11 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಅಕ್ಕನಿಂದಲೇ ಸಹಕಾರ !
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ, 11 ವರ್ಷದ ಬಾಲಕಿಯ ಮೇಲೆ ಹಿಂಸಾತ್ಮಕ ಲೈಂಗಿಕ ದೌರ್ಜನ್ಯ ನಡೆದಿದ್ದು.. ಅಕ್ಕನೇ ಇದಕ್ಕೆ ಸಹಕರಿಸಿದ್ದಾಳೆ ಎಂಬುದು ಆಶ್ಚರ್ಯ.
22 ವರ್ಷದ ಯುವಕ 11 ವರ್ಷದ ಬಾಲಕಿಯ ಮೇಲೆ ಅಮಾನುಷವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಾಲಕಿ ಕೋಮಾ ಸ್ಥಿತಿಗೆ ತಲುಪಿದ್ದಳು. ಬಾಲಕಿ ಮೃತಪಟ್ಟಿದ್ದಾಳೆ ಎಂದು ಭಾವಿಸಿದ ಆರೋಪಿಗಳು ಬಾಲಕಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಬಶೀರ್‌ಹತ್ ಉಪವಿಭಾಗದಲ್ಲಿ ಈ ಘಟನೆ ನಡೆದಿದೆ. ಮೀನಿನ ಹೊಂಡದ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯನ್ನು ಸ್ಥಳೀಯರು ಕಂಡು ಆಸ್ಪತ್ರೆಗೆ ಸಾಗಿಸಿದ್ದಾರೆ.
ಸಂತ್ರಸ್ತೆಯ ಸಂಬಂಧಿ ಅಕ್ಕನ ಬಾಯ್ ಫ್ರೆಂಡ್ ಈ ದುಷ್ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸ್ ಕಸ್ಟಡಿಗೆ ಸ್ಥಳಾಂತರಿಸಲಾಗಿದೆ.
ಸಂತ್ರಸ್ತ ಬಾಲಕಿಯನ್ನು ರಾತ್ರಿಯಿಡೀ ತನ್ನ ಬಳಿ ಬಿಟ್ಟು ಹೋಗುವಂತೆ ಆರೋಪಿ ತನ್ನ ಗೆಳತಿಗೆ ಮನವೊಲಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಿಯಕರನ ಮಾತಿನಂತೆ ಹುಡುಗಿ ತನ್ನ ತಂಗಿಯನ್ನು ಕರೆದುಕೊಂಡು ಆರೋಪಿಗಳ ಬಳಿ ಬಿಟ್ಟು ಮನೆಗೆ ಹೋಗಿದ್ದಳು. ಬಾಲಕಿ ಮನೆಗೆ ಬರದಿರುವ ಬಗ್ಗೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.



