ಗಂಡ ಹೆಂಡತಿ ಇಬ್ಬರಿಗೂ 10,000 ಸಿಗುವ ಪೋಸ್ಟ್ ಆಫೀಸ್ ಯೋಜನೆ ಇದು! ಅರ್ಜಿ ಸಲ್ಲಿಸಿ

Story Highlights

ಗಂಡ ಹೆಂಡತಿ ಇಬ್ಬರೂ ಪ್ರತ್ಯೇಕ ಖಾತೆಯನ್ನು ತೆರೆದು ಮಾಸಿಕ ಪಿಂಚಣಿ (Monthly Pension) ಹಣ ಬರುವಂತೆ ಮಾಡಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಜನರು ಸುರಕ್ಷಿತ ಹೂಡಿಕೆ (Investment ) ಮಾಡಲು ಬಯಸುತ್ತಾರೆ. ಹೀಗಾಗಿ ಹೆಚ್ಚು ಆದಾಯವನ್ನು ತಂದು ಕೊಡುವಂತಹ ಹಾಗೂ ಸುರಕ್ಷಿತ ಯೋಜನೆಯು ಆಗಿರುವಂತಹ ಕೆಲವು ಪ್ರಮುಖ ಉಳಿತಾಯ ಯೋಜನೆಗಳನ್ನು (Savings Scheme) ಸರ್ಕಾರ ಪರಿಚಯಿಸಿದೆ.

ಸರ್ಕಾರ ಬೆಂಬಲಿತ ಅಂಚೆ ಕಚೇರಿಯಲ್ಲಿ (Post Office Scheme) ಇಂತಹ ಯೋಜನೆಗಳು ಲಭ್ಯ ಇದ್ದು ನೀವು ಅಲ್ಪಾವಧಿಯ ಹೂಡಿಕೆಯಿಂದ ಹಿಡಿದು ದೀರ್ಘಾವಧಿಯ ಹೂಡಿಕೆಯ ವರೆಗೆ ಇಲ್ಲಿ ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯಬಹುದು. ಕೆಲವು ಯೋಜನೆಗಳಲ್ಲಿ ಹಣವನ್ನು ಬಹಳ ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಮಾಡಿಕೊಳ್ಳಬಹುದು.

ಇನ್ನು ಅಂಚೆ ಕಚೇರಿಯ ಈ ಒಂದು ಸ್ಕೀಮ್ ನಲ್ಲಿ ನೀವು ಹೂಡಿಕೆ ಮಾಡಲು ಆರಂಭಿಸಿದರೆ ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು 10 ಸಾವಿರ ರೂಪಾಯಿ ಹಣ ಬರುವಂತೆ ಮಾಡಿಕೊಳ್ಳಬಹುದು. ಗಂಡ ಹೆಂಡತಿ ಇಬ್ಬರೂ ಪ್ರತ್ಯೇಕ ಖಾತೆಯನ್ನು ತೆರೆದು ಮಾಸಿಕ ಪಿಂಚಣಿ (Monthly Pension) ಹಣ ಬರುವಂತೆ ಮಾಡಿಕೊಳ್ಳಬಹುದು.

ಈ ಯೋಜನೆಯಲ್ಲಿ ನೀವು 3 ಲಕ್ಷ ಹಣ ಇಟ್ರೆ 6 ಲಕ್ಷ ರೂಪಾಯಿ ನಿಮ್ಮ ಕೈ ಸೇರಲಿದೆ

ಮಾಸಿಕ ಆದಾಯ ಯೋಜನೆ! (Monthly income scheme)

ಖಚಿತವಾದ ಮತ್ತು ಸುರಕ್ಷಿತವಾದ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯನ್ನು ಆಯ್ದುಕೊಳ್ಳಬಹುದು. ಏಪ್ರಿಲ್ 1, 2023 ರಿಂದ ಬಡ್ಡಿ ದರವನ್ನು ಹೆಚ್ಚಿಸಲಾಗಿದ್ದು, ಈ ಯೋಜನೆಯಲ್ಲಿ ಗಂಡ ಹೆಂಡತಿ ಒಂಟಿಯಾಗಿ ಅಥವಾ ಜಂಟಿಯಾಗಿ ಖಾತೆ ತೆರೆಯಬಹುದು.

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯ ಪ್ರಯೋಜನ!

ಠೇವಣಿ ಮಾಡಿದ ದಿನಾಂಕದಿಂದ ಒಂದು ವರ್ಷದ ಬಳಿಕ ಹೂಡಿಕೆ ಹಿಂಪಡೆಯಲು ಅವಕಾಶವಿದೆ. ಆದರೆ ಒಂದರಿಂದ ಮೂರು ವರ್ಷಗಳ ಅವಧಿಯ ನಡುವೆ ಹೂಡಿಕೆ ಹಿಂಪಡೆಯಲು ಬಯಸಿದರೆ 2% ನಷ್ಟು ಶುಲ್ಕ ವಿಧಿಸಲಾಗುತ್ತದೆ ಅಷ್ಟು ಹಣವನ್ನು ಕಡಿತಗೊಳಿಸಿ ಉಳಿದ ಹಣವನ್ನು ಹಿಂತಿರುಗಿಸಲಾಗುವುದು. ಅಕಾಲಿಕವಾಗಿ ಖಾತೆ ಮುಚ್ಚಿದರೆ ಶೇಕಡವಾರು ಶುಲ್ಕ ಕಡತಗೊಳಿಸಲಾಗುವುದು.

ಕುರಿ, ಕೋಳಿ ಸಾಕಾಣಿಕೆಗೆ ಸರ್ಕಾರದ ಸಹಾಯಧನ! ಕೈತುಂಬ ಹಣ ಸಂಪಾದನೆ ಮಾಡಿ

Post Office Schemeಅತ್ಯುತ್ತಮ ಬಡ್ಡಿ ದರ!

ಜುಲೈ 1, 2023 ರಿಂದ ಬಡ್ಡಿ ದರ ಹೆಚ್ಚಿಸಲಾಗಿದ್ದು, ಈಗ ಮಾಸಿಕ ಉಳಿತಾಯ ಯೋಜನೆಗೆ 7.1% ಬಡ್ಡಿ ದರವನ್ನು ಪಡೆಯಬಹುದು. ಐದು ವರ್ಷಗಳ ಮೆಚುರಿಟಿ ಅವಧಿ ಹೊಂದಿರುವ ಮಾಸಿಕ ಉಳಿತಾಯ ಯೋಜನೆಯಲ್ಲಿ ಸಾವಿರ ರೂಪಾಯಿಗಳಿಂದ ಹೂಡಿಕೆ ಆರಂಭಿಸಬಹುದು.

ಈ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಬಿಗ್ ಅಪ್ಡೇಟ್! ಬಂಪರ್ ಕೊಡುಗೆ

ಎಷ್ಟು ಹೂಡಿಕೆ ಮಾಡಬಹುದು ಗೊತ್ತಾ?

ಬಡ್ಡಿ ದರವನ್ನು ಮಾತ್ರವಲ್ಲದೆ ಹೂಡಿಕೆ ಮೊತ್ತವನ್ನು ಕೂಡ ಸರ್ಕಾರ ಹೆಚ್ಚಿಸಿದೆ ಹಾಗಾಗಿ ಒಂಟಿ ಖಾತೆಯಲ್ಲಿ ಒಂಬತ್ತು ಲಕ್ಷದವರೆಗೆ ಹಾಗೂ ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು.

9,000 ಹೂಡಿಕೆ ಮಾಡಿದರೆ ಮೆಚುರಿಟಿ ಅವಧಿಯ ನಂತರ ಪ್ರತಿ ತಿಂಗಳು 5,550ಗಳನ್ನು ಪಡೆದುಕೊಳ್ಳಬಹುದು. ಅದೇ ಜಂಟಿ ಖಾತೆಯ ಹೂಡಿಕೆ ಆಗಿದ್ದರೆ 11,110 ರೂಪಾಯಿಗಳನ್ನು ಆದಾಯವಾಗಿ ಪಡೆಯಬಹುದು. ಉಳಿತಾಯ ಮಾಡುವುದಕ್ಕೆ ಅತ್ಯುತ್ತಮ ಯೋಜನೆ ಇದಾಗಿದ್ದು ಈಗಲೇ ಹೂಡಿಕೆ ಆರಂಭಿಸಿ.

ಸ್ವಂತ ಬಿಸಿನೆಸ್ ಮಾಡೋ ಮಹಿಳೆಯರಿಗೆ ಸಿಗುತ್ತೆ 2.5 ಲಕ್ಷ ಸಾಲ ಸೌಲಭ್ಯ! ಅಪ್ಲೈ ಮಾಡಿ

This is a post office scheme where both husband and wife get 10,000

Related Stories