ಮದುವೆ ಆಗುವ ನವದಂಪತಿಗೆ ಹೊಸ ಕಾನೂನು! ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ
ಮದುವೆ ನೋಂದಣಿ (marriage registration) ಪಾಸ್ಪೋರ್ಟ್ (Passport) ಪಡೆದುಕೊಳ್ಳುವುದಕ್ಕೆ ಬ್ಯಾಂಕುಗಳಲ್ಲಿ ಜಂಟಿ ಖಾತೆ (Bank Account) ತೆರೆಯುವುದಕ್ಕೆ ಮ್ಯಾರೇಜ್ ಸರ್ಟಿಫಿಕೇಟ್ (marriage certificate) ಬಹಳ ಅಗತ್ಯವಾಗಿರುತ್ತದೆ.
ಮದುವೆ ನೋಂದಣಿ (marriage registration) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ, ಪಾಸ್ಪೋರ್ಟ್ (Passport) ಪಡೆದುಕೊಳ್ಳುವುದಕ್ಕೆ ಬ್ಯಾಂಕುಗಳಲ್ಲಿ ಜಂಟಿ ಖಾತೆ (Bank Account) ತೆರೆಯುವುದಕ್ಕೆ ಮೊದಲಾದ ವ್ಯವಹಾರಗಳಿಗೆ ಗಂಡ ಹೆಂಡತಿ ಎನ್ನುವ ಪ್ರೂಫ್ ನೀಡುವಂತಹ ಮ್ಯಾರೇಜ್ ಸರ್ಟಿಫಿಕೇಟ್ (marriage certificate) ಬಹಳ ಅಗತ್ಯವಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಗಾಗಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸುವುದಕ್ಕೆ ಮತ್ತೊಂದು ಇಷ್ಟು ಕಡ್ಡಾಯ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ.
ಬಿಪಿಎಲ್ ಕಾರ್ಡ್ ಇಲ್ಲದೇ ಇದ್ರು ಸಿಗುತ್ತೆ ಉಚಿತ ಎಲ್ ಪಿ ಜಿ ಗ್ಯಾಸ್ ಕನೆಕ್ಷನ್! ಇಲ್ಲಿದೆ ಡಿಟೇಲ್ಸ್
ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ಬೇಕು ಮೂರು ಸಾಕ್ಷಿದಾರರು!
ಈ ಹಿಂದೆ ಮ್ಯಾರೇಜ್ ಸರ್ಟಿಫಿಕೇಟ್ ಅಥವಾ ಮದುವೆ ನೋಂದಣಿ ಮಾಡಿಕೊಳ್ಳಲು ವಧು ವರರು ಹಾಗೂ ಅವರ ಜೊತೆಗೆ ಒಬ್ಬ ಸಾಕ್ಷಿ ಸಹಿ ಮಾಡಿದರೆ ಸಾಕಿತ್ತು. ಆದರೆ ಈಗ ನಿಯಮ ಬದಲಾಗಿದೆ.
ಮದುವೆ ನೋಂದಣಿಗೆ ಒಬ್ಬ ಸಾಕ್ಷಿ ಇದ್ರೆ ಸಾಲುವುದಿಲ್ಲ, ಜೊತೆಗೆ ಇನ್ನೂ ಮೂವರು ಸಾಕ್ಷಿಯನ್ನು ನೋಂದಣಿ ಕಚೇರಿಯಲ್ಲಿ ಕೇಳಲಾಗುತ್ತದೆ. ಹಾಗಾಗಿ ಮೂವರು ವ್ಯಕ್ತಿಯ ಸಹಿ ಕೂಡ ಅಗತ್ಯ.
ಎಲ್ಲಾ ರೈತರ ಮನೆಗೆ ತಲುಪಲಿದೆ ಕಿಸಾನ್ ಕ್ರೆಡಿಟ್ ಕಾರ್ಡ್; ಸಿಗಲಿದೆ ಕೃಷಿಗೆ ಬೇಕಾದಷ್ಟು ಸಾಲ
ಬಯೋಮೆಟ್ರಿಕ್ ರಿಜಿಸ್ಟ್ರೇಷನ್! (Biometric registration)
ಅಷ್ಟೇ ಅಲ್ಲದೆ ಮದುವೆ ನೋಂದಣಿ ಮಾಡಿಸಿಕೊಳ್ಳುವುದು ಈ ಹಿಂದೆ ವಧು ಮತ್ತು ವರ ಮಾತ್ರ ಬಯೋಮೆಟ್ರಿಕ್ ಸಹಿ ಹಾಕಿದ್ದರೆ ಸಾಕಿತ್ತು. ಆದರೆ ಈಗ ಹೆಚ್ಚುವರಿಯಾಗಿ ಕೇಳಲಾಗುತ್ತಿರುವ ಮೂರು ಸಾಕ್ಷಿಗಳು ಕೂಡ ಬಯೋಮೆಟ್ರಿಕ್ ಮೂಲಕ ಸಹಿ ಮಾಡಿದರೆ ಮಾತ್ರ ಆ ಮದುವೆ ಮಾನ್ಯ ಎನಿಸಿಕೊಳ್ಳುತ್ತದೆ
ಆಧಾರ್ ಕಾರ್ಡ್ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆ ತಿಳಿಯೋದು ಹೇಗೆ? ಇಲ್ಲಿದೆ ಸುಲಭ ವಿಧಾನ
ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಸರಿಯಾಗಿ ಮ್ಯಾಚ್ ಆಗದೆ ಇದ್ದಲ್ಲಿ ಅಂತಹ ಮದುವೆ ರಿಜಿಸ್ಟರ್ಡ್ ಆಗಿರುವುದಿಲ್ಲ. ಮದುವೆ ಮಾಡಿಕೊಂಡು ಸುಖವಾಗಿ ಬದುಕಬೇಕು ಎಂದುಕೊಳ್ಳುವವರು ನೀವು ಯಾರನ್ನು ಹೆಚ್ಚಾಗಿ ನಂಬುತ್ತೀರೋ ಅವರನ್ನು ಈ ಮದುವೆಗೆ ಸಾಕ್ಷಿಯಾಗಿ ಬಳಸಿಕೊಳ್ಳಿ. ಇನ್ನು ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಿಕೊಳ್ಳುವಾಗ ಈ ಪ್ರಕ್ರಿಯೆಯಲ್ಲಿ ನೋಂದಾವಣಿಗೆ ಸುಮಾರು 30 ನಿಮಿಷಗಳ ಅವಧಿ ಬೇಕಾಗುತ್ತದೆ
A new Rule for the newly married couple, biometric is mandatory
Follow us On
Google News |