Crime News, ಪ್ರೀತಿಯ ಹೆಸರಲ್ಲಿ ನಂಬಿಸಿ, ವಾಟ್ಸಾಪ್ ನಲ್ಲಿ ಹರಿಬಿಟ್ಟ ಯುವತಿಯ ಅಶ್ಲೀಲ ದೃಶ್ಯ..
ಹುಬ್ಬಳ್ಳಿ : ಪ್ರೀತಿಯ ಹೆಸರಲ್ಲಿ ಯುವಕನೊಬ್ಬ ಯುವತಿಯನ್ನು ನಂಬಿಸಿ ವಾಟ್ಸಾಪ್ ನಲ್ಲಿ ಅಶ್ಲೀಲ ದೃಶ್ಯಗಳನ್ನು ಹಾಕಿ ಅಸಭ್ಯವಾಗಿ ವರ್ತಿಸಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಶಿರಡಿ ಮೂಲದ ಯುವಕ ಹುಬ್ಬಳ್ಳಿಯಲ್ಲಿ ನರ್ಸಿಂಗ್ ಓದುತ್ತಿದ್ದಾನೆ.
ಅವನು ತನ್ನ ಜೂನಿಯರ್ ವಿದ್ಯಾರ್ಥಿಯೊಂದಿಗೆ ಸಂಪರ್ಕವನ್ನು ಹೊಂದಿದ್ದನು ಮತ್ತು ಅವನು ಫೋನ್‌ನಲ್ಲಿ ಮಾತನಾಡುತ್ತ ಪ್ರೀತಿಸುತ್ತಿರುವುದಾಗಿ ನಂಬಿಸಿದನು. ನಂತರ ವಾಟ್ಸಾಪ್ ಮೂಲಕ ವಿಡಿಯೋ ಕರೆ ಮಾಡಿ ಆಕೆಯ ನಗ್ನ ದೃಶ್ಯಗಳನ್ನು ರೆಕಾರ್ಡ್ ಮಾಡಿದ್ದಾನೆ.
ಅವುಗಳನ್ನು ಎಡಿಟ್ ಮಾಡಿ ಫೋಟೋಗಳನ್ನು ಇದೇ ತಿಂಗಳ 11ರಂದು ವಾಟ್ಸಾಪ್ ನಲ್ಲಿ ಹರಿಬಿಟ್ಟಿದ್ದ. ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸಾಮಾಜಿಕ ಜಾಲತಾಣಗಳು ಎಷ್ಟು ಉಪಯೋಗವೋ ಅಷ್ಟೇ ಅನಾಹುತಕ್ಕೂ ದಾರಿ ಮಾಡಿಕೊಡುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಸಾಮಾನ್ಯವಾಗಿ ಇಂತಹ ಘಟನೆಗಳು ಇದೆ ಮೊದಲೇನಲ್ಲ… ಆದರೆ ಇಂತಹ ಘಟನೆಗಳನ್ನು ನೋಡಿ… ಕೇಳಿ ಮತ್ತೆ ಮತ್ತೆ ವಿದ್ಯಾವಂತ ಯುವತಿಯರೇ ಇಂತಹ ಘಟನೆಗೆ ಬಲಿಯಾಗುತ್ತಿರುವುದು ದುರ್ದೈವ…
ಸದ್ಯ ಘಟನೆ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.