್ರ (Encumbrance Certificate)

ಆಸ್ತಿಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳ ಬಗ್ಗೆ ಇದರಲ್ಲಿ ಮಾಹಿತಿ ಇರುತ್ತದೆ. ನೀವು ಖರೀದಿಸುತ್ತಿರುವ ಆಸ್ತಿ ಎಲ್ಲಾ ಅಡಚಣೆಗಳಿಂದ ಹಾಗೂ ಸಾಲದಿಂದ ಮುಕ್ತವಾಗಿದೆ ಎನ್ನುವ ಮಾಹಿತಿಯನ್ನು ಒಳಗೊಂಡಿರುತ್ತದೆ.

ಇದು ಅಷ್ಟೇ ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳುವಾಗ ಈ ಒಂದು ಪ್ರಮಾಣ ಪತ್ರವನ್ನು ಪ್ರಮುಖವಾಗಿ ಬ್ಯಾಂಕಿಗೆ ದಾಖಲೆಯಾಗಿ ನೀಡಬೇಕಾಗುತ್ತದೆ. ಹಾಗಾಗಿ ಮೇಲಿನ ಮೂರು ಪ್ರಮುಖ ದಾಖಲೆಗಳು ಆಸ್ತಿ ಖರೀದಿ ಮಾಡುವ ಸಮಯದಲ್ಲಿ ನಿಮ್ಮ ಬಳಿ ಇರಬೇಕು

20 ವರ್ಷಗಳ ಹಿಂದೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ನಿಜಕ್ಕೂ ನೀವು ನಂಬೋದೇ ಇಲ್ಲ

ಈ ದಾಖಲೆಗಳು ಸರಿಯಾಗಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಂಡು ನಂತರ ಆಸ್ತಿ ಖರೀದಿ ಮಾಡಿ. ಹಾಗೂ ಆಸ್ತಿ ಖರೀದಿ ಮಾಡುವುದಕ್ಕೆ ಈ ದಾಖಲೆಗಳನ್ನು ಬ್ಯಾಂಕಿಗೆ ಪ್ರಮುಖವಾಗಿ ಸಲ್ಲಿಸಲೇಬೇಕು, ಹಾಗಾಗಿ ಯಾವುದೇ ಆಸ್ತಿ ಖರೀದಿ ಮಾಡುವಾಗ ಈ ಮೂರು ಪ್ರಮಾಣ ಪತ್ರಗಳು ಕೂಡ ನಿಮ್ಮ ಬಳಿ ಇದೆಯೋ ಇಲ್ಲವೋ ಎಂಬುದನ್ನು ಮರು ಪರಿಶೀಲನೆ ಮಾಡಿಕೊಳ್ಳಿ.

these documents are mandatory for property purchase, Here is the Details

Related Stories