ನೀವು ನಂಬೋಲ್ಲ! ಈ ದೇಶಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹2 ರೂಪಾಯಿ ಮಾತ್ರ
ಇಂಧನ ಬೆಲೆ ಗಗನಕ್ಕೇರುತ್ತಿದ್ದರೂ, ವಿಶ್ವದ ಕೆಲವು ದೇಶಗಳಲ್ಲಿ ಪೆಟ್ರೋಲ್ ನೀರಿಗಿಂತಲೂ ಕಡಿಮೆ ದರದಲ್ಲಿ ಲಭ್ಯ. ವೆನಿಜುಲಾ, ಇರಾನ್ ಸೇರಿ ಈ 10 ದೇಶಗಳಲ್ಲಿ ಪೆಟ್ರೋಲ್ ದರ ಭಾರೀ ಕಡಿಮೆ!

- ವೆನಿಜುಲಾದಲ್ಲಿ ಪೆಟ್ರೋಲ್ ಲೀಟರ್ ಕೇವಲ ₹2.51 ರೂಪಾಯಿ
- ಇರಾನ್, ಅಲ್ಜೀರಿಯಾ, ಕುವೈತ್ ಸೇರಿ 10 ದೇಶಗಳಲ್ಲಿ ಪೆಟ್ರೋಲ್ ಅತ್ಯಂತ ಕಡಿಮೆ ದರದಲ್ಲಿ ಲಭ್ಯ.
- ಹಾಂಗ್‌ಕಾಂಗ್‌ನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹294.49 – ವಿಶ್ವದಲ್ಲೇ ಅತಿ ದುಬಾರಿ!
ನೀರಿಗಿಂತಲೂ ಕಡಿಮೆ ದರದಲ್ಲಿ ಪೆಟ್ರೋಲ್
ಇಂಧನ ಬೆಲೆಗಳ (Petrol and Diesel Price) ಕುರಿತು ನೀವು ಸದಾ ಆತಂಕದಲ್ಲಿದ್ದರೆ, ಈ ದೇಶಗಳ ಬಗ್ಗೆ ಕೇಳಿ ಆಶ್ಚರ್ಯಪಡಬಹುದು! ಹೌದು, ವಿಶ್ವದಲ್ಲಿ ಕೆಲವು ದೇಶಗಳಲ್ಲಂತೂ ನೀರಿಗಿಂತಲೂ ಕಡಿಮೆ ದರದಲ್ಲಿ ಪೆಟ್ರೋಲ್ ಲಭ್ಯ.
ವೆನಿಜುಲಾ (Venezuela) ಸೇರಿದಂತೆ ಹಲವು ದೇಶಗಳಲ್ಲಿ ಇಂಧನ ಬೆಲೆ ತಗ್ಗಿದ್ದು, ಅಲ್ಲಿನ ನಾಗರಿಕರು ಜೋಶ್‌ನಲ್ಲಿ ಲಕ್ಸುರಿ ಕಾರು (Luxury Car) ಖರೀದಿಸುತ್ತಿದ್ದಾರೆ. ಇನ್ನು ಕೆಲವು ದೇಶಗಳಲ್ಲಿ ಪೆಟ್ರೋಲ್‌ನ ಬೆಲೆ (Petrol Rate) ಹೇಗಿದೆ ಗೊತ್ತಾ?
ಇದನ್ನೂ ಓದಿ: ಬಿಗ್ ಅಲರ್ಟ್! ಮಾರ್ಚ್ 1ರಿಂದ ಹೊಸ ಹೊಸ ನಿಯಮಗಳು, ಮಹತ್ವದ ಬದಲಾವಣೆ
ವಿಶ್ವದ ಅಗ್ಗದ ಪೆಟ್ರೋಲ್ ಬೆಲೆ ಇವು!
ವೆನಿಜುಲಾ: ಇಲ್ಲಿಯ ಪೆಟ್ರೋಲ್ ದರ ನಿಜಕ್ಕೂ ಆಶ್ಚರ್ಯಪಡಿಸುತ್ತದೆ! ಇಲ್ಲಿ ಪೆಟ್ರೋಲ್ ಲೀಟರ್ ಕೇವಲ ₹2.51 ಮಾತ್ರ! ಇಂತಹ ಕಡಿಮೆ ದರದಿಂದ, ಕಾರು ಹೊಂದಿರುವ ಪ್ರತಿಯೊಬ್ಬರಿಗೂ ಇಲ್ಲಿ ನಿಜಕ್ಕೂ ಸ್ವರ್ಗವೇ ಸರಿ.
ಇರಾನ್ (Iran): ಪೆಟ್ರೋಲ್ ಬೆಲೆಯಲ್ಲಿ ಎರಡನೇ ಸ್ಥಾನದಲ್ಲಿರುವ ಇರಾನ್‌ನಲ್ಲಿ ಲೀಟರ್ ಕೇವಲ ₹24.54.
ಅಂಗೋಲಾ (Angola): ಈ ದೇಶದಲ್ಲಿ ಲೀಟರ್ ಪೆಟ್ರೋಲ್ ಬೆಲೆ ಕೇವಲ ₹26.16.
ಅಲ್ಜೀರಿಯಾ (Algeria): ಇಲ್ಲಿನ ಪೆಟ್ರೋಲ್ ದರ ₹28.47.
ಕುವೈತ್ (Kuwait): ಐಶಾರಾಮಿ ಜೀವನ ಶೈಲಿಗೆ ಹೆಸರುವಾಸಿಯಾದ ಕುವೈತ್‌ನಲ್ಲಿ ಪೆಟ್ರೋಲ್ ಲೀಟರ್ ₹29.25.
ಇದನ್ನೂ ಓದಿ: ಬ್ಯಾಂಕುಗಳೇ ಕರೆದು ಸಾಲ ಕೊಡುವ ಟ್ರಿಕ್ ಇದು, 5 ನಿಮಿಷಕ್ಕೆ ಲೋನ್ ಸಿಗುತ್ತೆ!
ಇಂಧನದ ದರ ಕಡಿಮೆಯಾದ ಇನ್ನಷ್ಟು ದೇಶಗಳು!
- ನೈಜೀರಿಯಾ (Nigeria) – ₹29.45
- ತುರ್ಕ್‌ಮೆನಿಸ್ತಾನ್ (Turkmenistan) – ₹29.50
- ಕಜಕಿಸ್ತಾನ್ (Kazakhstan) – ₹37.26
- ಇಥಿಯೋಪಿಯಾ (Ethiopia) – ₹38.00
- ಮಲೇಶಿಯಾ (Malaysia) – ₹39.80
ಇದನ್ನೂ ಓದಿ: ಕಿ.ಮೀ.ವರೆಗೆ ಜನರ ಕ್ಯೂ! 50 ಲಕ್ಷ ಹೋಮ್ ಲೋನ್ ಆಫರ್, EMI ಮೇಲೂ 2000 ಕಡಿತ
ಅತಿ ದುಬಾರಿ ಪೆಟ್ರೋಲ್ ಬೆಲೆಯುಳ್ಳ ದೇಶ ಯಾವುದು?
ಹಾಂಗ್‌ಕಾಂಗ್ (Hong Kong) – ಇಲ್ಲಿನ ಪೆಟ್ರೋಲ್ ಬೆಲೆ (Petrol Price) ಕೇಳಿದರೆ ನೀವು ಬೆಚ್ಚಿಬೀಳ್ತಿರಾ! ಇಲ್ಲಿ ಲೀಟರ್ ಪೆಟ್ರೋಲ್ ₹294.49! ಇದು ವಿಶ್ವದಲ್ಲೇ ಅತಿ ಹೆಚ್ಚು ದರ!
World Cheapest Petrol, Just 2 Per Liter in These Countries




