90 ವರ್ಷ ಹಳೆಯ ಬಿಲ್ ವೈರಲ್! ಸೈಕಲ್ ಬೆಲೆ ಆಗ ಕೇವಲ 18 ರೂಪಾಯಿ ಇತ್ತು
1934ರಲ್ಲಿ ಕೇವಲ 18 ರೂಪಾಯಿಗೆ ಸೈಕಲ್ ಸಿಗುತ್ತಿದ್ದ ಕಾಲವಿತ್ತು. ಕೊಲ್ಕತ್ತಾದ 90 ವರ್ಷ ಹಳೆಯ ಬಿಲ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ದಿನಗಳನ್ನು ನೆನೆಸಿಕೊಳ್ಳುತ್ತಿದ್ದಾರೆ ಜನರು.
- 1934ರಲ್ಲಿ ಸೈಕಲ್ ಬೆಲೆ ಕೇವಲ 18 ರೂಪಾಯಿ ಮಾತ್ರ.
- ಕೊಲ್ಕತ್ತಾದ ಕುಮುದ್ ಸೈಕಲ್ ವರ್ಕ್ಸ್‌ನ 90 ವರ್ಷ ಹಳೆಯ ಬಿಲ್ ವೈರಲ್.
- ಇಂದಿನ ಬೆಲೆಯೊಂದಿಗೆ ಹೋಲಿಕೆ ಮಾಡಿದಾಗ ಭಾರಿ ವ್ಯತ್ಯಾಸ ಸ್ಪಷ್ಟ.
Bicycle Bill Goes Viral : ಅಯ್ಯೋ! ಇಂತಹ ದಿನಗಳು ಮತ್ತೆ ಬರಬಹುದಾ?” ಅಂತ ಸಾಮಾಜಿಕ ಜಾಲತಾಣಗಳಲ್ಲಿ ಜನರು ಕಾತರದಿಂದ ಕೇಳುತ್ತಿದ್ದಾರೆ. ಕಾರಣವೇನೆಂದರೆ 90 ವರ್ಷ ಹಳೆಯ ಸೈಕಲ್ ಬಿಲ್ (Bicycle Bill) ಒಂದರ ಚಿತ್ರ ವೈರಲ್ ಆಗಿದೆ.
ಹೌದು, 1934ರಲ್ಲಿ ಕೇವಲ 18 ರೂಪಾಯಿಗೆ ಸೈಕಲ್ ಸಿಗುತ್ತಿತ್ತು ಅನ್ನೋದನ್ನು ತಿಳಿದು ಜನ ಆಶ್ಚರ್ಯಚಕಿತರಾಗುತ್ತಿದ್ದಾರೆ. ಇಂದಿನ ದಿನಗಳಲ್ಲಿ ಮಕ್ಕಳ ಸೈಕಲ್ ಕೂಡಾ ₹2000 ರೂಪಾಯಿಗೆ ಕಡಿಮೆ ಸಿಗೋದಿಲ್ಲ, ಹೀಗಿರುವಾಗ ಆ ದಿನಗಳು ಎಷ್ಟು ಸುಂದರ ಅಲ್ಲವೇ…
ಈ ಬಿಲ್ ಕೊಲ್ಕತ್ತಾದ ಕುಮುದ್ ಸೈಕಲ್ ವರ್ಕ್ಸ್ ಅಂಗಡಿಯದ್ದಾಗಿದೆ (cycle Shop) . ಬಿಲ್‌ನಲ್ಲಿ ಪೆನ್ಸಿಲ್ ಬಳಸಿ ಬರೆಯಲಾಗಿದೆ: “ಲೈಟ್ ಮತ್ತು ಗಂಟೆ ಹೊಂದಿರುವ ಕಡಿಮೆ ಬೆಲೆಯ ಸೈಕಲ್ – ನಂ.1933”. ಈ ಬಿಲ್ ದಿನಾಂಕ 7 ಜನವರಿ 1934. ಇದು ನಿಜವಾಗಿಯೂ ಸೈಕಲ್ ಜಮಾನದ ಇತಿಹಾಸವನ್ನು ಬಿಚ್ಚಿಡುತ್ತದೆ.
ಇದನ್ನೂ ಓದಿ: 19ನೇ ಕಂತಿನ ಪಿಎಂ ಕಿಸಾನ್ ಹಣ ಎಲ್ಲರಿಗೂ ಸಿಗೋದಿಲ್ಲ! ರೈತರಿಗೆ ಬಿಗ್ ಅಲರ್ಟ್
ಜನರ ಪ್ರತಿಕ್ರಿಯೆ ಹೇಗಿದೆ ಗೊತ್ತಾ?
ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಬಳೆಕೆದಾರರು: “ಅಯ್ಯಯ್ಯೋ, 1947ರಲ್ಲಿ ಸೇನೆಯ ಮುಖ್ಯಸ್ಥನಿಗೆ ಕೇವಲ ₹250 ವೇತನ ಇತ್ತಂತೆ. ಈಗ ಅದೆ ಸ್ಥಾನಕ್ಕೆ ಲಕ್ಷಾಂತರ ರೂ ವೇತನ! ಇಷ್ಟು ವ್ಯತ್ಯಾಸ ಹೇಗೆ ಸಾಧ್ಯ?” 1934ರಲ್ಲಿ 11.6 ಗ್ರಾಂ ಚಿನ್ನದ ಬೆಲೆಯೂ (Gold Rate) ₹5ಕ್ಕಿಂತ ಕಡಿಮೆ ಇತ್ತು ಎಂಬ ಸಂಗತಿ ಮತ್ತಷ್ಟು ಆಕರ್ಷಕ.
ಈಗಿನ ಬೆಲೆ ಎಷ್ಟು ಗೊತ್ತಾ?
ಈಗ ಒಂದು ಸಾಮಾನ್ಯ ಸೈಕಲ್ ಬೆಲೆ ₹4000 ರೂಪಾಯಿಯಿಂದ ಆರಂಭವಾಗುತ್ತದೆ. ಆದರೆ, ವಿಶ್ವದಲ್ಲಿಯೇ ಅತ್ಯಂತ ದುಬಾರಿ ಸೈಕಲ್‌ಗಳ ಬೆಲೆ ಕೇಳಿದರೆ ಶಾಕ್ ಆಗುತ್ತೀರಾ!
ಇದನ್ನೂ ಓದಿ: ಮೋದಿ ಸರ್ಕಾರದಿಂದ ತಿಂಗಳಿಗೆ ₹3,000 ಪಿಂಚಣಿ ಘೋಷಣೆ! ಬಂಪರ್ ಯೋಜನೆ
Just found a 90 yr old bicycle bill, just 18 Rs
I believe at that time 18 Rs is equivalent to 1800 Rs. Am I Right?#oldbill #Cycle #foundsomethingnew #heritage #olddays pic.twitter.com/Rs7XXcZYUz— Pushpit Mehrotra (@pushki3) November 29, 2022
ಉದಾಹರಣೆಗೆ:
‘ದಿ ಹೌಸ್ ಆಫ್ ಸಾಲಿಡ್ ಗೋಲ್ಡ್ 24K’ ಮೌಂಟನ್ ಬೈಕ್ ಬೆಲೆ ₹8.39 ಕೋಟಿ!
ಟ್ರೆಕ್ ಬಟರ್‌ಫ್ಲೈ ಮ್ಯಾಡೋನ್ ₹4 ಕೋಟಿ ಮತ್ತು ಕಾವ್ಸ್-ಟ್ರೆಕ್ ಮ್ಯಾಡೋನ್ ₹1.34 ಕೋಟಿ!
ಅಂತಹ ಕಾಲ ಮತ್ತೆ ಬರುತ್ತಾ?
ಈಗಿನ ನಮ್ಮ ಹಿರಿಕರು ಹೇಳುವಂತೆ, ಆ ದಿನಗಳಲ್ಲಿ ಸೈಕಲ್ ಇರುವುದೇ ದೊಡ್ಡ ಶ್ರೇಯಸ್ಸು, ಗೌರವ. ಮನೆಯಲ್ಲಿ ಸೈಕಲ್ ಇದ್ದರೆ, ಅದು ಗರ್ವದ ವಿಷಯವಾಗಿತ್ತು. ಆದರೆ ಈಗ? ಎಲೆಕ್ಟ್ರಿಕ್ ಬೈಕ್ (Electric Bike), ಕಾರುಗಳು (Cars) ಸಾಮಾನ್ಯ. ಕಾಲ ಬದಲಾಗಿದೆ, ಆದರೆ ಆ ದಿನಗಳ ನೆನಪು ಯಾವತ್ತೂ ವಿಶೇಷವೇ…. ಮರೆಯೋಕೆ ಆಗುತ್ತಾ
90-Year-Old Bicycle Bill Goes Viral
Our Whatsapp Channel is Live Now 👇