ಕರಿಬೇವಿನ ಜ್ಯೂಸ್: ರಕ್ತದೊತ್ತಡವನ್ನು ಕಡಿಮೆ ಮಾಡಿ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ ಕರಿಬೇವಿನ ರಸ!

ಕರಿಬೇವಿನ ಜ್ಯೂಸ್ (Curry Juice): ಕರಿಬೇವಿನ ಎಲೆಗಳನ್ನು ಪ್ರಾಚೀನ ಕಾಲದಿಂದಲೂ ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಇದರಲ್ಲಿ ಹಲವಾರು ಔಷಧೀಯ ಗುಣಗಳಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಹೆಚ್ಚಿನ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದರೆ ತೂಕ ಇಳಿಕೆ ಸಮಸ್ಯೆಯಾಗಿಯೇ ಉಳಿದಿದೆ.
ಇದೇ ಸಮಸ್ಯೆ ಪ್ರಪಂಚದಾದ್ಯಂತ ಅನೇಕ ಜನರನ್ನು ಕಾಡುತ್ತಿದೆ. ಇದರ ಪರಿಣಾಮವಾಗಿ ಅನೇಕ ಜನರು ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವ ಮೂಲಕ ಈ ಸಮಸ್ಯೆಯನ್ನು ತೊಡೆದುಹಾಕಲು ನೀವು ಬಯಸಿದರೆ, ಕರಿಬೇವಿನ ಎಲೆಗಳು ನಿಮಗೆ ಉತ್ತಮ ಸಹಾಯ ಮಾಡಬಹುದು.
ಕರಿಬೇವಿನ ಎಲೆಗಳು ಉತ್ತಮ ಪರಿಮಳವನ್ನು ಹೊಂದಿರುತ್ತವೆ. ಕರಿಬೇವಿನ ಎಲೆಗಳನ್ನು ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಭಕ್ಷ್ಯಗಳ ರುಚಿಯನ್ನು ಹೆಚ್ಚಿಸಲು ಕರಿಬೇವಿನ ಎಲೆಗಳು ಒಳ್ಳೆಯದು. ಕರಿಬೇವಿನ ಸೊಪ್ಪಿನಿಂದ ದೇಹದಲ್ಲಿನ ಅನೇಕ ಅಸ್ವಸ್ಥತೆಗಳು ನಿವಾರಣೆಯಾಗುತ್ತವೆ.
ಈ ಸಮಸ್ಯೆಗಳಲ್ಲಿ ಬೊಜ್ಜು ಮುಖ್ಯವಾದುದು. ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಕರಿಬೇವಿನ ರಸವನ್ನು ಸೇವಿಸುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ. ದಿನವೂ ಕರಿಬೇವು ತಿಂದರೆ ಅದು ದೇಹವನ್ನು ನಿರ್ವಿಷಗೊಳಿಸುತ್ತದೆ.
Deep Sleep: ನಿದ್ರಾಹೀನತೆ ಸಮಸ್ಯೆಯೇ, ಗಾಢ ನಿದ್ರೆಗೆ ಸಹಾಯ ಮಾಡುವ ಮಸಾಲೆಗಳು ಇವು!
ಕರಿಬೇವಿನ ಸೊಪ್ಪಿನ ರಸವನ್ನು ಕುಡಿಯುವುದರಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ. ಸಮಯಕ್ಕೆ ಹಸಿವಾಗುದರ ಜೊತೆಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದರಿಂದ ಆರೋಗ್ಯವಾಗಿರಬಹುದು. ಕೊಬ್ಬನ್ನು ಸುಡುವಲ್ಲಿ ಕರಿಬೇವಿನ ಎಲೆಗಳು ಪ್ರಮುಖ ಪಾತ್ರವಹಿಸುತ್ತವೆ. ತೂಕ ಇಳಿಸಿಕೊಳ್ಳಲು ಬಯಸುವವರು ಕರಿಬೇವಿನ ರಸವನ್ನು ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು. ಈ ಕಾರಣದಿಂದಾಗಿ, ಪೋಷಕಾಂಶಗಳು ಮತ್ತು ಜೀವಸತ್ವಗಳು ರಕ್ತದಲ್ಲಿ ಸುಲಭವಾಗಿ ಹೀರಲ್ಪಡುತ್ತವೆ.
ಅದರಲ್ಲಿರುವ ಆಲ್ಕಲಾಯ್ಡ್‌ಗಳ ಸಹಾಯದಿಂದ ಲಿಪಿಡ್ ಮತ್ತು ಕೊಬ್ಬನ್ನು ಕರಗಿಸಬಹುದು. ಕರಿಬೇವಿನ ಎಲೆಗಳ ರಸವನ್ನು ಕುಡಿಯುವುದರಿಂದ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಬಹುದು. ಇದರೊಂದಿಗೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಬೆಳಗ್ಗೆ ನಾಲ್ಕು ಅಥವಾ ಮೂರು ಕರಿಬೇವಿನ ಎಲೆಗಳನ್ನು ಹಸಿಯಾಗಿ ತೊಳೆದು ಜಗಿಯುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.
Blood Sugar: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಆಯುರ್ವೇದ ಗಿಡಮೂಲಿಕೆಗಳು ಇವು!
ಹೀಗೆ ಮಾಡುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ಹೊರಹಾಕುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯಬಹುದು.
ಕರಿಬೇವಿನ ಎಲೆಗಳ ರಸವನ್ನು ತಯಾರಿಸುವುದು;
ರಸವನ್ನು ತಯಾರಿಸಲು, ಮೊದಲು ಕರಿಬೇವಿನ ಎಲೆಗಳನ್ನು ತೊಳೆದು ನೀರಿನಲ್ಲಿ ಕುದಿಸಿ. ಸ್ವಲ್ಪ ಸಮಯದ ನಂತರ ಈ ನೀರನ್ನು ಸೋಸಿ ಬೆಚ್ಚಗೆ ಕುಡಿಯಿರಿ. ಮಸಾಲೆಗೆ ಬೇಕಾದಲ್ಲಿ ನಿಂಬೆ ರಸ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ. ಕರಿಬೇವಿನ ರಸವನ್ನು ಮಿತವಾಗಿ ಮಾತ್ರ ತೆಗೆದುಕೊಳ್ಳಬೇಕು. ಇದನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
Curry Juice Melts Belly Fat, Know The Amazing Health Benefits of Curry Juice in Kannada







