Poisonous Liquor: ಬಿಹಾರದ ಗಯಾದಲ್ಲಿ ನಕಲಿ ಮದ್ಯ ಸೇವಿಸಿ ಮೂವರು ಸಾವು, 8 ಮಂದಿ ಗಂಭೀರ

Poisonous Liquor: ಬಿಹಾರದ ಗಯಾದಲ್ಲಿ ನಕಲಿ ಮದ್ಯ ಸೇವಿಸಿ ಮೂವರು ಸಾವನ್ನಪ್ಪಿದ್ದಾರೆ. ಎಂಟು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ

ಗಯಾ: ಬಿಹಾರದ ಗಯಾದಲ್ಲಿ ನಕಲಿ ಮದ್ಯ ಸೇವಿಸಿ (Poisonous Liquor) ಮೂವರು ಸಾವನ್ನಪ್ಪಿದ್ದಾರೆ. ಎಂಟು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಎಎನ್‌ಎಂ ವೈದ್ಯಕೀಯ ಕಾಲೇಜು ವಿಭಾಗದ ಅಧೀಕ್ಷಕ ಪೈಕ್ ಅಗರ್ವಾಲ್ ಮಾತನಾಡಿ, ನಕಲಿ ಮದ್ಯ ಸೇವಿಸಿ ಮೂವರು ಸಾವನ್ನಪ್ಪಿದ್ದಾರೆ… ಪರಿಸ್ಥಿತಿ ಸಾಕಷ್ಟು ಗಂಭೀರವಾಗಿದೆ. ಇದೇ ವೇಳೆ ಎಂಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಮೆಥನಾಲ್ ವಿಷದಿಂದ ಬಳಲುತ್ತಿದ್ದಾರೆ ಎಂದರು.

ಅಸ್ವಸ್ಥರಾದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗಯಾ ಪೊಲೀಸ್ ಅಧಿಕಾರಿ ನರೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಸೋಮವಾರ ಮದುವೆ ಸಮಾರಂಭದಲ್ಲಿ ಮದ್ಯ ಸೇವಿಸಿದ್ದರು ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ. ಅದಾದ ನಂತರ ರಾತ್ರಿಯ ಹೊತ್ತಿಗೆ ಎಲ್ಲರಿಗೂ ವಾಂತಿ, ಹೊಟ್ಟೆನೋವು ಶುರುವಾಯಿತು. ಕೂಡಲೇ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಅಮರ್ ಪಾಸ್ವಾನ್ (26), ರಾಹುಲ್ ಕುಮಾರ್ (27) ಮತ್ತು ಅರ್ಜುನ್ ಪಾಸ್ವಾನ್ (43) ಎಂದು ಗುರುತಿಸಲಾಗಿದೆ. ಜಿಲ್ಲೆಯ ಅಮಾಸ್ ಪೊಲೀಸ್ ಠಾಣಾ ವ್ಯಾಪ್ತಿಯ ಪತ್ತಾರ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಂತ್ರಸ್ತರು ತೆರಳಿದ್ದು, ಅಲ್ಲಿ ಹಳ್ಳಿಗಾಡಿನ ಮದ್ಯ ಸೇವಿಸಿದ್ದಾರೆ.

ಮದನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖಿರಿವಾ ಗ್ರಾಮದಲ್ಲಿ ಸೋಮವಾರ ರಾತ್ರಿ ಮೂವರು ನಿಗೂಢವಾಗಿ ಸಾವನ್ನಪ್ಪಿದ್ದರೆ, ಶನಿವಾರ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಖಿರಿಯಾವ ಗ್ರಾಮದ ಶಿವ ಸಾ, ಶಂಭು ಠಾಕೂರ್, ಅನಿಲ್ ಶರ್ಮಾ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ರಾಣಿಗಂಜ್ ಗ್ರಾಮದ ನಿವಾಸಿಗಳಾಗಿದ್ದು, ಶನಿವಾರ ಮೃತಪಟ್ಟಿದ್ದಾರೆ.

3 people died after allegedly consuming spurious liquor in Gaya in Bihar

Follow us On

FaceBook Google News