ಇನ್ಯಾರದ್ದೋ ಹಣ ತಪ್ಪಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬಂದ್ರೆ ಏನ್ ಮಾಡಬೇಕು ಗೊತ್ತಾ? ಮಹತ್ವದ ಮಾಹಿತಿ
ಇನ್ಯಾರದ್ದೋ ಹಣ ನಿಮ್ಮ ಅಕೌಂಟ್ ಗೆ ಬಂದರೆ ಏನು ಮಾಡಬೇಕು? ಅದನ್ನು ಹಾಗೆ ಇಟ್ಟುಕೊಳ್ಳಬೇಕಾ? ಅಥವಾ ಸೇರಬೇಕಾದವರಿಗೆ ಹಣವನ್ನು ಸೇರಿಸುವುದು ಹೇಗೆ? ಇಂದು ಮಾಹಿತಿ ತಿಳಿಯೋಣ.
ಹಣಕಾಸು ಚಟುವಟಿಕೆಯ ವಿಚಾರ ಎಂದು ಬಂದಾಗ ಯುಪಿಐ ಸೇವೆಗಳು (UPI Payments) ಹೆಚ್ಚಿನ ಬಳಕೆಯಲ್ಲಿ ಇದ್ದರೂ ಕೂಡ, ಬ್ಯಾಂಕ್ ವ್ಯವಹಾರಗಳು (Banking) ಸಹ ಅದೇ ರೀತಿ ನಡೆಯುತ್ತದೆ. ಆದರೆ ಬ್ಯಾಂಕ್ ಗೆ ಹೋಗಿ ಒಬ್ಬ ವ್ಯಕ್ತಿಗೆ ಹಣ ವರ್ಗಾವಣೆ ಮಾಡಬೇಕು ಎಂದುಕೊಂಡಾಗ, ಅವರ ಅಕೌಂಟ್ ನಂಬರ್ ಅನ್ನು ಬಹಳ ಹುಷಾರಾಗಿ ನೋಡಿಕೊಂಡು ಹಣ ವರ್ಗಾವಣೆ ಮಾಡಬೇಕು. ಒಂದೇ ಒಂದು ಅಂಕಿ ಹೆಚ್ಚು ಕಡಿಮೆ ಆದರೂ ಕೂಡ ಬೇರೆಯವರ ಅಕೌಂಟ್ ಗೆ (Bank Account) ಹಣ ಹೋಗುತ್ತದೆ.
ಹೌದು, ಇಂಥ ಘಟನೆಗಳು ಸಾಕಷ್ಟು ನಡೆದಿದೆ ಕೂಡ. ಹಾಗೆಯೇ ಅರ್ಥಿಕವಾಗಿ ಕಷ್ಟದಲ್ಲಿರುವ ನಮ್ಮ ಮನಸ್ಥಿತಿ ಕೂಡ ಅದೇ ರೀತಿ ಇರುತ್ತದೆ. ಯಾರದ್ದಾದರೂ ದಿಢೀರ್ ಎಂದು ಬೇರೆ ಅಕೌಂಟ್ ಇಂದ ನಮ್ಮ ಅಕೌಂಟ್ ಗೆ ಹಣ ಬರಲಿ ಎಂದುಕೊಳ್ಳುತ್ತೇವೆ.
ಸ್ಟೇಟ್ ಬ್ಯಾಂಕ್ ಎಟಿಎಂ ಫ್ರಾಂಚೈಸಿ ಶುರು ಮಾಡಿ ತಿಂಗಳಿಗೆ 60 ಸಾವಿರ, ವರ್ಷಕ್ಕೆ 7.20 ಲಕ್ಷ ಹಣ ಗಳಿಸಿ!
ಒಂದು ವೇಳೆ ಅಚಾನಕ್ ಆಗಿ ಅದೇ ಥರ ಇನ್ಯಾರದ್ದೋ ಹಣ ನಿಮ್ಮ ಅಕೌಂಟ್ ಗೆ ಬಂದರೆ ಏನು ಮಾಡಬೇಕು? ಅದನ್ನು ಹಾಗೆ ಇಟ್ಟುಕೊಳ್ಳಬೇಕಾ? ಅಥವಾ ಸೇರಬೇಕಾದವರಿಗೆ ಹಣವನ್ನು ಸೇರಿಸುವುದು ಹೇಗೆ? ಇಂದು ಮಾಹಿತಿ ತಿಳಿಯೋಣ..
ತಕ್ಷಣವೇ ಈ ಕೆಲಸ ಮಾಡಿ:
ಒಂದು ವೇಳೆ ದಿಢೀರ್ ಎಂದು ಯಾರಿಗೋ ಹೋಗಬೇಕಾದ ಹಣ ನಿಮ್ಮ ಖಾತೆಗೆ ಬಂದಿದೆ ಎಂದರೆ, ಆಗ ನೀವು ತಕ್ಷಣಕ್ಕೆ ಖುಷಿ ಪಟ್ಟು, ಆ ಹಣ ನೀವೇ ಇಟ್ಟುಕೊಳ್ಳಬೇಕು ಎಂದು ಬಯಸುವುದು ಸಹಜ. ಆದರೆ ಆ ರೀತಿ ಮಾಡಬಾರದು, ಯಾರದ್ದೋ ಹಣ ನಿಮ್ಮ ಅಕೌಂಟ್ ಗೆ ಬಂದಿದೆ ಎಂದು ಗೊತ್ತಾದ ಬಳಿಕ ತಕ್ಷಣವೇ ನಿಮ್ಮ ಬ್ಯಾಂಕ್ ಗೆ ಮಾಹಿತಿ ನೀಡಿ, ಯಾವ ಖಾತೆ ನಂಬರ್ ಇಂದ, ಯಾವ ದಿನ, ಯಾವ ಸಮಯದಲ್ಲಿ ಹಣ ಬಂದಿದೆ ಎನ್ನುವ ಡೀಟೇಲ್ಸ್ ನೀಡಿದರೆ, ಬ್ಯಾಂಕ್ ಆ ಮಾಹಿತಿಯನ್ನು ಪಡೆದು, ಸೇರಬೇಕಾದ ವ್ಯಕ್ತಿಗೆ ಹಣ ಸೇರಿಸುವ ಕೆಲಸವನ್ನು ಮಾಡುತ್ತದೆ..
ಸ್ಟೇಟ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರೋ ಮೊಬೈಲ್ ನಂಬರ್ ಬದಲಿಸುವ ಸುಲಭ ಮಾರ್ಗ ಇಲ್ಲಿದೆ!
ಬ್ಯಾಂಕ್ ಗೆ ನೀವು ವಿಚಾರ ತಿಳಿಸಿ, ಅವರು ನಿಜವಾದ ವ್ಯಕ್ತಿಯನ್ನು ಪತ್ತೆ ಹಚ್ಚಿ, ಆ ವ್ಯಕ್ತಿಗೆ ಹಣ ತಲುಪಿಸುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಅಲ್ಲಿಯವರೆಗೂ ಇನ್ಯಾರಿಂದಲೋ ನಿಮ್ಮ ಅಕೌಂಟ್ ಗೆ ಬಂದಿರುವ ಹಣವನ್ನು ಯಾವುದೇ ಕಾರಣಕ್ಕೂ ನೀವು ಖರ್ಚು ಮಾಡಬೇಡಿ,
ಈ ರೀತಿ ಮಾಡಿದರೆ ನೀವು ಮತ್ತೆ ಹಣವನ್ನು ಮರುಪಾವತಿ (Re Payment) ಮಾಡಬೇಕಾಗುತ್ತದೆ. ಹಾಗಾಗಿ ಇನ್ನೊಬ್ಬರ ಹಣವನ್ನು ನಿಮ್ಮ ಸ್ವಂತ ಖರ್ಚಿಗೆ ಬಳಸಲು ಹೋಗಬೇಡಿ. ಹಣ ಯಾರದ್ದು, ಅವರಿಗೆ ಹೇಗೆ ತಲುಪುತ್ತದೆ ಎಂದು ಗೊತ್ತಾಗುವ ವರೆಗು ಸುಮ್ಮನೆ ಇರಿ..
ನಿಮ್ಮ ಸಿಲಿಂಡರ್‌ನಲ್ಲಿ ಇನ್ನು ಎಷ್ಟು ಗ್ಯಾಸ್ ಉಳಿದಿದೆ ಅಂತ ಚೆಕ್ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್
ಒಂದು ವೇಳೆ ದಿಢೀರ್ ಎಂದು ಇನ್ಯಾರದ್ದೋ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬಂದರೆ ಯಾವುದೇ ಕಾರಣಕ್ಕೂ ಅದನ್ನು ಬಳಸಬೇಡಿ. ಹಾಗೇನಾದರೂ ಮಾಡಿದರೆ, ನೀವು ಪೂರ್ತಿ ಹಣವನ್ನು ಭರಿಸಬೇಕಾಗಿರುವುದರ ಜೊತೆಗೆ, ನಿಮ್ಮ ಅಕೌಂಟ್ ಅನ್ನು ಬ್ಯಾಂಕ್ ನವರು ಫ್ರೀಜ್ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಥರದ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಅಂಥ ಸಮಯದಲ್ಲಿ ತಾಳ್ಮೆ ಇಂದ ವರ್ತಿಸಿ.
what to do if someone money Comes into your bank account by mistake