ಟೊಮೆಟೊದಲ್ಲಿ ವಿಟಮಿನ್-ಡಿ

ಟೊಮೆಟೊದಲ್ಲಿ ವಿಟಮಿನ್-ಸಿ ಇರೋದಲ್ವಾ, ಇದೇನಿದು ಹೊಸದಾಗಿ ವಿಟಮಿನ್ ಡಿ ಅನ್ನೋದು ನಿಮ್ಮ ಡೌಟ್ ಅಲ್ವಾ

ಟೊಮೆಟೊದಲ್ಲಿ ವಿಟಮಿನ್-ಸಿ ಇರೋದಲ್ವಾ, ಇದೇನಿದು ಹೊಸದಾಗಿ ವಿಟಮಿನ್ ಡಿ ಅನ್ನೋದು ನಿಮ್ಮ ಡೌಟ್ ಅಲ್ವಾ… ಹೌದು, ದೇಹವು ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಉಳಿಯುವುದರಿಂದ ಅಗತ್ಯವಾದ ವಿಟಮಿನ್-ಡಿ ಅನ್ನು ಉತ್ಪಾದಿಸುತ್ತದೆ. ವಿವಿಧ ಆಹಾರಗಳು ಸಹ ಈ ವಿಟಮಿನ್ ಅನ್ನು ಹೊಂದಿರುತ್ತವೆ.

ಆದರೆ, ಈಗಿನ ಜೀವನಶೈಲಿಯಿಂದಾಗಿ ಅನೇಕರಿಗೆ ವಿಟಮಿನ್-ಡಿ ಕೊರತೆ ಕಾಡುತ್ತಿದೆ. ಈ ದೋಷವು ಕ್ಯಾನ್ಸರ್, ಬುದ್ಧಿಮಾಂದ್ಯತೆ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಇದನ್ನು ಹೋಗಲಾಡಿಸಲು ಬ್ರಿಟನ್‌ನ ಜಾನ್ ಇನ್ಸ್ ಸೆಂಟರ್‌ನ ಸಂಶೋಧಕರು ಹೊಸ ರೀತಿಯ ಟೊಮೆಟೊವನ್ನು ಅಭಿವೃದ್ಧಿಪಡಿಸಿದ್ದಾರೆ.

ಟೊಮೆಟೊ ಎಲೆಗಳು ನೈಸರ್ಗಿಕವಾಗಿ ಪ್ರೊ-ವಿಟಮಿನ್-ಡಿ ಅನ್ನು ಹೊಂದಿರುತ್ತವೆ. ಆದಾಗ್ಯೂ ಇದು ವಿಟಮಿನ್-ಡಿ ಆಗಿ ಪರಿವರ್ತನೆಯಾಗುವುದಿಲ್ಲ. ಜೀನ್ ಎಡಿಟಿಂಗ್ ಕ್ರಿಸ್ಪರ್ ಕ್ಯಾಸ್9 ತಂತ್ರಜ್ಞಾನದ ಸಹಾಯದಿಂದ, ಸಂಶೋಧಕರು ಟೊಮೆಟೊದಲ್ಲಿ ವಿಟಮಿನ್-ಡಿ ಉತ್ಪಾದಿಸಲು ಸಮರ್ಥರಾಗಿದ್ದಾರೆ.

ಟೊಮೆಟೊದಲ್ಲಿ ವಿಟಮಿನ್-ಡಿ - Kannada News

Biofortified Tomatoes Provide A New Route To Vitamin D Sufficiency

Follow us On

FaceBook Google News

Read More News Today