ನಿಮ್ಮ ಸುಖ ನಿದ್ರೆಗೆ ಇಲ್ಲಿದೆ 5 ಸರಳ ಸಲಹೆಗಳು

5 Simple Tips To Sleep Well

ನಿಮ್ಮ ಸುಖ ನಿದ್ರೆಗೆ ಇಲ್ಲಿದೆ 5 ಸರಳ ಸಲಹೆಗಳು

ಇತ್ತೀಚಿನ ಅಧ್ಯಯನಗಳ ಪ್ರಕಾರ ನೀವು ನಿಮಗಾಗಿ ಮಾಡಬಹುದಾದ ಅತ್ಯುತ್ತಮ ವಿಷಯವೆಂದರೆ ಪ್ರತಿ ರಾತ್ರಿ 8+ ಗಂಟೆಗಳ ನಿದ್ದೆ ಪಡೆಯುವುದು.

ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುವ ಕೆಲವು ಸಲಹೆಗಳು

ಆದರೆ ನಮ್ಮ ಚಟುವಟಿಕೆ, ದೈನಂದಿನ ಜೀವನದ ಒತ್ತಡದೊಂದಿಗೆ ಸರಿಯಾದ ನಿದ್ರೆ ಪಡೆಯುವುದು ದೊಡ್ಡ ಸವಾಲು ಎಂದರೆ ಅಚ್ಚರಿಯೇನಲ್ಲ. ನೀವು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ ನೋಡಿ.

1.     ನಿದ್ರೆಗೂ ಮೊದಲ ಸಿದ್ಧತೆ 

ನಿದ್ರೆಗೂ ಮೊದಲು ನಿಮ್ಮ ಸಮಯವನ್ನು ಸರಿ ಮಾಡಿ ಕೊಳ್ಳಿ. ನಿಮ್ಮ ಸುಖ ನಿದ್ರೆಗೆ ಮೊದಲು ಒಂದು ಪುಸ್ತಕವನ್ನು ಓದಿ , ಇಲ್ಲವೇ ಅತಿ ಆಯಾಸಗೊಂಡಿದ್ದರೆ ಸ್ನಾನ ಮಾಡಿ. ಇದು ನಿಮ್ಮ ಆಯಾಸ ಮತ್ತು ಆಲೋಚನೆಗಳನ್ನು ಬದಿಗೊತ್ತಿ ಒಳ್ಳೆಯ ನಿದ್ದೆಗೆ ಸಕಾರಿಯಾಗುತ್ತದೆ.

ನಿಮ್ಮ ಮನಸ್ಸು ಮತ್ತು ದೇಹವು ಹಗುರವಾಗಲು ಅವಕಾಶ ನೀಡುವ ಏನಾದರೂ ಚಟುವಟಿಕೆ ಸುಖ ನಿದ್ರೆಗೆ ಸಹಾಯ ಮಾಡುತ್ತದೆ.

2.     ವಿದ್ಯುನ್ಮಾನ ಸಾಧನಗಳನ್ನು ಬಳಸಬೇಡಿ. 

ಹಾಸಿಗೆಗೆ ಹೋಗುವ 60-90 ನಿಮಿಷಗಳ ಮೊದಲು ಎಲ್ಲಾ ವಿದ್ಯುನ್ಮಾನ ಸಾಧನಗಳನ್ನು ಆಫ್ ಮಾಡಿ. ಎಲೆಕ್ಟ್ರಾನಿಕ್ ಸಾಧನಗಳಿಂದ ಅಥವಾ ಮೊಬೈಲ್ ನಿಂದ ಬರುವ ನೀಲಿ ಬೆಳಕು ವಾಸ್ತವವಾಗಿ ಮೆದುಳನ್ನು ನಿದ್ರೆ ಚಕ್ರಗಳನ್ನು ಅಡ್ಡಿಪಡಿಸುತ್ತದೆ.

ನಿಮ್ಮ ಬೆಡ್ ರೂಮ್ನಲ್ಲಿ ಟೆಲಿವಿಷನ್ ಅಥವಾ ನಿಮ್ಮ ಟ್ಯಾಬ್ಲೆಟ್ನಂತಹ ವಸ್ತುಗಳನ್ನು ಇಟ್ಟುಕೊಳ್ಳಬೇಡಿ, ಇದು ಅವುಗಳನ್ನು ಬಳಸುವಂತೆ ನಿಮ್ಮನ್ನು ಪ್ರಚೋದಿಸುತ್ತವೆ.

3.     ಕಾಫಿ ಅಥವಾ ಯಾವುದೇ ಶಕ್ತಿ ಪಾನೀಯ ಕುಡಿಯದಿರಿ.

ಮಲಗುವ ಮೊದಲು ಕಾಫಿ ಸೇವನೆ ಒಂದು ಗಂಟೆಗೂ ಹೆಚ್ಚು ಕಾಲ ನಿದ್ರೆ ಕಡಿಮೆ ಮಾಡಬಹುದು ಎಂದು ಸಂಶೋಧನೆ ತೋರಿಸುತ್ತದೆ.

ಬೆಳಿಗ್ಗೆ ಕಾಫಿಯನ್ನು ಆನಂದಿಸಿ ಆದರೆ ಮಧ್ಯಾಹ್ನ ಮತ್ತು ರಾತ್ರಿ ಕುಡಿಯುವುದನ್ನು ತಡೆಯಿರಿ. ಅದೇ ರೀತಿ ಯಾವುದೇ ಕೆಫೀನ್ ಮಾಡಿದ ಸೋಡಾಗಳು ಅಥವಾ ಶಕ್ತಿ ಪಾನೀಯಗಳ ಸೇವನೆ ಮಾಡಬೇಡಿ.

ಸಾಧ್ಯವಾದರೆ ಗಿಡಮೂಲಿಕೆ ಚಹಾವನ್ನು ಕುಡಿಯಿರಿ. ಇದು ಆಹ್ಲಾದಕರ ರುಚಿಯನ್ನು ಮಾತ್ರವಲ್ಲದೇ , ಅದರ ಆರಾಮದಾಯಕ ಮತ್ತು ವಿಶ್ರಾಂತಿ ಗುಣಲಕ್ಷಣಗಳು ನಿದ್ರೆಗೆ ಸಹಾಯ ಮಾಡುತ್ತದೆ.

4.     ಮಿತ ಆಹಾರ ಬಳಸಿ .

ಭಾರೀ ಊಟವು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ನಿಮ್ಮ ನಿದ್ರೆಯ ಮೇಲೆ ಪ್ರಭಾವ ಬೀರಬಹುದು. ಮಲಗುವ ಮುನ್ನ ಮಿತ ಆಹಾರ ಬಳಸಿ.

5.     ಮಿತಿ ದ್ರವ ಪದಾರ್ಥ ಬಳಸಿ.

ಹೆಚ್ಚಿನ ನೀರು , ನೀರಿನ ಅಂಶ ಇರುವ ಪದಾರ್ಥ ಬಳಸಿದರೆ , ಸ್ನಾನ ಗೃಹವನ್ನು ಬಳಸಲು ಮಧ್ಯರಾತ್ರಿಯಲ್ಲಿ ಎಚ್ಚರಗೊಂಡು ಕೆಲವೊಮ್ಮೆ ನಿದ್ರೆಗೆ ಮರಳಲು ಸಾಧ್ಯವಾಗುವುದಿಲ್ಲ. ಹಾಸಿಗೆಗೆ ಏರುವ ಮೊದಲು 90 ನಿಮಿಷಗಳ ಅವಧಿಯಲ್ಲಿ ಇದನ್ನು ತಪ್ಪಿಸಿ. ////

WebTitle : ನಿಮ್ಮ ಸುಖ ನಿದ್ರೆಗೆ ಇಲ್ಲಿದೆ 5 ಸರಳ ಸಲಹೆಗಳು-5 Simple Tips To Sleep Well

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Kannada  Health Tips  । Kannada Home Remedies