ಕೋಲ್ಕತ್ತಾದಲ್ಲಿ ಮತ್ತೊಬ್ಬ ಮಾಡೆಲ್ ಸಾವು
ಕೋಲ್ಕತ್ತಾದಲ್ಲಿ ಮೂರು ದಿನಗಳಲ್ಲಿ ಮತ್ತೊಬ್ಬ ಮಾಡೆಲ್ ಸಾವು, ಎರಡನೇ ಘಟನೆ
ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಮತ್ತೊಬ್ಬ ಮಾಡೆಲ್ ಸಾವನ್ನಪ್ಪಿದ್ದಾರೆ. ಆಕೆ ಪಟೌಲಿ ಪ್ರದೇಶದ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ರೂಪದರ್ಶಿಯನ್ನು ಮಂಜುಷಾ ನಿಯೋಗಿ ಎಂದು ಗುರುತಿಸಲಾಗಿದೆ.
ಕಳೆದ ಮೂರು ದಿನಗಳಲ್ಲಿ ಕೋಲ್ಕತ್ತಾದಲ್ಲಿ ಇಬ್ಬರು ಮಾಡೆಲ್‌ಗಳು ಸಾವನ್ನಪ್ಪಿದ್ದಾರೆ. ಆದರೆ, ಆಕೆಯ ಸ್ನೇಹಿತೆ, ರೂಪದರ್ಶಿ ಬಿದಿಶಾ ಡಿ ಮಜುಂದಾರ್ ಎರಡು ದಿನಗಳ ಹಿಂದೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು.
ಸ್ನೇಹಿತೆಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಮಂಜುಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡುಂಡಮ್ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ವಧುವಿನ ಮೇಕಪ್ ಫೋಟೋ ಶೂಟ್ ಮಾಡುತ್ತಿದ್ದ ಮಜುಂದಾರ್ ಕೂಡ ನೇಣು ಹಾಕಿಕೊಂಡಿದ್ದಾರೆ. ಎರಡು ವಾರಗಳ ಹಿಂದೆ ಮತ್ತೋರ್ವ ಜನಪ್ರಿಯ ಕಿರುತೆರೆ ನಟಿ ಪಲ್ಲಬಿ ದೇವ್ ಕೂಡ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.
Another Model Found Dead In Kolkata Second Incident In Three Days