Health Tips

ಮನೆಯಲ್ಲಿ ನೊಣಗಳ ಆರ್ಭಟಕ್ಕೆ ಬೇಸತ್ತಿದ್ದೀರಾ? ಈ ಟಿಪ್ಸ್ ಅನುಸರಿಸಿ ನೊಣಗಳು ಮತ್ತೆ ನಿಮ್ಮ ಮನೆ ಕಡೆ ತಿರುಗಿಯೂ ನೋಡೋಲ್ಲ

Home remedies For Flies : ಮನೆಯನ್ನು ಸ್ವಚ್ಛಗೊಳಿಸಿದ ನಂತರವೂ ಮಳೆಗಾಲದಲ್ಲಿ ನೊಣಗಳು (Fly) ಸುಳಿದಾಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಬದಲು, ಈ ಮನೆಮದ್ದುಗಳನ್ನು ಪ್ರಯತ್ನಿಸಿ.

ಮಳೆಗಾಲದಲ್ಲಿ (Rainy season) ಕೊಳೆ ಹೆಚ್ಚಾಗಿರುತ್ತದೆ. ರಸ್ತೆಯಲ್ಲಿ ಸಂಗ್ರಹವಾಗುವ ಕೆಸರು ಮತ್ತು ಮಳೆ ನೀರು ಅನೇಕ ರೋಗಗಳನ್ನು ತರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯನ್ನು ಸ್ವಚ್ಛಗೊಳಿಸುವುದು ಅವಶ್ಯಕ.

Home remedies For Get Rid Flies in Your House during the rainy season

ಡಾಕ್ಟರ್ ಹ್ಯಾಂಡ್ ರೈಟಿಂಗ್ ಯಾಕೆ ಅರ್ಥ ಆಗೋಲ್ಲ! ಅಷ್ಟಕ್ಕೂ ಅವರು ಯಾಕೆ ಗೀಚಿದಂತೆ ಬರೀತಾರೆ ಗೊತ್ತಾ? ಅದಕ್ಕೂ ಇದೆ ಕಾರಣ

ಆದರೆ ಮಳೆಗಾಲದಲ್ಲಿ ಸ್ವಚ್ಛಗೊಳಿಸಿದ ನಂತರವೂ ನೊಣಗಳು ಅನೇಕ ಬಾರಿ ಮನೆಗೆ ಪ್ರವೇಶಿಸುತ್ತವೆ. ಏನೆಲ್ಲಾ ಸರ್ಕಸ್ ಮಾಡಿದರು ಅವುಗಳನ್ನು ಹೊರಹಾಕುವುದು ಕಷ್ಟವೇ ಸರಿ.. ಇಲ್ಲಿಂದ ಅಲ್ಲಿಗೆ ಸುಲಭವಾಗಿ ರೋಗಗಳನ್ನು ಹರಡುವ ಈ ನೊಣಗಳನ್ನು ಮನೆಯಿಂದ ಓಡಿಸುವುದು ಬಹಳ ಮುಖ್ಯ.

ಆದರೆ ಚಿಕ್ಕ ಮಕ್ಕಳಿರುವ ಅನೇಕ ಮನೆಗಳಲ್ಲಿ ರಾಸಾಯನಿಕ ಉತ್ಪನ್ನಗಳನ್ನು ಬಳಸುವಂತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಮನೆಮದ್ದುಗಳ ಸಹಾಯದಿಂದ ನೀವು ನೊಣಗಳನ್ನು ತೊಡೆದುಹಾಕಬಹುದು. ಇದರಿಂದ ಮನೆಯಲ್ಲಿ ರೋಗಗಳ ಅಪಾಯ ಇರುವುದಿಲ್ಲ.

ನಿಮಗಿದು ಗೊತ್ತೇ? ಎಂದಿಗೂ ಆತುರದಲ್ಲಿ ಊಟ ಮಾಡಬೇಡಿ! ತುಂಬಾ ವೇಗವಾಗಿ ಊಟ ಮಾಡೋದ್ರಿಂದ ಏನೆಲ್ಲಾ ಸಮಸ್ಯೆ ಗೊತ್ತ?

Get Rid of Flies at Home - Easy Tipsಬೇವಿನ ಎಲೆ ಮತ್ತು ಕರ್ಪೂರ

ಮನೆಯ ಮೂಲೆಯಲ್ಲಿ ಹೆಚ್ಚು ನೊಣಗಳು ಕಂಡು ಬಂದಲ್ಲಿ ಕರ್ಪೂರ ಮತ್ತು ಬೇವಿನ ಎಲೆಗಳನ್ನು ಬೆರೆಸಿ ಸುಟ್ಟು ಹಾಕಿ. ಇದರ ಬಲವಾದ ವಾಸನೆಯು ನೊಣಗಳು ಮತ್ತು ಸಣ್ಣ ಕೀಟಗಳು ಓಡಿಹೋಗುವಂತೆ ಮಾಡುತ್ತದೆ.

ತುಳಸಿಯ ಒಣ ಎಲೆಗಳು

ದೀನಾ ಮತ್ತು ತುಳಸಿಯ ಒಣ ಎಲೆಗಳನ್ನು ಬೆರೆಸಿ ಪುಡಿ ಮಾಡಿ. ನೀವು ಬಯಸಿದರೆ, ನೀವು ತಾಜಾ ಎಲೆಗಳನ್ನು ಬಾಣಲೆಯಲ್ಲಿ ಒಣಗಿಸಿ ಪುಡಿ ಮಾಡಬಹುದು. ಈಗ ಇದರ ದ್ರಾವಣವನ್ನು ನೊಣಗಳು ಕಂಡು ಬರುವ ಜಾಗಕ್ಕೆ ಸಿಂಪಡಿಸಿ. ಇದು ಕೀಟನಾಶಕದಂತೆ ಕೆಲಸ ಮಾಡುತ್ತದೆ ಮತ್ತು ನೊಣಗಳನ್ನು ಓಡಿಸುತ್ತದೆ.

ಆಪಲ್ ಸೈಡರ್ ವಿನೆಗರ್‌

ಆಪಲ್ ಸೈಡರ್ ವಿನೆಗರ್‌ನಲ್ಲಿ ಲವಂಗದ ಪುಡಿಯನ್ನು ಬೆರೆಸಿ ನೊಣ ಟ್ರ್ಯಾಪ್ ಮಾಡಿ ಮತ್ತು ಹೆಚ್ಚು ನೊಣಗಳು ಕುಳಿತುಕೊಳ್ಳುವ ಸ್ಥಳಗಳಲ್ಲಿ ಸ್ಪ್ರೇ ಮಾಡಿ. ಅದನ್ನು ಅಲ್ಲಿ ಸಿಂಪಡಿಸಿ ನೋಡಿ ಇದು ನೊಣಗಳನ್ನು ಓಡಿಸಲು ಸಹಾಯ ಮಾಡುತ್ತದೆ.

Home remedies For Get Rid Flies in Your House during the rainy season

Our Whatsapp Channel is Live Now 👇

Whatsapp Channel

Related Stories