ದುಡಿಮೆ ಹಣ ಕೇಳಿದ್ದಕ್ಕೆ ಕೈ ಕತ್ತರಿಸಿದ ಮಾಲಿಕ

ಭೋಪಾಲ್: ದುಡಿದ ದುಡಿಮೆ ಹಣ ಕೇಳಿದ್ದಕ್ಕೆ ಮಾಲಿಕನೊಬ್ಬ ಕೆಲಸಗಾರನ ಕೈ ಕತ್ತರಿಸಿದ್ದಾನೆ. ಹೌದು ಈ ದುರ್ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ದಲಿತ ಅಶೋಕ್ ಸಾಕೇತ್ ತನ್ನ ಕೂಲಿಯನ್ನು ನೀಡುವಂತೆ ತನ್ನ ಮಾಲೀಕ ಗಣೇಶ್ ಮಿಶ್ರಾಗೆ ಕೇಳಿದ್ದಾನೆ.

ಇದು ಇಬ್ಬರ ನಡುವಿನ ವೈಷಮ್ಯವನ್ನು ಹೆಚ್ಚಿಸಿದೆ. ಈ ವೇಳೆ ಮಿಶ್ರಾ, ಕೆಲವರೊಂದಿಗೆ ಸೇರಿ ಅಶೋಕ್ ಕೈ ಕತ್ತರಿಸಿದ್ದಾನೆ. ವಿಷಯ ತಿಳಿದ ಪೊಲೀಸರು ಅಲ್ಲಿಗೆ ಆಗಮಿಸಿ ಅಶೋಕ್ ನನ್ನು ಆಸ್ಪತ್ರೆಗೆ ಸಾಗಿಸಿದರು.

ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮಿಶ್ರಾ ಮತ್ತು ಆತನ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಕೇವಲ ತನ್ನ ದುಡಿಮೆಯ ಹಣ ಕೇಳಿದ್ದಕ್ಕೆ ಕೈ ಕತ್ತರಿಸಿದ ಮಾಲಿಕನ ಸುದ್ದಿ ಈಗ ಸಂಚಲನ ಮೂಡಿಸಿದೆ.

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ