Deadly Selfie, ಸೆಲ್ಫಿಗಾಗಿ ರೈಲಿನ ಇಂಜಿನ್ ಮೇಲೆ ಹತ್ತಿದ ಯುವಕ, ವಿದ್ಯುತ್ ಸ್ಪರ್ಶದಿಂದ ಸಾವು

ಭೋಪಾಲ್: ಸೆಲ್ಫಿಗಾಗಿ ರೈಲಿನ ಇಂಜಿನ್ ಮೇಲೆ ಹತ್ತಿದ ಯುವಕನೊಬ್ಬ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾನೆ. ಮಧ್ಯಪ್ರದೇಶದ ಚತ್ತರ್‌ಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
16 ವರ್ಷದ ಸುಹೇಲ್ ಮನ್ಸೂರಿ ಗುರುವಾರ ಸ್ಥಳೀಯ ರೈಲು ನಿಲ್ದಾಣಕ್ಕೆ ಹೋಗಿದ್ದನು. ಅಲ್ಲಿ ನಿಂತಿದ್ದ ಇಂಜಿನ್ ಮೇಲೆ ಏರಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದನು… ಮೇಲೆ ಏರಿ ಮೊಬೈಲ್ ನಲ್ಲಿ ಸೆಲ್ಫಿ ತೆಗೆಯಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಮೇಲಿನ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ
ಏತನ್ಮಧ್ಯೆ, ಘಟನೆಗೆ ಮೃತನ ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟೇಷನ್ ಮಾಸ್ಟರ್ ಕಚೇರಿ ಮೇಲೆ ಕಲ್ಲು ತೂರಾಟ ನಡೆದಿದೆ. ಸ್ಟೇಷನ್ ಮಾಸ್ಟರ್ ಮೇಲೆ ಹಲ್ಲೆ ನಡೆಸಿ ಬ್ಯಾಗ್ ಹಾಗೂ ವಾಚ್ ಕಿತ್ತುಕೊಂಡಿದ್ದಾರೆ. ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ತಕ್ಷಣ ಸ್ಪಂದಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿತು.
ಯುವಕನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಆರ್‌ಪಿಎಫ್ ಇನ್ಸ್‌ಪೆಕ್ಟರ್ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ. ಯುವಕನ ಸಾವಿನೊಂದಿಗೆ ರೈಲ್ವೆ ಸ್ಟೇಷನ್ ಮಾಸ್ಟರ್ ಕಚೇರಿ ಮೇಲೆ ದಾಳಿ ನಡೆಸಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು.
A young man who climbed on a train engine for a selfie has died of an electric shock



