ತಂದೆಯ ಸ್ನೇಹಿತನಿಂದಲೇ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ನಾಗ್ಪುರ: ತನ್ನ ಸ್ನೇಹಿತನ 6 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿರುವ ಘಟನೆಯಿಂದ ಕೋಪಗೊಂಡ ತಂದೆ ಆರೋಪಿಯನ್ನು ಚೆನ್ನಾಗಿ ಥಳಿಸಿದ್ದಾರೆ. ಸಂತ್ರಸ್ತೆಯ ತಾಯಿಯ ದೂರಿನ ಮೇರೆಗೆ ಪೊಲೀಸರು ತಾಲಿಬ್ ಕಮಲ್ ಖಾಲಿದ್ ಅನ್ಸಾರಿ (53) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಾಲಿಬ್ ಕೂಲಿ ಕೆಲಸ ಮಾಡುತ್ತಾನೆ. ಸಂತ್ರಸ್ತ ಬಾಲಕಿಯ ತಂದೆ ಕೂಡ ಕೂಲಿ ಕೆಲಸ ಮಾಡುತ್ತಾರೆ, ಇದರಿಂದ ಇಬ್ಬರಿಗೂ ಒಳ್ಳೆ ಸ್ನೇಹ ಇತ್ತು.
ಬಾಲಕಿಯ ಮನೆಗೆ ತಾಲಿಬ್ ಕೂಡ ಆಗಾಗ ಭೇಟಿ ನೀಡುತ್ತಿದ್ದ. ಶನಿವಾರ ರಾತ್ರಿ ತಾಲಿಬ್ ಸಂತ್ರಸ್ತೆಯ ಮನೆಗೆ ಬಂದು ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಾಲಕಿಗೆ ಚಿತ್ರಹಿಂಸೆ ನೀಡಿದ್ದಾನೆ. ಪೋಷಕರಿಗೆ ಏನಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ರಾತ್ರಿ 11 ಗಂಟೆ ಸುಮಾರಿಗೆ ಬಾಲಕಿ ತನ್ನ ಮನೆಗೆ ಮರಳಿದ್ದಾಳೆ. ಆದರೆ ಭಾನುವಾರ ಬೆಳಿಗ್ಗೆ, ತಾಯಿ ಬಾಲಕಿಯ ನಡವಳಿಕೆಯಲ್ಲಿ ಬದಲಾವಣೆಯನ್ನು ಗಮನಿಸಿದಳು.
ಮಗಳ ನೋವು ನೋಡಿ ತಾಯಿಗೆ ಅನುಮಾನ ಬಂತು. ಪ್ರಶ್ನಿಸಿದಾಗ, ನಡೆದ ಘಟನೆಯನ್ನು ಬಾಲಕಿ ವಿವರಿಸಿದ್ದಾಳೆ. ಮಗಳ ಮಾತು ಕೇಳಿ ತಂದೆ ತಾಲಿಬ್ ಮನೆಗೆ ನುಗ್ಗಿ ದೊಣ್ಣೆಗಳಿಂದ ಥಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಪಂಚಪಾವಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ತಾಲಿಬ್ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ತಾಲಿಬ್ ಈ ಹಿಂದೆಯೂ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಎನ್ನಲಾಗಿದೆ. 2015ರಲ್ಲೂ ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
6 year old girl raped



